ನಾಗಪುರ್: ಮಹರಾಷ್ಟ್ರದ ಇಬ್ಬರು ಮಹಿಳಾ ವೈದ್ಯರು ಸಲಿಂಗ ವಿವಾಹಕ್ಕೆ ತಯಾರಾಗಿದ್ದು, ಉಂಗುರ ಬದಲಾವಣೆ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಕಳೆದ ವಾರ ನಡೆದ ಸಮಾರಂಭ ತಡವಾಗಿ ಬೆಳಕಿಗೆ ಬಂದಿದೆ. ಮಹಿಳಾ ವೈದ್ಯರಾದ ಪರೋಮಿತ ಮುಖರ್ಜಿ ಮತ್ತು ಸುರಭಿ ಮಿತ್ರಾ ಅವರು ಪರಸ್ಪರ ಮದುವೆಯಾಗುವ ನಿರ್ಧಾರ ಮಾಡಿಕೊಂಡಿದ್ದಾರೆ.
ನಾವು ಇದನ್ನು ಜೀವನಾವಯ ಭಾಂದವ್ಯ ಬದ್ಧತೆ ಎಂದು ಕರೆಯುತ್ತೇವೆ. ಗೋವಾದಲ್ಲಿ ಮದುವೆಯಾಗಲು ಯೋಜಿಸುತ್ತಿದ್ದೇವೆ ಎಂದು ಇಬ್ಬರು ಹೇಳಿದ್ದಾರೆ.
ಪರೋಮಿತ ಮುಖರ್ಜಿ ಈ ಬಗ್ಗೆ ಹೇಳಿಕೆ ನೀಡಿ, ನನ್ನ ಲೈಂಗಿಕ ದೃಷ್ಠಿಕೋನದ ಬಗ್ಗೆ 2013ರಿಂದಲೂ ನನ್ನ ತಂದೆಗೆ ಮಾಹಿತಿ ಇತ್ತು. ಇತ್ತೀಚೆಗೆ ನನ್ನ ತಾಯಿಗೆ ವಿಷಯ ತಿಳಿಸಿದಾಗ ಆಕೆ ದಿಗ್ಮೂಢರಾದರು. ಆದರೆ ನಂತರ ಒಪ್ಪಿಕೊಂಡಿದ್ದಾರೆ. ಅಂತಿಮವಾಗಿ ನಾನು ಖುಷಿಯಾಗಿರುವುದನ್ನು ಆಕೆ ಬಯಸುತ್ತಾರೆ ಎಂದು ತಿಳಿಸಿದ್ದಾರೆ.
ನಾಗಪುರ ಸುರಭಿ ಮಿತ್ರ ಮಾತನಾಡಿದ್ದು, ನನ್ನ ಲೈಂಗಿಕ ದೃಷ್ಟಿ ಕೋನದ ಬಗ್ಗೆ ನಮ್ಮ ಕುಟುಂಬದಲ್ಲಿ ಯಾವುದೇ ವಿರೋಧ ಇಲ್ಲ. ನಾನು ಈ ವಿಷಯವನ್ನು ಪೋಷಕರಿಗೆ ತಿಳಿಸಿದಾಗ ಅವರು ಸಂತೋಷ ಪಟ್ಟರು. ನಾನು ಮಾನಸಿಕ ತಜ್ಞೆಯಾಗಿದ್ದು ಅನೇಕರ ಜೊತೆ ಮಾತನಾಡಿದಾಗ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗದೆ ಭಿನ್ನ ಲಿಂಗಿಯ ಜೊತೆ ಬದುಕು ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ನಾನು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಮರ್ಥಳಿದ್ದೇನೆ ಎಂದಿದ್ದಾರೆ.
