ಮುಂಬೈ,ಡಿ.15- ಶ್ರದ್ಧಾ ಹತ್ಯೆ ಪ್ರಕರಣದ ನಂತರ ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರ ಸರ್ಕಾರ ಅಂತರ್ ಧರ್ಮಿಯ ಮತ್ತು ಅಂತರ್ಜಾತಿ ವಿವಾಹದ ಜೊಡಿಗಳು ಹಾಗೂ ಲೀವಿಂಗ್ ಟುಗೇದರ್‍ನಲ್ಲಿದ್ದು ಅವರ ಕುಟುಂಬ ವರ್ಗದವರಿಂದ ದೂರವಿರುವವರ ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ.
ಶ್ರದ್ಧಾ ಹತ್ಯೆಯಂತಹ ಪ್ರಕರಣಗಳು ರಾಜ್ಯದಲ್ಲಿ ಮರುಕಳಿಸಬಾರದು ಎಂಬ ಉದ್ದೇಶದಿಂದ ನಮ್ಮ ಸರ್ಕಾರ ಇಂತಹ ವಿಶಿಷ್ಠ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸಚಿವ ಮಂಗಲ್ ಪ್ರಭಾತ್ ಲೋದಾ ತಿಳಿಸಿದ್ದಾರೆ.
ಆಫ್ತಾಬ್ ಪೂನಾವಾಲಾನಿಂದ ಶ್ರದ್ಧಾ ಕೊಲೆಯಾದ ನಂತರ ಅಂತಧರ್ಮಿಯ ವಿವಾಹದ ವಿವಾದಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಸರ್ಕಾರ ಸಮಿತಿ ರಚನೆ ಮಾಡಿದ್ದು, ಶೀಘ್ರದಲ್ಲೇ ಸಹಾಯವಾಣಿ ಬರಲಿದೆ. ಶ್ರದ್ಧಾ ಅವರ ತಂದೆ ಫಡ್ನವಿಸ್ ಅವರನ್ನು ಭೇಟಿಯಾದ ಮರುದಿನ, ಮಹಾ ಸರ್ಕಾರವು ಅಂತರ್ಧರ್ಮೀಯ ವಿವಾಹಗಳ ಮೇಲಿನ ಕುಂದುಕೊರತೆಗಳಿಗೆ ಸಮಿತಿಯನ್ನು ರಚಿಸಲು ತೀರ್ಮಾನಿಸಿದೆ.
ಅಮೆರಿಕ ಸಂಸತ್ತಿನ ಮೊದಲ ಮಹಿಳಾ ಸ್ಪೀಕರ್ ಪೆಲೋಸಿಗೆ ಬೀಳ್ಕೊಡುಗೆ
ತಮ್ಮ ಕುಟುಂಬದಿಂದ ದೂರವಾಗಿ ಅನ್ಯಧರ್ಮಿಯರೊಂದಿಗೆ ವಿವಾಹವಾಗುವ ಮಹಿಳೆಯರ ಮಾಹಿತಿ ಸಂಗ್ರಹಕ್ಕೆ ಜಿಲ್ಲಾ ಮಟ್ಟದ ಸಮಿತಿಯು ಮೇಲ್ವಿಚಾರಣೆ ಮಾಡುತ್ತದೆ, ಮಾತ್ರವಲ್ಲ ಅವರಿಗೆ ಅಗತ್ಯ ಸಹಕಾರ ನೀಡಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ಸಮಾಲೋಚನೆ ಪಡೆಯಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ವೇದಿಕೆಯಾಗಿದೆ, ಈ ವಿಷಯಕ್ಕೆ ಸಂಬಂಧಿಸಿದ ಕಲ್ಯಾಣ ಯೋಜನೆಗಳು ಮತ್ತು ಕಾನೂನುಗಳಿಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ನೀತಿಗಳನ್ನು ಅಧ್ಯಯನ ಮಾಡಲು ಸಮಿತಿಯು ಸರ್ಕಾರ ಮತ್ತು ಸರ್ಕಾರೇತರ ಕ್ಷೇತ್ರಗಳ 13 ಸದಸ್ಯರನ್ನು ಹೊಂದಿರುತ್ತದೆ.
ಮತಾಂತರಕ್ಕೆ ಪ್ರೇರಣೆ : 5 ಮಂದಿ ವಿರುದ್ಧ ಎಫ್‍ಐಆರ್
ಸಮಿತಿಯು ಜಿಲ್ಲಾ ಅಧಿಕಾರಿಗಳೊಂದಿಗೆ ನಿಯಮಿತ ಸಭೆಗಳನ್ನು ನಡೆಸುತ್ತದೆ ಮತ್ತು ನೋಂದಾಯಿತ ಮತ್ತು ನೋಂದಾಯಿಸದ ಅಂತರ್ ಧರ್ಮೀಯ ಮತ್ತು ಅಂತರ್ಜಾತಿ ವಿವಾಹಗಳ ಮಾಹಿತಿಯನ್ನು ಸಂಗ್ರಹಿಸುತ್ತದೆ,
ಶ್ರದ್ಧಾ ಅವರು ಕೊಲೆಯಾಗಿ ಆರು ತಿಂಗಳವರೆಗೆ ಈ ಮಾಹಿತಿ ಅವರ ಕುಟುಂಬಕ್ಕೆ ತಿಳಿದಿಲ್ಲ ಎಂಬ ಅಂಶವು ಭಯಾನಕವಾಗಿದೆ. ನಾವು ಇಂತಹ ಪ್ರಕರಣಗಳು ಮರುಕಳಿಸಬಾರದು ಎಂಬ ಉದ್ದೇಶದಿಂದ ಇಂತಹ ತೀರ್ಮಾನ ಕೈಗೊಂಡಿದ್ದೇವೆ ಎಂದು ಅವರು ವಿವರಣೆ ನೀಡಿದ್ದಾರೆ.
Maharashtra, sets, panel, track interfaith, intercaste, marriages,