ಪುಣೆ, ಜು.10 – ಆಷಾ ಏಕಾದಶಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ತಮ್ಮ ಪತ್ನಿಯೊಂದಿಗೆ ಪಂಢರಪುರ ಪಟ್ಟಣದ ಐತಿಹಾಸಿಕ,ಪ್ರಸಿದ್ಧ ವಿಠ್ಠಲ -ರುಕ್ಮಿಣಿ ದೇವಸ್ಥಾನದಲ್ಲಿ ಮಹಾಪೂಜೆ ನೆರವೇರಿಸಿದ್ದಾರೆ. ಸಮಾಜದ ಪ್ರತಿಯೊಂದು ವರ್ಗದ ಏಳಿಗೆಯಾಗಲಿ ಎಂದು ಪ್ರತಿ ವರ್ಷವೂ ಮುಖ್ಯಮಂತ್ರಿಗಳು ಆಷಾ ಏಕಾದಶಿ ಯಂದು ಪ್ರಾರ್ಥನೆ ಸಲ್ಲಿಸುವುದು ವಾಡಿಕೆ.
ಸೋಲಾಪುರ ಜಿಲ್ಲೆಯ ಪಂಢರಪುರದಲ್ಲಿರುವ ವಿಠ್ಠಲ ದೇವಾಲಯದಲ್ಲಿಇಂದು ವಿಷೇಶ ಫೂಜೆಗಳು ನಡೆಯಲಿವೆ . ಜೂನ್ 30 ರಂದು ಮಹಾರಾಷ್ಟ್ರದ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಏಕನಾಥ್ ಶಿಂಧೆ ಅವರು ಇಂದು ತಮ್ಮ ಪತ್ನಿ ಲತಾ ಅವರೊಂದಿಗೆ ಶ್ರಧ್ದಾ ಭಕ್ತಿಯಿಂದ ರೈತರು, ಕಾರ್ಮಿಕರು, ವಾರ್ಕರಿಗಳು (ವಿಠ್ಠಲನ ಭಕ್ತರು)ಪೂಜೆ ಸಲ್ಲಿಸಿದರು. ವ್ಯಾಪಾರ ಸಮುದಾಯ ಸೇರಿದಂತೆ ಸಮಾಜದ ಪ್ರತಿಯೊಂದು ವರ್ಗಕ್ಕೂ ದೇವರನ್ನು ಪ್ರಾರ್ಥಿಸಿ, ಸಂತೋಷ ಮತ್ತು ಸಮೃದ್ಧಿಯಾಗಲಲ ಎ.ದು ಪ್ರಾರ್ಥಿಸಿದ್ದೇನೆ ಎಂದರು .
ರೈತರ ಆತ್ಮಹತ್ಯೆ ತಡೆಯಲು ಮಹಾರಾಷ್ಟ್ರ ಸರ್ಕಾರ ಬದ್ಧವಾಗಿದೆ, ಅದಕ್ಕಾಗಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು. ಸ್ವಾಮಿ ವಿಠ್ಠಲನ ಆಶೀರ್ವಾದದಿಂದ ಈ ಸರ್ಕಾರ ಶ್ರೀಸಾಮಾನ್ಯನದ್ದಾಗಿದ್ದು ಜನರ ಎಲ್ಲಾ ದುಃಖ-ಕಷ್ಟಗಳು ದೂರವಾಗುತ್ತವೆ, ರೈತರು, ಕಾರ್ಮಿಕರು, ಸಮಾಜದ ಎಲ್ಲಾ ವರ್ಗದ ಜನರು ಈ ಸರ್ಕಾರ ತಮ್ಮದು ಎಂದು ಭಾವಿಸಬೇಕು. ನಮ್ಮ ಕೆಲಸದ ಮೂಲಕ ಅಂತಹ ಭಾವನೆ ಮೂಡಿಸಲು ಪ್ರಯತ್ನಿಸುತ್ತೇವೆಮದರು.
ಈ ವರ್ಷ ಪೂಜೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಸಿಎಂ ಹೇಳಿದರು. ಕಳೆದ ಎರಡು ವರ್ಷಗಳಿಂದ, ಕೋವಿಡ್ ಪರಿಸ್ತಿತಿ ಹಿನ್ನಲೆಯಲ್ಲಿ ಕಾಲ್ನಡಿಗೆಯ ವಾರಿ ಯಾತ್ರೆ ಸಾಧ್ಯವಾಗಲಿಲ್ಲ, ಆದರೆ ಈ ಬಾರಿ ವಿಠ್ಠಲನ ಆಶೀರ್ವಾದ ಪಡೆಯಲು 10 ಲಕ್ಷಕ್ಕೂ ಹೆಚ್ಚು ಯೋಧರು ಆಗಮಿಸಿದ್ದಾರೆ ಎಂದು ಅವರು ಹೇಳಿದರು.
ಕೋವಿಡ್ ಬಿಕ್ಕಟ್ಟು ದೂರವಾಗಲಿದ್ದು, ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳು ಬಗೆಹರಿಯಲಿವೆ ಎಂದು ಭರವಸೆ ವ್ಯಕ್ತಪಡಿಸಿದರು. ರಾಜ್ಯವನ್ನು ಪ್ರಗತಿ, ಸರ್ವತೋಮುಖ ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವುದು ಮತ್ತು ಜನರಿಗೆ ಒಳ್ಳೆಯ ದಿನಗಳು ತರುವುದು ರಾಜ್ಯ ಸರ್ಕಾರದ ಪ್ರಯತ್ನವಾಗಿದೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ಸ್ವಲ್ಪ ತಡವಾಗಿಯಾದರೂ ಉತ್ತಮ ಮಳೆಯಾಗುತ್ತಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಿಎಂ ಪುತ್ರ ಸಂಸದ ಶ್ರೀಕಾಂತ್ ಶಿಂಧೆ ಮತ್ತು ಅವರ ಕುಟುಂಬದವರು ಸಹ ಅವರ ಜೊತೆಗಿದ್ದರು. 1987ರಿಂದ ಪಂಢರಪುರ ವಾರಿ ಯಾತ್ರೆಯಲ್ಲಿ ರೈತ ಕುಟುಂಬ ಭಾಗವಹಿಸುತ್ತಿದೆ ಆದ್ದರಿಂದ ಬೀಡ್ ಜಿಲ್ಲೆಯ 52 ವರ್ಷದ ರೈತ ಮುರಳಿ ನವ್ಲೆ ಮತ್ತು ಅವರ ಪತ್ನಿ ಜೀಜಾಬಾಯಿ ಅವರು ಸಿಎಂ ಮತ್ತು ಅವರ ಕುಟುಂಬದೊಂದಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು.