ಪಾಲ್ಘರ್, ಡಿ 7- ಸರ್ಕಾರಿ ಯೋಜನೆಯಡಿ ಮನೆ ನಿರ್ಮಿಸುವ ವಿಚಾರದಲ್ಲಿ ಕುಟುಂಬದಲ್ಲಿ ಜಗಳ ನಡೆದು 50 ವರ್ಷದ ತಾಯಿಯನ್ನು ಥಳಿಸಿ ಮಗ ಕೊಲೆ ಮಾಡಿರುವ ಘಟನೆ ಜಿಲ್ಲೆಯ ವಿಕ್ರಮಗಡ ಪ್ರದೇಶದಲ್ಲಿ ನಡೆದಿದೆ.
ಘಟನೆಗೆ ಸಂಬಂದಿಸಿದಂತ ಆರೋಪಿಯನ್ನು ಇಂದು ಬೆಳಿಗ್ಗೆ ಬಂಧಿಸಲಾಗಿದೆ.
ಕಳೆದ ರಾತ್ರಿ ಆರೋಪಿ ಮುದಲು ತನ್ನ ತಂದೆಯೊಂದಿಗೆ ಜಗಳ ಥಳಿಸಿದ್ದ. ಈ ಸಂದರ್ಭದಲ್ಲಿ ತಡಯಲು ಬಂದ ತಾಯಿಯ ಮೇಲೂ ಪ್ರಹಾರ ನಡೆಸಿ ನಂತರ ಛಾವಣಿಯ ಹೆಂಚಿನಿಂದ ಹೊಡೆದು ಹತ್ಯೆಗೈದಿದ್ದಾನೆ ಎಂದು ಪೊಲೀಸ್ ಅಧಿಕಾರಿ ಸಚಿನ್ ನಾವಡಕರ್ ತಿಳಿಸಿದ್ದಾರೆ.
ಮೊದಲ ಹಂತದ ಜೆಡಿಎಸ್ ಪಂಚರತ್ನ ರಥಯಾತ್ರೆಗೆ ತೆರೆ
ಘಟನೆಯ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿ ಗಾಯಾಳು ತಂದೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ರಕ್ತದ ಮುಡುವಿನಲ್ಲಿ ಬಿದ್ದಿದ್ದ ತಾಯಿ ಶವ ಕಂಡ ಸ್ಥಳೀಯರು ಕಣೀರು ಹಾಕಿದ್ದಾರೆ.
ವಿಶ್ವ ಬಂಡವಾಳ ಹೂಡಿಕೆ ಸಮಾವೇಶ : ಮುಂದಿನ 5 ವರ್ಷಗಳಲ್ಲಿ ಶೇ.75ರಷ್ಟು ಯೋಜನೆ ಅನುಷ್ಠಾನ
ಮಗನ ಕ್ರೌರ್ಯದ ಬಗ್ಗೆ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.
Maharashtra, Man, Kills, Mother,