6.20 ಲಕ್ಷ ಮೌಲ್ಯದ ಆಭರಣ ವಶ

Social Share

ಬೆಂಗಳೂರು, ನ.25- ಹಗಲು ವೇಳೆ ಬೀಗ ಹಾಕಿರುವ ಮನೆಗಳಲ್ಲಿ ಕಳವು ಮಾಡುತ್ತಿದ್ದ ಹಳೆ ಆರೋಪಿಯೊಬ್ಬನನ್ನು ಮಾಗಡಿರಸ್ತೆ ಠಾಣೆ ಪೊಲೀಸರು ಬಂಧಿಸಿ 6.20 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜಾಜೀನಗರದ ಪ್ರಕಾಶ್ ನಗರ ನಿವಾಸಿ ಮಂಜುನಾಥ ಅಲಿಯಾಸ್ ಮಂಜು(40) ಬಂಧಿತ ಆರೋಪಿ.

ಈತನಿಂದ 115 ಗ್ರಾಂ ತೂಕದ ಚಿನ್ನದ ವಡವೆಗಳು, 30 ಗ್ರಾಂ ಬೆಳ್ಳಿ ಕಾಲುಚೈನು, 1 ಐಫೋನ್, 1 ಪಾಸ್ಟ್ ರ್ಯಾಕ್, 2 ಟೈಮೆಕ್ಸ್ ಕೈ ಗಡಿಯಾರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಯ ಬಂಧನದಿಂದ ನಂದಿನಿ ಲೇಔಟ್ ಠಾಣೆಯ ಎರಡು ಪ್ರಕರಣ, ಮಹಾಲಕ್ಷ್ಮೀಲೇಔಟ್, ಆಡುಗೋಡಿ, ಕಲಾಸಿಪಾಳ್ಯಠಾಣೆಯ ತಲಾ ಒಂದು ಪ್ರಕರಣಗಳು, ಚಾಮರಾಜಪೇಟೆ, ಬಾಣಸವಾಡಿ, ಯಶವಂತಪುರ ಠಾಣೆ ತಲಾ ಎರಡು ಪ್ರಕರಣಗಳು, ಶ್ರೀರಾಮಪುರ, ಜೆ.ಪಿ.ನಗರ, ಕೊಡಿಗೇಹಳ್ಳಿ, ಹುಳಿಮಾವು ಠಾಣೆಯ ತಲಾ ಒಂದು ಪ್ರಕರಣಗಳು ಪತ್ತೆಯಾದಂತಾಗಿದೆ.

ಗಡಿ ವಿಷಯದಲ್ಲಿ ಪುಂಡಾಟಿಕೆ ಸಹಿಸಲ್ಲ : ಸಿಎಂ ಬೊಮ್ಮಾಯಿ ಎಚ್ಚರಿಕೆ

ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ಬಿ. ನಿಂಬರಗಿ ಮಾರ್ಗದರ್ಶನದಲ್ಲಿ ವಿಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರವಿ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ರಾಜು ಅವರ ನೇತೃತ್ವದ ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸಿ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಏಕನಾಥ್ ಶಿಂಧೆಗೆ ಕರ್ನಾಟಕ ಸಿಎಂ ವಿರುದ್ಧ ಮಾತನಾಡುವ ಧೈರ್ಯವಿಲ್ಲ: ಠಾಕ್ರೆ

Magadi Road Police, 6.20 lakh, Jewelery, seized,

Articles You Might Like

Share This Article