ಬೆಳಗಾವಿ,ಡಿ. 7- ಗಡಿ ವಿವಾದ ಇನ್ನೂ ತಣ್ಣಗಾಗುವಂತೆ ಕಾಣುತ್ತಿಲ್ಲ. ಮತ್ತೆ ಬೆಳಗಾವಿ ಹಾಗೂ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಪ್ರತಿಭಟನೆಗಳು ಮುಂದುವರೆದಿದ್ದು, ಬಸ್ ಹಾಗೂ ಲಾರಿಗಳಿಗೆ ಮಸಿ ಬಳಿಯಲಾಗುತ್ತಿದೆ.
ಎರಡೂ ರಾಜ್ಯಗಳ ನಡುವೆ ಸಾರಿಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಇಂದು ಬೆಳಗ್ಗೆ ಕೆಎಸ್ಆರ್ಟಿಸಿ ಬಸ್ ಸೇವೆಯನ್ನು ನಿಲ್ಲಿಸಲಾಗಿತ್ತು. ಮಧ್ಯಾಹ್ನ ವೇಳೆಗೆ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯೂ ಕೂಡ ಕರ್ನಾಟಕಕ್ಕೆ ಹೋಗುವ ಬಸ್ಗಳ ಸೇವೆಯನ್ನು ಸ್ಥಗಿತಗೊಳಿಸಿದೆ.
ಇದರ ನಡುವೆ ಎಂಇಎಸ್ ಪುಂಡರು ಬೆಳಗಾವಿಯ ಬಸ್ ಡಿಪೋಗಳಲ್ಲಿ ರಾತ್ರಿ ಕೆಎಸ್ಆರ್ಟಿಸಿ ಬಸ್ಗಳಿಗೆ ಮಸಿ ಬಳಿದು ದರ್ಪ ತೋರಿಸಿದ್ದಾರೆ. ಇದನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಮತ್ತೆ ಬೀದಿಗಿಳಿದು ಪ್ರತಿಭಟನೆ ನಡೆಸಿವೆ.
ಡ್ರಾಮಾ ನೋಡಿದ ವಿದ್ಯಾರ್ಥಿಗಳನ್ನು ಗುಂಡಿಟ್ಟು ಕೊಲ್ಲಿಸಿದ ಕ್ರೂರಿ ಕಿಮ್
ಮಹಾರಾಷ್ಟ್ರ ಭಾಗದಿಂದ ಬರುವ ವಾಹನಗಳನ್ನು ತಡೆದು ಧಿಕ್ಕಾರ, ಘೋಷಣೆ ಕೂಗಲಾಗುತ್ತಿದೆ. ಯಾವುದೇ ಕಾರಣಕ್ಕೂ ಶಿವಸೇನೆ ಹಾಗೂ ಎಂಇಎಸ್ನ ಪುಂಡಾಟಿಕೆ ಮುಂದುವರೆಸಿದರೆ ಕನ್ನಡಿಗರು ಸುಮ್ಮನಿರುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ
ಎರಡೂ ರಾಜ್ಯದ ಪೊಲೀಸರು ಗಡಿ ಭಾಗದಲ್ಲಿ ನಿಂತು ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸ ಪಟ್ಟಿದ್ದಾರೆ. ಆದರೆ ಎರಡೂ ಕಡೆಗಳಲ್ಲೂ ಪ್ರತಿಭಟನೆ ಜೋರಾಗಿದೆ.
#Maharashtra, #Karnataka, #Borde,r #Dispute, #Bus, #Service,