ಮಹಾರಾಷ್ಟ್ರದಲ್ಲಿ ಮೊಟ್ಟೆಗಳ ಕೊರತೆ

Social Share

ಔರಂಗಾಬಾದ್, ಜ.18- ದೇಶಾದ್ಯಂತ ಮೊಟ್ಟೆಯ ಬೆಲೆ ಏರಿಕೆಯಾಗಿರುವ ಬೆನ್ನಲ್ಲೆ ಮಹಾರಾಷ್ಟ್ರದಲ್ಲಿ ಒಂದು ಕೋಟಿ ಮೊಟ್ಟೆಗಳ ಕೊರತೆ ಎದುರಾಗಿದೆ ಎಂದು ಪಶುಸಂಗೋಪನಾ ಇಲಾಖೆ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ದಿನಕ್ಕೆ 2.25 ಕೋಟಿಗೂ ಹೆಚ್ಚು ಮೊಟ್ಟೆಗಳನ್ನು ಸೇವಿಸಲಾಗುತ್ತದೆ. ರಾಜ್ಯದಲ್ಲಿ ಪ್ರತಿದಿನ ಒಂದರಿಂದ ಒಂದುವರೆ ಕೋಟಿ ಮೊಟ್ಟೆಗಳನ್ನು ಉತ್ಪಾದಿಸಲಾಗುತ್ತದೆ. ಬಾಕಿ ಒಂದು ಕೋಟಿ ಮೊಟ್ಟೆಗಳ ಬೇಡಿಕೆ ಇದೆ. ಇದನ್ನು ಪೂರೈಸಲು ಪಶುಸಂಗೋಪನಾ ಇಲಾಖೆ ಯೋಜನೆ ಎಂದು ಇಲಾಖೆಯ ಹೆಚ್ಚುವರಿ ಆಯುಕ್ತ ಡಾ.ಧನಂಜಯ್ ಪರ್ಕಳೆ ತಿಳಿಸಿದ್ದಾರೆ.

ಸದ್ಯಕ್ಕೆ ಮೊಟ್ಟೆ ಕೊರತೆ ನೀಗಿಸಲು ಕರ್ನಾಟಕ, ತೆಲಂಗಾಣ, ತಮಿಳುನಾಡು ರಾಜ್ಯಗಳಿಂದ ಮೊಟ್ಟೆ ಖರೀದಿಸಲಾಗುತ್ತಿದೆ. ರಾಜ್ಯದಲ್ಲೇ ಮೊಟ್ಟೆ ಉತ್ಪಾದನೆ ಹೆಚ್ಚಿಸಲು ಪ್ರತಿ ಜಿಲ್ಲೆಗೆ ಒಂದು ಸಾವಿರ ಪಂಜರಗಳೊಂದಿಗೆ 50 ವೈಟ್ ಲೆಗಾರ್ನ್ ಕೋಳಿಗಳನ್ನು ಸಬ್ಸಿಡಿ ದರದಲ್ಲಿ ನೀಡಲು ಚಿಂತನೆ ನಡೆದಿದೆ.

ಎರಡುವರೆ ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ವಶ

ಈ ಯೋಜನೆಯ ಮಂಜೂರಾತಿಗೆ ಆರ್ಥಿಕ ಇಲಾಖೆಯ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಎರಡು ತಿಂಗಳ ಹಿಂದೆ 100 ಮೊಟ್ಟೆಗಳಿಗೆ 500 ರೂಪಾಯಿ ಬೆಲೆ ಇತ್ತು, ಪ್ರಸ್ತುತ ಅದು 575 ರೂ.ಗಳಾಗಿದೆ ಎಂದು ಮೊಟ್ಟೆ ಸಗಟು ವ್ಯಾಪಾರಿ ಅಬ್ದುಲ್ ವಾಹಿದ್ ಶಾ ತಿಳಿಸಿದ್ದಾರೆ.

Maharashtra, facing, shortage, 1 crore, eggs, day,

Articles You Might Like

Share This Article