ಮಹಾರಾಷ್ಟ್ರ ಸಚಿವರು ಜತ್ ಜನರ ಮನವೊಲಿಸಲಿ: ಹೆಚ್‌ಡಿಕೆ

Social Share

ದೇವನಹಳ್ಳಿ,ನ.29- ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬಂದು ಮಾತನಾಡುವುದಕ್ಕಿಂತ ಮಹಾರಾಷ್ಟ್ರದ ಸಾಂಗ್ಲಿ ಜತ್ತ ತಾಲ್ಲೂಕಿನ ಜನರ ಮನವೊಲಿಸುವುದು ಸೂಕ್ತ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ದೇವನಹಳ್ಳಿ ತಾಲ್ಲೂಕಿನ ಆಲೂರುದುದ್ದನ ಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಸಚಿವರು ಬೆಳಗಾವಿ ಯಲ್ಲಿನ ಮರಾಠ ಸಂಘಟನೆಗಳೊಂದಿಗೆ ಮಾತನಾಡಲು ಆಗಮಿಸುವುದಕ್ಕಿಂತ ಜತ್ತ ಹಾಗು ಸಾಂಗ್ಲಿ ತಾಲ್ಲೂಕಿನ ಜನರ ಮನವೊಲಿಸಲು ಹೋಗಬೇಕು ಎಂದರು.

ಬೆಳಗಾವಿಯಲ್ಲಿ ಎಂಇಎಸ್ ಜೊತೆ ಚರ್ಚೆ ಮಾಡುವುದಲ್ಲ ಎಂದ ಅವರು, ಜತ್ತಿ ಮತ್ತು ಸಾಂಗ್ಲಿ ಭಾಗದ ಜನರು ಕರ್ನಾಟಕಕ್ಕೆ ಸೇರಲು ಬಯಸುತ್ತಿದ್ದಾರೆ ಎಂದು ಹೇಳಿದರು.

BIG NEWS: ಬೆಂಗಳೂರಿನಲ್ಲಿ ಸಾಮೂಹಿಕ ಅತ್ಯಾಚಾರ, ಮೂವರ ಬಂಧನ

ಉನ್ನತ ಶಿಕ್ಷಣ ಸಚಿವರು ರಕ್ತಪಿಪಾಸು ಎಂದು ಹೇಳಿದ್ದಾರೆ. ಅದು ಯಾರನ್ನು ಕುರಿತು ಹೇಳಿದ್ದಾರೆ ಎಂಬುದರ ಬಗ್ಗೆ ತಿಳುವಳಿಕೆ ಇಲ್ಲ. ನಿನ್ನೆ ಅವರ ಪಕ್ಷಕ್ಕೆ ಸೇರಿಸಿಕೊಂಡವರ ಇತಿಹಾಸವನ್ನು ನೋಡಿದರೆ ಯಾರೂ ರಕ್ತಪಿಪಾಸುಗಳು ಎಂಬುದು ಗೊತ್ತಾಗಲಿದೆ ಎಂದು ತಿರುಗೇಟು ನೀಡಿದರು.

ಶ್ರೀಮಂತರ ಗ್ರಾಫ್ ಮೇಲೆ ಏರುತ್ತಿದ್ದು, ಬಡವರು ಹಾಗೆಯೇ ಉಳಿದಿದ್ದಾರೆ. ಉಳ್ಳವರು ನಿತ್ಯ ಖರ್ಚು ಮಾಡಲು ಹಿಂದುಮುಂದು ನೋಡುವುದಿಲ್ಲ. ಆದರೆ ಆರೋಗ್ಯ, ಶಿಕ್ಷಣ ಸೇರಿದಂತೆ ಹಲವು ಸಮಸ್ಯೆಗಳನ್ನು ಹೇಳಿಕೊಂಡು ನಿತ್ಯವು ಬಡಜನರು ಬರುತ್ತಿದ್ದಾರೆ ಎಂದರು.

1,25,000 ಕೋಟಿ ರೂ. ವೆಚ್ಚದ ಪಂಚರತ್ನ ಎಂಬ ಕ್ರಿಯಾಯೋಜನೆ ಸಿದ್ದಪಡಿಸಿದ್ದು, ನಮ್ಮ ಪಕ್ಷಕ್ಕೆ ಅಧಿಕಾರ ನೀಡಿದರೆ 5 ವರ್ಷಗಳಲ್ಲಿ ಆಧಿ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.

ಕಾಶ್ಮೀರಿ ಫೈಲ್ಸ್ 2.0 ಚಿತ್ರ ಮಾಡಿ: ಸಂಜಯ್ ರಾವತ್ ಸವಾಲು

ಈಗಾಗಲೇ ಪಂಚರತ್ನ ರಥಯಾತ್ರೆಯನ್ನು ಮಾ.25ರವರೆಗೂ ಮುಂದುವರೆಸಲಾಗುವುದು ಎಂದ ಅವರು, ಪಂಚರತ್ನ ಘೋಷಣೆಯನ್ನು ನಾವು ಸುಮ್ಮನೆ ಮಾಡುತ್ತಿಲ್ಲ. ಜೆಡಿಎಸ್‍ಗೆ ಬಹುಮತ ಬರುವುದಿಲ್ಲ ಎಂದು
ಟೀಕೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಈಗಾಗಲೇ ನಮ್ಮ ಪಕ್ಷದ ಪರವಾದ ಅಲೆ ಸೃಷ್ಟಿಯಾಗುತ್ತಿದೆ.

ವಿದ್ಯಾರ್ಥಿ ವೇತನ ಸ್ಥಗಿತ: ಕೇಂದ್ರದ ತೊಘಲಕ್ ನಿರ್ಧಾರದ ವಿರುದ್ಧ ಸುರ್ಜೆವಾಲ ಆಕ್ರೋಶ

ಹಳ್ಳಿ ಹಳ್ಳಿಯಲ್ಲೂ ಜನರ ಬೆಂಬಲ ದೊರೆಯುತ್ತಿದ್ದು, ನಮ್ಮ ಪಕ್ಷದ ಒಬ್ಬ ಸಾಮಾನ್ಯ ಯುವಕ ಸ್ರ್ಪಧಿಸಿದರೂ ಗೆಲ್ಲುವ ಅವಕಾಶವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಿನ್ನೆ 20 ಗಂಟೆಗಳ ಕಾಲ ಯಾತ್ರೆ ಸಾಗಿದೆ ಎಂದು ಅವರು ಹೇಳಿದರು.

Maharashtra, Minister, Belgaum, Jatta Taluk, hd kumaraswamy,

Articles You Might Like

Share This Article