ನ್ಯೂಜಿಲ್ಯಾಂಡ್, ಮಾ.16- ನ್ಯೂಜಿಲ್ಯಾಂಡ್ ಉತ್ತರ ಭಾಗದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಉತ್ತರ ಭಾಗದಲ್ಲಿರುವ ಕೆಮಾರ್ಡೆಕ್ ದ್ವೀಪ ಪ್ರದೇಶದಲ್ಲಿ ಇಂದು ಬೆಳಗ್ಗೆ 6.40ರ ಸುಮಾರಿಗೆ ರಿಕ್ಟರ್ ಮಾಪನದಲ್ಲಿ 7.1 ತೀವ್ರತೆ ಕಂಪನ ಉಂಟಾಗಿದೆ ಎಂದು ಯುನಿಟೆಡ್ ಸ್ಟೇಟ್ ಜಿಯಾಲಜಿಕಲ್ ಸರ್ವೆ ಹೇಳಿದೆ.
ಭೂಕಂಪವು ದ್ವೀಪ ಪ್ರದೇಶದ 10 ಕಿಲೋ ಮೀಟರ್ ಆಳದಲ್ಲಿ ಸಂಭವಿಸಿದೆ. ಸುಮಾರು 300 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕರಾವಳಿ ಪ್ರದೇಶಗಳಿಗೆ ಅಪಾಯಕಾರಿ ಸುನಾಮಿಗಳು ಉಂಟಾಗುವ ಎಚ್ಚರಿಕೆ ನೀಡಲಾಗಿದೆ.
ನ್ಯೂಜಿಲ್ಯಾಂಡ್ಗೆ ಯಾವುದೇ ಸುನಾಮಿ ಭೀತಿ ಇಲ್ಲ. ತುರ್ತು ಸಂದರ್ಭ ಗಳಿದ್ದರೆ ದೇಶದ ರಾಷ್ಟ್ರೀಯ ತುರ್ತು ನಿರ್ವಾಹಣ ಸಂಸ್ಥೆಯನ್ನು ಸಂಪರ್ಕಿಸ ಬಹುದೆಂದು ಸಂಸ್ಥೆ ಹೇಳಿದೆ.
ಗಿಫ್ಟ್ ಮನವೊಲಿಸಲು ಬಂದ ಜನಪ್ರತಿನಿಗಳ ವಿರುದ್ಧ ಆಕ್ರೋಶ
ಆಸ್ಟ್ರೇಲಿಯಾಕ್ಕೆ ಯಾವುದೇ ಸುನಾಮಿ ಭೀತಿ ಇಲ್ಲ ಎಂದು ಆಸ್ಟ್ರೇಲಿಯಾ ಹವಾಮಾನ ಇಲಾಖೆ ತಿಳಿಸಿದೆ.ಇತ್ತೀಚೆಗೆ ಜಗತ್ತಿನ ವಿವಿಧಡೆ ಭೂಕಂಪನಗಳು ಸಂಭವಿಸಿವೆ. ಟರ್ಕಿಯಲ್ಲಿ ಭಾರಿ ಪ್ರಮಾಣ ಕಂಪನ ಉಂಟಾಗಿ 40 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇದೀಗ ನ್ಯೂಜಿಲ್ಯಾಂಡ್ ದ್ವೀಪದಲ್ಲಿ ಪ್ರಾಕೃತಿಕ ವಿಕೋಪ ವರದಿಯಾಗಿರುವುದು ಆತಂಕ ಸೃಷ್ಟಿಸಿದೆ.
#7.1Magnitude, #Earthquake, #hits #NewZealand, #KermadecIslands, #TsunamiAlert,