ಮುಂಬೈ,ಡಿ.3- ಪ್ಲಾಸ್ಟಿಕ್ ಜಾಗತಿಕ ವೈರಿಯಾಗಿದ್ದು ಹಲವು ದೇಶಗಳು ಇದರ ಮೇಲೆ ನಿಷೇಧ ಹೇರಿವೆ. ಭಾರತದಲ್ಲೂ ಬಹುತೇಕ ರಾಜ್ಯಗಳು ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿವೆ. ಸುಪ್ರೀಂಕೋರ್ಟ್ ಪದೇ ಪದೇ ಪ್ಲಾಸ್ಟಿಕ್ ಬಳಕೆ ನಿರ್ಬಂಧಗಳ ಕುರಿತು ಪ್ರಸ್ತಾಪಿಸುತ್ತಲೇ ಇದೆ. ಈ ನಡುವೆ ಮಹಾರಾಷ್ಟ್ರ ಸರ್ಕಾರ ಕರಗಬಹುದಾದ ಪ್ಲಾಸ್ಟಿಕ್ನಿಂದ ಕೆಲ ವಸ್ತುಗಳ ತಯಾರಿಕೆಗೆ ಅನುಮತಿ ನೀಡಿದೆ.
ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ನೇತೃತ್ವದಲ್ಲಿ ನಡೆದ ಸಮಿತಿ, ಏಕಬಳಕೆಯ ಪ್ಲಾಸ್ಟಿಕ್ ನೀತಿಯನ್ನು ಪರಿಷ್ಕರಣೆ ಮಾಡಿದೆ. ಮಹಾರಾಷ್ಟ್ರದ ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಕಾರ್ಯದರ್ಶಿ ಪ್ರವೀಣ್ ದರಡೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಪದೇ ಪದೇ ಹೈಟೆನ್ಷನ್ ಅವಘಡ : ನಿವಾಸಿಗಳಿಗೆ ಬೆಸ್ಕಾಂ ನೋಟೀಸ್
ಕೊಳೆಯ ಬಹುದಾದ ಪ್ಲಾಸ್ಟಿಕ್ನಿಂದ ಸ್ಟ್ರಾ, ಪ್ಲೇಟ್, ಕಪ್ಗಳು ಸೇರಿದಂತೆ ಸಾರ್ವಜನಿಕವಾಗಿ ಬಹುಬೇಡಿಕೆಯ ವಸ್ತುಗಳ ತಯಾರಿಕೆಗೆ ಅನುಮತಿ ನೀಡಬೇಕು ಎಂಬುದು ಹಲವು ದಿನಗಳ ಒತ್ತಾಯವಾಗಿತ್ತು. ಅದಕ್ಕೆ ಮುಖ್ಯಮಂತ್ರಿ ನೇತೃತ್ವದ ಸಮಿತಿ ಅನುಮತಿ ನೀಡಿದೆ ದರಡೆ ತಿಳಿಸಿದ್ದಾರೆ.
ಭಾರತ್ ಜೋಡೊ ಯಾತ್ರೆ : ರಾಹುಲ್ಗೆ ಮತ್ತೆ ಹೈಕೋರ್ಟ್ ನೋಟಿಸ್
ಆದರೆ ತಯಾರಕರು ಉತ್ಪಾದನೆಗೂ ಮೊದಲು ಕೇಂದ್ರ ಪ್ಲಾಸ್ಟಿಕ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ ಹಾಗೂ ಕೇಂದ್ರ ಮಾಲೀನ್ಯ ನಿಯಂತ್ರಣ ಮಂಡಳಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಸರ್ಕಾರದ ನಿರ್ಧಾರದಿಂದ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಕರಿಗೆ ಸಹಾಯವಾಗಲಿದೆ ಎಂದಿದ್ದಾರೆ.
ಮಹಾರಾಷ್ಟ್ರ ಸರ್ಕಾರ 2018ರಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಮೇಲೆ ನಿಷೇಧ ಜಾರಿ ಮಾಡಿತ್ತು.
Maharashtra, revises, plastic, ban, lifts, curbs,