ನವಿ ಮುಂಬೈನಲ್ಲಿ ಅಕ್ರಮವಾಗಿ ತಂಗಿದ್ದ 5 ಬಾಂಗ್ಲಾದೇಶಿ ಪ್ರಜೆಗಳ ಬಂಧನ

ಥಾಣೆ, ಆ.11: ಮಹಾರಾಷ್ಟ್ರದ ನವಿ ಮುಂಬೈ ಟೌನ್‌ಶಿಪ್‌ನಲ್ಲಿ ಅಕ್ರಮವಾಗಿ ತಂಗಿದ್ದ ಆರೋಪದ ಮೇಲೆ ಐವರು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಕ್ಕ ಸುಳಿವಿನ ಮೇರೆಗೆ ನವಿ ಮುಂಬೈ ಪೊಲೀಸರ ಮಾನವ ಕಳ್ಳಸಾಗಣೆ ವಿರೋಧಿ ಸೆಲ್‌ ಕೋಪರ್ಖೈನೆರ್‌ ಪ್ರದೇಶದ ವಸತಿ ಕಟ್ಟಡದ ಮೇಲೆ ದಾಳಿ ನಡೆಸಿ ನಾಲ್ವರು ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಅವರು ನಕಲಿ ದಾಖಲೆಗಳನ್ನು ಬಳಸಿ ಭಾರತಕ್ಕೆ ಪ್ರವೇಶಿಸಿರುವುದು ಬೆಳಕಿಗೆ ಬಂದಿದೆ ಎಂದು ಕೋಪರ್ಖೈನೆರ್‌ ಪೊಲೀಸ್‌‍ ಠಾಣೆಯ ಅಧಿಕಾರಿಯೊಬ್ಬರು … Continue reading ನವಿ ಮುಂಬೈನಲ್ಲಿ ಅಕ್ರಮವಾಗಿ ತಂಗಿದ್ದ 5 ಬಾಂಗ್ಲಾದೇಶಿ ಪ್ರಜೆಗಳ ಬಂಧನ