ಮಾಜಿ ಸಿಎಂ ಸೇರಿ ಮಹಾರಾಷ್ಟ್ರ ರಾಜಕೀಯ ಮುಖಂಡರ Z+ ಭದ್ರತೆ ಕಡಿತ

Social Share

ಮುಂಬೈ, ಅ.29- ಮಹಾರಾಷ್ಟ್ರದಲ್ಲಿ ಕೆಲವು ರಾಜಕೀಯ ಪಕ್ಷಗಳ ಮುಖಂಡರುಗಳಿಗೆ ನೀಡಲಾಗಿದ್ದ ಪೊಲೀಸ್ ಭದ್ರತೆಯನ್ನು ಕಡಿತಗೊಳಿಸಲಾಗಿದೆ. ಅದರಲ್ಲೂ ಕಾಂಗ್ರೆಸ್, ಎನ್‍ಸಿಪಿ ಹಾಗೂ ಉದ್ದವ್ ಠಾಕ್ರೆ ಬಣದ ಹಲವಾರು ಹಿರಿಯ ನಾಯಕರುಗಳಿಗೆ ನೀಡಲಾಗಿದ್ದ ಭದ್ರತೆಯನ್ನು ಶಿಂಧೆ ಸರ್ಕಾರ ಕಡಿತಗೊಳಿಸಿದೆ.

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಪಕ್ಷ ಮತ್ತು ಉದ್ಧವ್ ಠಾಕ್ರೆ ಬಣದ ಹಲವು ಹಿರಿಯ ನಾಯಕರ ಭದ್ರತೆಗೆ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿಯನ್ನು ಶಿಂಧೆ-ಫಡ್ನವೀಸ್ ಸರ್ಕಾರ ತೆಗೆದುಹಾಕಿದೆ. ಎನ್‍ಸಿಪಿ ನಾಯಕರಾದ ಅಜಿತ್ ಪವಾರ್ ಮತ್ತು ದಿಲೀಪ್ ವಾಲ್ಸೆ ಪಾಟೀಲ್ ಅವರ ಭದ್ರತೆಯನ್ನು ‘ಝಡ್ ಪ್ಲಸ್ ವರ್ಗದಿಂದ ‘ವೈ-ಪ್ಲಸ್ ಗೆ ಇಳಿಸಲಾಗಿದೆ.

ಪಾಕಿಸ್ತಾನವನ್ನು ಗ್ರೇ ಲಿಸ್ಟ್ ನಿಂದ ಮುಕ್ತಗೊಳಿಸುವ ಮುನ್ನ ಪರಾಮರ್ಶಿಸಬೇಕು : ಭಾರತ

ಅನಿಲ್ ದೇಶಮುಖ್, ಛಗನ್ ಭುಜಬಲ, ಬಾಳಾಸಾಹೇಬ್ ಥೋರಟ್, ನಿತಿನ್ ರಾವುತ್, ನಾನಾ ಪಟೋಲೆ, ಜಯಂತ್ ಪಾಟೀಲ, ಸಂಜಯ್ ರಾವುತ್, ವಿಜಯ್ ವಾಡೆತ್ತಿವಾರ್, ಧನಂಜಯ್ ಮುಂಡೆ, ನವಾಬ್ ಮಲಿಕ್, ನರಹರಿ ಜೀರ್ವಾಲ, ಸುನೀಲ್ ಕೇದಾರ್, ಅಸ್ಲಂ ಶೇಖ್, ಅನಿಲ್ ಪರಬ್ ಮತ್ತು ಇತರ ನಾಯಕರ ಪೊಲೀಸ್ ಭದ್ರತೆಯನ್ನು ಕಡಿಮೆ ಮಾಡಲಾಗಿದೆ.

Articles You Might Like

Share This Article