ಚೆನ್ನೈ,ಸೆ.16- ಪ್ರತಿಯೊಂದು ಧರ್ಮವು ನಂಬಿಕೆ ಮೇಲೆಯೆ ಸ್ಥಾಪಿತವಾಗಿದೆ. ಹೀಗಾಗಿ ನಾವು ಮಾತನಾಡುವಾಗ ಯಾವುದೇ ಧಾರ್ಮಿಕ ವಿಷಯಗಳಲ್ಲಿ ಇನ್ನೊಬ್ಬರಿಗೆ ನೋವಾಗದಂತೆ ಮಾತನಾಡಬೇಕೆಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ನಂಬಿಕೆಯ ಧರ್ಮದ ತಳಹದಿ. ಎಲ್ಲ ಧರ್ಮಗಳು ಕೂಡ ಇದರಿಂದಲೇ ಸ್ಥಾಪಿತವಾಗಿದೆ ಎಂಬುದನ್ನು ಮರೆಯಬಾರದು. ಧರ್ಮಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ವಾಕ್ ಸ್ವಾತಂತ್ರ್ಯವನ್ನು ಪ್ರಯೋಗಿಸಿದಾಗ ನಮ್ಮ ಮಾತು ಯಾರಿಗೂ ಕೂಡ ನೋವುಂಟು ಮಾಡಬಾರದೆಂದು ಅಭಿಪ್ರಾಯಪಟ್ಟಿದೆ.
ಇತ್ತೀಚೆಗೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪುತ್ರ ಹಾಗು ಸಚಿವ ಉದಯನಿ ಸ್ಟಾಲಿನ್, ಸನಾತನ ಧರ್ಮ ಕುರಿತಂತೆ ನೀಡಿದ್ದ ವಿವಾದದಾತ್ಮಕ ಹೇಳಿಕೆ ದೇಶಾದ್ಯಂತ ಚರ್ಚೆಯನ್ನು ಹುಟ್ಟು ಹಾಕಿತ್ತು.
ಸಾರ್ವಜನಿಕರೇ ಸೈಬರ್ ಕ್ರೈಂ ಬಗ್ಗೆ ಎಚ್ಚರವಹಿಸಿ
ಇದರ ಬೆನ್ನಲ್ಲೇ ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿ ಶೇಷಸಾಯಿ ಅವರಿದ್ದ ಏಕಸದಸ್ಯ ಪೀಠ ಸನಾತನ ಧರ್ಮವು ರಾಷ್ಟ್ರಕ್ಕೆ, ರಾಜನಿಗೆ, ತಂದೆ-ತಾಯಿಗಳಿಗೆ, ಗುರುಗಳಿಗೆ, ಬಡವರ ಬಗ್ಗೆ ಕಾಳಜಿ ವಹಿಸುವುದು ಸೇರಿದಂತೆ ಶಾಶ್ವತ ಕರ್ತವ್ಯಗಳ ಒಂದು ಭಾಗವಾಗಿದೆ ಎಂದು ಒತ್ತಿಹೇಳಿದೆ.
ಸನಾತನ ಧರ್ಮ ಕುರಿತಂತೆ ನಡೆಯುತ್ತಿರುವ ವಾದ- ಪ್ರತಿವಾದಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನ್ಯಾಯಮೂರ್ತಿಗಳು, ಸನಾತನ ಧರ್ಮವು ಕೇವಲ ಜಾತೀಯತೆ ಮತ್ತು ಅಸ್ಪಶ್ಯತೆಯನ್ನು ಉತ್ತೇಜಿಸುತ್ತದೆ ಎಂಬ ಆರೋಪವನ್ನು ಅವರು ಒಪ್ಪಲಿಲ್ಲ.
ಸಮಾನ ನಾಗರಿಕರ ದೇಶದಲ್ಲಿ ಅಸ್ಪೃಶ್ಯತೆ ಸಹಿಸಲಾಗುವುದಿಲ್ಲ . ಸನಾತನ ಧರ್ಮದ ತತ್ವಗಳೊಳಗೆ ಎಲ್ಲೋ ಅನುಮತಿಸಲಾಗಿದೆ ಎಂದು ನೋಡಿದರೂ, ಸಂವಿಧಾನದ 17ನೇ ವಿ ಅಸ್ಪೃಶ್ಯತೆಯನ್ನು ನಿಷೇಸಿದೆ. ಹಾಗಾಗಿ ಇಲ್ಲಿ ಅಸಮಾನತೆ ಆಚರಣೆಗೆ ಅವಕಾಶವೇ
ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ವಾಕ್ ಸ್ವಾತಂತ್ರ್ಯವು ಸಂವಿಧಾನದ ಮೂಲಭೂತ ಹಕ್ಕಾಗಿದ್ದರೂ, ಅದು ದ್ವೇಷದ ಭಾಷಣವಾಗಿ ಬದಲಾಗಬಾರದು ವಿಶೇಷವಾಗಿ ಒಂದು ಧರ್ಮದ ವಿಷಯದಲ್ಲಿ ಯಾರ ಮನಸ್ಸಿಗೂ ನೋವಾಗದಂತೆ ಮಾತನಾಡಬೇಕುಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
#MadrasHighCourt, #SanatanaDharma,