ರಾಜ್ಯದ ರೈತರಿಗೆ ಕಣ್ಣೀರು ತರಿಸುತ್ತಿದೆ ಮಹಾರಾಷ್ಟ್ರದ ಈರುಳ್ಳಿ

Social Share

ಬೆಂಗಳೂರು, ನ.9- ಮಹಾರಾಷ್ಟ್ರದಿಂದ ನಿರೀಕ್ಷೆಗೂ ಮೀರಿ ಮಾರುಕಟ್ಟೆಗೆ ಬರುತ್ತಿದ್ದು, ರಾಜ್ಯದ ರೈತರು ಬೆಳೆದ ಬೆಳೆಗೆ ಮಾತ್ರ ಉತ್ತಮ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಬೆಳೆಯಲಾಗಿದ್ದ ಭಾರೀ ಪ್ರಮಾಣದ ಬೆಳೆ ನಾಶವಾಗಿದ್ದು, ಗುಣಮಟ್ಟದ ಈರುಳ್ಳಿ ಪೂರೈಕೆಯಾಗದ ಕಾರಣ ಮಹಾರಾಷ್ಟ್ರದಿಂದ ಈರುಳ್ಳಿ ಆಮದಾಗುತ್ತಿದೆ. ಇದರಿಂದ ರಾಜ್ಯದ ರೈತರು ಬೆಳೆದ ಈರುಳ್ಳಿಗೆ ಸೂಕ್ತ ಬೆಲೆ ದೊರೆಯುತ್ತಿಲ್ಲ.

ಯಶವಂತಪುರದ ಎಪಿಎಂಸಿ ಮಾರುಕಟ್ಟೆಗೆ ಮಹಾರಾಷ್ಟ್ರ ದಿಂದ ಭಾರೀ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿದೆ. ಇದರಿಂದಾಗಿ ರಾಜ್ಯದ ರೈತರು ಬೆಳೆದ ಈರುಳ್ಳಿಗೆ ಉತ್ತಮ ಬೆಲೆ ಸಿಗದೆ ಕಂಗಾಲಾಗಿದ್ದಾರೆ.

ಅಪಪ್ರಚಾರಗಳಿಂದ ನೊಂದಿರುವೆ : ನೋವು ತೋಡಿಕೊಂಡ ರಶ್ಮಿಕ ಮಂದಣ್ಣ

ಪ್ರತಿ ವರ್ಷವೂ ಇದೇ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೈತರ ಸರ್ಕಾರ ಎಂದು ಹೇಳುತ್ತಿರುವ ಬಿಜೆಪಿ ರೈತರನ್ನು ಕಡೆಗಣನೆ ಮಾಡಿದೆ. ಹೊರರಾಜ್ಯಗಳಿಂದ ಆಮದಾಗುತ್ತಿರುವ ಈರುಳ್ಳಿಯನ್ನು ನಿಲ್ಲಿಸಿ ರಾಜ್ಯದ ರೈತರು ಬೆಳೆದ ಈರುಳ್ಳಿಗೆ ಸೂಕ್ತ ಬೆಲೆ ದೊರಕಿಸುವಂತೆ ಬೆಳೆಗಾರರು ಆಗ್ರಹಿಸಿದ್ದಾರೆ.

ಮತ್ತೊಮ್ಮೆ ದಕ್ಷಿಣ ಕೊರಿಯಾದತ್ತ ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ

ಸಗಟು ವ್ಯಾಪಾರದಲ್ಲಿ ಕೆಜಿಗೆ 30 ರಿಂದ 40ರೂ.ಗೆ ಮಾರಾಟವಾಗುತ್ತಿದೆ. ಕ್ವಿಂಟಾಲ್‍ಗೆ 600ರೂ. ನಿಂದ 800 ರೂ.ಗೆ ಇಳಿಕೆಯಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

Articles You Might Like

Share This Article