ನಿಷೇಧಿತ ಗಾಳಿಪಟ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರ ವಿರುದ್ಧ ಕ್ರಮ

Social Share

ಥಾಣೆ,ಜ.17- ಗಾಳಿಪಟದಿಂದ ನೈಲಾನ್ ದಾರದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಬಳಿಕ ನಿಷೇಧಿತ ಮಾಂಜಾಗಳನ್ನು ದಾಸ್ತಾನು ಮಾಡಿ, ಮಾರಾಟ ಮಾಡಿದ್ದಕ್ಕಾಗಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಅಂಗಡಿ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಭಾನುವಾರ ರಾತ್ರಿ ಭಿವಾಂಡಿ ಪಟ್ಟಣದಲ್ಲಿ 47 ವರ್ಷದ ವ್ಯಕ್ತಿ ಮೋಟಾರ್ ಸೈಕಲ್‍ನಲ್ಲಿ ಮನೆಗೆ ಹೋಗುತ್ತಿದ್ದಾಗ ಗಾಳಿ ಪಟದ ನೈಲಾನ್ ದಾರ ಆತನ ಕುತ್ತಿಗೆ ಸುತ್ತಿಕೊಂಡಿದೆ. ಇದರಿಂದ ಅವರ ಅವರ ಕುತ್ತಿಗೆ ಸೀಳಿದ್ದು, ಅವರು ಮೃತಪಟ್ಟಿದ್ದರು.

ಬಳಿಕ ಈ ಪ್ರದೇಶದಲ್ಲಿ ಅಂಗಡಿಯವರೊಬ್ಬರು ನಿಷೇಧಿತ ನೈಲಾನ್ ದಾರದ ಗಾಳಿಪಟಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ವಿರುದ್ಧ ಕ್ರಮಗಳನ್ನು ಆರಂಭಿಸಿದ್ದಾರೆ.

ಅರಮನೆ ಮೈದಾನದಲ್ಲಿ ವಿಜೃಂಬಿಸಿದ ನಾರಿ ಶಕ್ತಿ

ಅಂಗಡಿಗಳ ಮೇಲೆ ದಾಳಿ ನಡೆಸಿ ನೈಲಾನ್ ದಾರದ ಗಾಳಿಪಟಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 188 (ಸಾರ್ವಜನಿಕ ಸೇವಕರು ಕಾನೂನುಬದ್ಧವಾಗಿ ಪ್ರಕಟಿಸಿದ ಆದೇಶಕ್ಕೆ ಅವಿಧೇಯತೆ), 290 (ಸಾರ್ವಜನಿಕ ತೊಂದರೆ) ಮತ್ತು 291 (ತಡೆಯಾಜ್ಞೆ ನಂತರವೂ ಉಪದ್ರವವನ್ನು ಮುಂದುವರೆಸುವುದು) ಅಡಿಯಲ್ಲಿ ಅಂಗಡಿಯ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರೆಗೂ ಯಾರನ್ನು ಬಂಧಿಸಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Maharashtra, Three booked, sale, nylon, kite, strings, Thane,

Articles You Might Like

Share This Article