ಮಾಗಡಿ ರಸ್ತೆ ನಿವಾಸಿಗಳಿಗೆ ಗುಡ್ ನ್ಯೂಸ್, ಮೆಟ್ರೋ 3ನೇ ಹಂತಕ್ಕೆ ಗ್ರೀನ್ ಸಿಗ್ನಲ್

Social Share

ಬೆಂಗಳೂರು,ನ.4- ಕೆಂಪಾಪುರ ಹಾಗೂ ಮಾಗಡಿ ರಸ್ತೆ ನಿವಾಸಿಗಳಿಗೊಂದು ಸಿಹಿ ಸುದ್ದಿ. ಈ ಮಾರ್ಗದಲ್ಲಿ ನಮ್ಮ ಮೆಟ್ರೋ 3ನೆ ಹಂತದ ಜಾರಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಮೂರನೆ ಹಂತದ ಮೆಟ್ರೊ ರೈಲು ಯೋಜನೆ ಅನುಷ್ಠಾನಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದ್ದು, ಒಂದೆರಡು ವಾರದಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಿದೆ ಎಂದು ಮೆಟ್ರೋ ಮೂಲಗಳು ಖಚಿತಪಡಿಸಿವೆ.

ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಗೆ ಕಡಿವಾಣ ಹಾಕುವ ಉದ್ದೇಶ ಹಾಗೂ ಸಾರ್ವಜನಿಕ ಪ್ರಯಾಣಿಕ ಸೇವೆಯನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರ ಈ ಮಹತ್ವದ ತೀರ್ಮಾನ ಕೈಗೊಂಡಿದೆ.

ಪಶ್ಚಿಮದ ಹೊರ ವರ್ತುಲ ರಸ್ತೆಯಲ್ಲಿ ಕೆಂಪಾಪುರದಿಂದ ಜೆ.ಪಿ.ನಗರದ 4ನೆ ಹಂತದ ತನಕ 32.16 ಕಿಲೋ ಮೀಟರ್ ಹಾಗೂ ವಿಜಯನಗರದ ಹೊಸಹಳ್ಳಿ ಮೆಟ್ರೋ ನಿಲ್ದಾಣದಿಂದ ಮಾಗಡಿ ರಸ್ತೆಯ ಕಡಬಗೆರೆ ಜಂಕ್ಷನ್ವರೆಗಿನ 12.82 ಕಿಲೋ ಮೀಟರ್ ಉದ್ದದ ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ.

ಬಿಬಿಎಂಪಿ ಶಾಲಾ ಶಿಕ್ಷಕರಿಗೆ ‘ಫಾರಿನ್ ಟೂರ್’ ಭಾಗ್ಯ

ನಮ್ಮ ಮೆಟ್ರೋ 3ನೇ ಹಂತಕ್ಕೆ ಬೇಕಾಗುವ 16,368 ಕೋಟಿ ವೆಚ್ಚದ ಹಣದಲ್ಲಿ ಶೇ.60 ಭಾಗವನ್ನು ರಾಜ್ಯ ಸರ್ಕಾರ ಹಾಗೂ ಉಳಿದ ಶೇ.20ರಷ್ಟನ್ನು ಕೇಂದ್ರ ಸರ್ಕಾರ ಭರಿಸಲಿವೆ.ಮೂರನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ದೊರೆತ ಕೂಡಲೆ ಕಾಮಗಾರಿ ಆರಂಭಿಸಿ ಐದು ವರ್ಷಗಳ ಅವಯಲ್ಲಿ ಯೋಜನೆ ಅನುಷ್ಠಾನಗೊಳಿಸಲು ಚಿಂತಿಸಲಾಗಿದೆ.

ನಿರೀಕ್ಷೆಯಂತೆ ಐದು ವರ್ಷಗಳ ಅವಯಲ್ಲಿ ಮೂರನೆ ಹಂತದ ಮೆಟ್ರೋ ಯೋಜನೆ ಪೂರ್ಣಗೊಂಡರೆ ಕಾಮಕ್ಷಿಪಾಳ್ಯ, ಕೊಟ್ಟಿಗೆಪಾಳ್ಯ, ಸುಂಕದಕಟ್ಟೆ, ದೊಡ್ಡಗೊಲ್ಲರಹಟ್ಟಿ, ಮಾಚೋಹಳ್ಳಿ, ಕಡಬಗೆರೆ ವೃತ್ತದವರೆಗಿನ ವಾಹನ ದಟ್ಟಣೆಗೆ ಕಡಿವಾಣ ಬೀಳಲಿದೆ. ಅದೇ ರೀತಿ ಕೆಂಪಾಪುರ ರಸ್ತೆಯ ಸಂಚಾರಿ ದಟ್ಟಣೆಗೆ ಮುಕ್ತಿ ದೊರೆಯುವ ಸಾಧ್ಯತೆಗಳಿವೆ.

Articles You Might Like

Share This Article