ಚೆನ್ನೈ,ಡಿ.10- ನೀವು ಇಷ್ಟು ದಿನ ಪೂಜೆ ಮಾಡಿದ ವಿಗ್ರಹ ಹಿಂದೂ ದೇವರಲ್ಲ. ಅದು ಬುದ್ಧನ ಶಿಲ್ಪ, ಹೀಗಾಗಿ ಇನ್ಮುಂದೆ ನೀವು ಆ ದೇವರನ್ನು ಪೂಜಿಸುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿರುವ ತಲೈವೆಟ್ಟಿ ಮುನಿಯಪ್ಪನ್ ದೇವಾಲಯದಲ್ಲಿ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಪೂಜೆ, ಆಚರಣೆಗಳನ್ನು ನಿಷೇಧ ಮಾಡಿ, ಮಾತ್ರವಲ್ಲ ದೇವಾಲಯದ ಪ್ರಾಂಗಣದಲ್ಲಿ ಬುದ್ಧನ ಶಿಲ್ಪ ಇರುವ ಕುರಿತು ನಾಮಫಲಕ ಆಳವಡಿಸುವಂತೆಯೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.
ಇಡೀ ಊರಿನ ಜನರು ದೇವಾಲಯದಲ್ಲಿರುವ ದೇವರನ್ನು ತಲೈವೆಟ್ಟಿ ಮುನಿಯಪ್ಪನ್ ಎಂದು ಪೂಜಿಸುತ್ತಿದ್ದರು. 2011ರಲ್ಲಿ ಸೇಲಂನ ಪಿ. ರಂಗನಾಥನ್ ಮತ್ತು ಬುದ್ಧ ಟ್ರಸ್ಟ್‍ನವರು ತಲವೆಟ್ಟಿ ಮುನಿಯಪ್ಪನ್ ದೇವಾಲಯವನ್ನು ಬೌದ್ಧರ ಕ್ಷೇತ್ರವಾಗಿದೆ ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತು 2017 ರಲ್ಲಿ ನ್ಯಾಯಾಲಯ ಪುರಾತತ್ವ ಇಲಾಖೆಗೆ ತನಿಖೆ ಕೈಗೊಳ್ಳುವಂತೆ ಸೂಚನೆ ನೀಡಿತ್ತು.
ಪಂಜಾಬ್‍ನ ಪೊಲೀಸ್ ಠಾಣೆಯ ಮೇಲೆ ರಾಕೆಟ್ ಚಾಲಿತ್ ಗ್ರೇನೆಡ್ ದಾಳಿ
ನ್ಯಾಯಾಲಯದ ಸೂಚನೆ ಆಧರಿಸಿ ಪುರಾತತ್ತ್ವ ಶಾಸ್ತ್ರ ಇಲಾಖೆ ತಲೈವೆಟ್ಟಿ ಮುನಿಯಪ್ಪನ್ ದೇಗುಲದ ಕುರಿತು ನಡೆಸಿದ ತನಿಖೆ ಕೈಗೊಂಡ ಪುರಾತತ್ವ ಇಲಾಖೆ ದೇಗುಲದಲ್ಲಿರುವ ದೇವರ ಮೂರ್ತಿಯು ಬುದ್ಧನ ಮೂರ್ತಿಯ ಲಕ್ಷಣಗಳನ್ನು ಹೋಲುತ್ತದೆ ಎಂದು ನ್ಯಾಯಾಲಯಕ್ಕೆ ವರದಿ ನೀಡಿತ್ತು.
ದೇವರ ಮೂರ್ತಿಯು ಕಮಲದ ಮೇಲೆ ಕುಳಿತು ಅರ್ಧಪದ್ಮಾಸನ ಮುದ್ರೆಯಲ್ಲಿದೆ. ಅಲ್ಲದೇ, ಇತರೆಡೆ ಬುದ್ಧನ ಮೂರ್ತಿಗಳಿಗೆ ಇರುವಂತೆ ಗುಂಗುರು ಕೂದಲನ್ನು ಹೊಂದಿದೆ. ಹೀಗಾಗಿ ಮೂರ್ತಿಯ ಎಲ್ಲ ಲಕ್ಷಣಗಳನ್ನೂ ಆಧರಿಸಿ ಅದು ತಲವೆಟ್ಟಿ ಮುನಿಯಪ್ಪನ್ ದೇವರಲ್ಲ, ಬದಲಿಗೆ, ಬುದ್ಧನ ವಿಗ್ರಹ ಎಂದು ಪುರಾತತ್ತ್ವ ಇಲಾಖೆ ವರದಿಯಲ್ಲಿ ಉಲ್ಲೇಖಿಸಿತ್ತು.
ವಿವಾದಕ್ಕೆ ಎಡೆ ಮಾಡಿಕೊಟ್ಟ ಪವನ್ ಕಲ್ಯಾಣ್ ಪ್ರಚಾರ ರಥದ ಬಣ್ಣ
ಈ ವರದಿಯನ್ನು ಆಧರಿಸಿದ ನ್ಯಾಯಾಲಯ ಇನ್ಮೇಲೆ ತಲವೆಟ್ಟಿ ಮುನಿಯಪ್ಪನ್ ದೇವರು ಎಂದು ಪೂಜಿಸುವಂತಿಲ್ಲ. ಈ ದೇವಸ್ಥಾನದಲ್ಲಿರುವ ದೇವರನ್ನು ಬುದ್ಧನ ವಿಗ್ರಹ ಎಂದೇ ಪೂಜಿಸಬಹುದು ಎಂದು ತೀರ್ಪಿತ್ತಿದೆ. ಜೊತೆಗೆ ದೇಗುಲದಲ್ಲಿ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಯಾವುದೇ ಪೂಜೆ, ಆಚರಣೆಗಳನ್ನು ನಡೆಸದಿರುವಂತೆ ನಿರ್ದೇಶನ ನೀಡಿದೆ.
ಸಿನಿಮೀಯ ರೀತಿಯಲ್ಲಿ ಯುವತಿ ಅಪಹರಿಸಿದ ನೂರಕ್ಕೂ ಹೆಚ್ಚು ಯುವಕರು
ಈ ಪ್ರಕರಣದಿಂದಾಗಿ ವಾರಣಾಸಿಯ ಜ್ಞಾನವಾಪಿ ಮಸೀದಿ ಮತ್ತು ಮಥುರಾದ ಶಾಹಿ ಈದ್ಗಾ ಮಸೀದಿಯಂತಹ ಮಸೀದಿ-ಮಂದಿರ ವಿವಾದಗಳಿಗೆ ಈ ಪ್ರಕರಣದ ಹೋಲಿಕೆ ಮಾಡಿ ಹಲವು ರೀತಿಯ ಚರ್ಚೆ ಆರಂಭವಾಗಿದೆ. ತಲವೆಟ್ಟಿ ಮುನಿಯಪ್ಪನ್ ದೇವಸ್ಥಾನದ ಕುರಿತು ಕೋರ್ಟ್ ನೀಡಿದ ತೀರ್ಪು ಈ ಪ್ರಕರಣಗಳ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಚರ್ಚೆಗಳೂ ಶುರುವಾಗಿದೆ.
Madras, High Court, verdict, Thalaivetti Muniyappan, Buddhist,