ಮಹದಾಯಿ ಯೋಜನೆಗೆ ಅನುಮೋದನೆ ಸಿಗುವುದಾಗಿ ಕಾರಜೋಳ ವಿಶ್ವಾಸ

Social Share

ನವದೆಹಲಿ,ಡಿ.13- ರಾಜ್ಯದ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ರವರು ಇಂದು ನವ ದೆಹಲಿಯಲ್ಲಿ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಕೇಂದ್ರದಲ್ಲಿ ಬಾಕಿ ಇರುವ ಅನುಮೋದನೆಗಳನ್ನು ದೊರಕಿಸಿ ಕೊಡುವಂತೆ ವಿನಂತಿಸಿದರು.

ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ನಿವಾಸದಲ್ಲಿ ಇಂದು ಮುಂಜಾನೆ ಈ ಮಹತ್ವದ ಸಭೆ ನಡೆಯಿತು. ರಾಜ್ಯದ ಪ್ರಮುಖ ಯೋಜನೆಗಳಾದ ಮಹದಾಯಿ, ಮೇಕೆದಾಟು, ಕೃಷ್ಣ ಮೇಲ್ದಂಡೆ ಕುರಿತು ಮಹತ್ವದ ಚರ್ಚೆ ನಡೆಯಿತು. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಅನುಮೋದನೆ ನೀಡುವಂತೆ ಕೋರಲಾಯಿತು.

ಆಸ್ಟ್ರೇಲಿಯಾದಲ್ಲಿ ಗುಂಡಿನ ಚಕಮಕಿ, 6 ಜನರ ಸಾವು

ಭದ್ರ ಮೇಲ್ದಂಡೆ ಯೋಜನೆಯ ಪ್ರಸ್ತಾವನೆ ಅಂತಿಮ ಹಂತದಲ್ಲಿದ್ದು, ಈ ಯೋಜನೆಗೆ ಮುಂದಿನ ಕೇಂದ್ರ ಸಚಿವ ಸಂಪುಟದ ಸಭೆಯಲ್ಲಿ ಅನುಮೋದನೆ ದೊರೆಯುವ ವಿಶ್ವಾಸವಿದೆಯೆಂದು ಗೋವಿಂದ್ ಕಾರಜೋಳ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಾಗಿಲಲ್ಲಿ ಆರ್‌ಆರ್‌ಆರ್‌

ಮಹದಾಯಿ ಯೋಜನೆಯ ಅನುಮೋದನೆ ಆದಷ್ಟು ಬೇಗ ದೊರಕುವ ನಿರೀಕ್ಷೆ ಇದೆ ಎಂದು ಸಚಿವರು ತಿಳಿಸಿದ್ದಾರೆ.

Mahadayi Water Project, Minister Govind Karjol,

Articles You Might Like

Share This Article