41 ದಿನಗಳ ನಂತರ ಸಂಪುಟ ವಿಸ್ತರಣೆಗೆ ಮುಂದಾದ ಮಹಾ ಸಿಎಂ ಶಿಂಧೆ

Social Share

ಮುಂಬೈ, ಆ.9 – ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ 41 ದಿನಗಳ ನಂತರ ಇಂದು ಸಚಿವ ಸಂಪುಟವನ್ನು ವಿಸ್ತರಿಸಲಿದ್ದಾರೆ. ಜೂನ್ 30 ರಂದು ಶಿಂಧೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು ಮತ್ತು ದೇವೇಂದ್ರ ಫಡ್ನವಿಸ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ದಕ್ಷಿಣ ಮುಂಬೈನ ರಾಜಭವನದಲ್ಲಿ ಬೆಳಗ್ಗೆ 11 ಗಂಟೆಗೆ ನಡೆದ ಸಮಾರಂಭ 6 ಜನ ಮಾತ್ರ ಸಂಪುಟ ಸೇರಲಿದ್ದಾರೆ.
ಶಿಂಧೆ ಗುಂಪಿನಿಂದ ಭರತ್ ಗೊಗವಾಲೆ ಮತ್ತು ಶಂಭುರಾಜ್ ದೇಸಾಯಿ ಹೆಸರು ಕೇಳಿಬರುತ್ತಿದೆ.

ಬಿಜೆಪಿಯಿಂದ ರಾಜ್ಯ ಪಕ್ಷದ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್, ಸುದೀರ್ ಮುಂಗಂಟಿವಾರ್, ಗಿರೀಶ್ ಮಹಾಜನ, ರಾಧಾಕೃಷ್ಣ ವಿಖೆ ಪಾಟೀಲ್, ಸುರೇಶ್ ಖಾಡೆ ಮತ್ತು ಅತುಲ್ ಸೇವ್ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಳೆದ ಒಂದು ತಿಂಗಳಲ್ಲಿ ಸಿಎಂ ಶಿಂಧೆ ಏಳು ಬಾರಿ ನವದೆಹಲಿಗೆ ಭೇಟಿ ನೀಡಿದ್ದು, ಪ್ರತಿ ಭೇಟಿಯಲ್ಲೂ ಸಚಿವ ಸಂಪುಟ ವಿಸ್ತರಣೆ ಆಗುತ್ತಿದೆ ಎಂಬ ಮಾತು ಕೇಳಿ ಬರುತ್ತಿತ್ತು

Articles You Might Like

Share This Article