ಮಹಾರಾಷ್ಟ್ರ ರಾಜ್ಯದಲ್ಲಿ 9.02 ಕೋಟಿಗೂ ಹೆಚ್ಚು ಮತದಾರು

Social Share

ಮುಂಬೈ, ಜ- 6 -ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಂತರ ಮಹಾರಾಷ್ಟ್ರ ರಾಜ್ಯದಲ್ಲಿ 9.02 ಕೋಟಿಗೂ ಹೆಚ್ಚು ಮತದಾರರಿದ್ದಾರೆ ಎಂದು ಹಿರಿಯ ಹಿರಿಯ ಅಕಾರಿಯೊಬ್ಬರು ತಿಳಿಸಿದ್ದಾರೆ.

ಪರಿಷ್ಕøತ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಲಾಗಿದೆ. ಆದರೆ ಕಳೆದ 2022ರ ನ. 9, ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯ ಪ್ರಕಾರ, 8,98,42,301 ಮತದಾರರಿದ್ದರು. ನಂತರ 9,21,453 ಮತದಾರರು ಹೊಸದಾಗಿ ಸೇರ್ಪಡೆಗೊಂಡರೆ ಇದೇ ವೇಳೆ ಸಾಮ್ಯತೆ ಇದ್ದ 4,77,953 ಹೆಸರುಗಳನ್ನು ಅಳಿಸಲಾಗಿದೆ.

ವಿಶೇಷ ಪರಿಷ್ಕರಣೆ ಪ್ರಕಾರ ಮಹಾರಾಷ್ಟ್ರವು 9,02,85,801 ಮತದಾರರನ್ನು ಹೊಂದಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಶ್ರೀಕಾಂತ್ ದೇಶಪಾಂಡೆ ತಿಳಿಸಿದ್ದಾರೆ.

ಭಾರತ-ನೇಪಾಳ ಗಡಿಯಲ್ಲಿ ನಾಲ್ವರು ಡ್ರಗ್ಸ್ ಕಳ್ಳಸಾಗಣೆದಾರರ ಬಂಧನ

2023ರ ಜನವರಿ 1ಕ್ಕೆ 18 ವರ್ಷ ಪೂರೈಸಬೇಕಿದ್ದ ಮತದಾರರನ್ನು ಕೂಡ ಸೇರ್ಪಡೆಗೊಳಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಪೂರಕ ಪರಿಷ್ಕರಣೆಗಳು ಅಥವಾ ರೋಲ್‍ಗಳ ನವೀಕರಣವು ಈ ವರ್ಷದ ಏಪ್ರಿಲï, ಜುಲೈ ಮತ್ತು ಅಕ್ಟೋಬರ್‍ನಲ್ಲಿ ನಡೆಯಲಿದೆ ಎಂದು ಹೇಳಿದರು.

Maharashtra, 9.02 crore, voters,

Articles You Might Like

Share This Article