ಬೆಂಗಳೂರು, ಜ.30- ದೇಶದಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ನಂತರ ದೇಶದಲ್ಲಿ ನಡೆಯುತ್ತಿದ್ದ ಕೋಮುಗಲಭೆಗಳನ್ನು ತಡೆಯಲು ಯತ್ನಿಸಿದ್ದಕ್ಕಾಗಿ ಮಹಾತ್ಮ ಗಾಂಧಿಜೀ ಅವರನ್ನು ಹತ್ಯೆ ಮಾಡಲಾಯಿತು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರೋಪಿಸಿದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಹಾತ್ಮಗಾಂಧಿಜೀ ಅವರ 74 ಹುತಾತ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, 1946ರಲ್ಲಿ ಪಶ್ಚಿಮ ಬಂಗಾಳದ ನೌಕಾಲಿಯಲ್ಲಿ ದೊಡ್ಡ ಕೋಮು ಗಲಭೆಯಾಗಿತ್ತು.
ಗಾಂಧಿಜೀ ಒಬ್ಬರೆ ಅಲ್ಲಿಗೆ ಕೋಲು ಹಿಡಿದುಕೊಂಡು ಹೋಗಿ ಮನೆ ಮನೆಗೆ ಭೇಟಿ ನೀಡಿ ಸಮಾದಾನ ಮಾಡಿ ಗಲಭೆ ತಡೆಯುತ್ತಾರೆ. ಮುಸಲ್ಮಾನರು ದೇಶ ಬಿಟ್ಟು ಹೋಗದಂತೆ ತಡೆಯುತ್ತಾರೆ. ಸ್ವತಂತ್ರ್ಯ ನಂತವೂ ಕೋಮುಗಲಭೆಗಳಾದಾಗ ಅವನ್ನು ಗಾಂಧಿಜೀ ತಡೆಯುತ್ತಾರೆ. ಇದರಿಂದ ದ್ವೇಷ ಸಾಧಿಸಲು ಮತಾಂಧರು ಗಾಂಧಿಜೀಯನ್ನು ಕೊಂದಿದ್ದಾರೆ ಎಂದು ಆರೋಪಿಸಿದರು.
ಗಾಂಧಿಜೀಯನ್ನು ಕೊಂದಿದ್ದು ಹಿಂದು ಅಲ್ಲದೆ ಬೇರೆ ಧರ್ಮದವರಾಗಿದ್ದರೆ ದೇಶದಲ್ಲಿ ಏನಾಗುತ್ತಿತ್ತು ಎಂದು ವಿವರಿಸಲು ಕಷ್ಟ. ದೇಶ ವಿಭಜನೆಯಾದಾಗ ಲಾಹೂರ್‍ನಲ್ಲಿ ನಡೆದ ಅಮಾನವೀಯ ಕೃತ್ಯಗಳು ಭೀಕರವಾಗಿದ್ದವು. ಗಂಡದಿರನ್ನು ಕಟ್ಟಿ ಹಾಕಿ ಪತ್ನಿಯರ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಬಳಿಕ ಗಂಡದಿರನ್ನು ಕೊಚ್ಚಿ ಹಾಕುತ್ತಿದ್ದರು ಎಂದು ಬಹಳಷ್ಟು ಪುಸ್ತಕದಲ್ಲಿ ಉಲ್ಲೇಖವಾಗಿದೆ. ಗಾಂಧಿಜೀ ಅಂತಹ ಕಠಿಣ ಸಮಯದಲ್ಲಿ ಜನರನ್ನು ಸಮಾದಾನ ಮಾಡುತ್ತಿದ್ದರು. ಅದಕ್ಕೆ ಗಾಂಧಿಜೀಗೆ ಗಾಂಧಿಜೀಯೇ ಸಾಟಿ, ಅದಕ್ಕೆ ಅವರನ್ನು ಮಹಾತ್ಮ ಎಂದು ಕರೆಯುತ್ತಾರೆ ಎಂದು ಹೇಳಿದರು.
ಮಹಾತ್ಮ ಗಾಂಧಿಜೀ ಅವರ ನೇತೃತ್ವದಲ್ಲಿ ಅನೇಕ ಹೋರಾಟಗಾರರು ತ್ಯಾಗ ಬಲಿದಾನ ಮಾಡಿ ನಮಗೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಅವರು ಯಾರು ಅಧಿಕಾರಕ್ಕಾಗಿ ಹೋರಾಟ ಮಾಡಲಿಲ್ಲ. ಗುಲಾಮಗಿರಿಯಿಂದ ದೇಶ ಬಿಡುಗಡೆ ಮಾಡಬೇಕು, ನಮ್ಮದೆ ಆಡಳಿತ ಇರಬೇಕು ಎಂದು ಅಹಿಸಾಂತ್ಮಕ ಚಳವಳಿ ನಡೆಸಿದರು. ಸ್ವಾತಂತ್ರ್ಯ ದೊರೆತ ಐದು ತಿಂಗಳಲ್ಲಿ ಗಾಂಧಿಜೀ ಪ್ರಾರ್ಥನೆಗೆ ಹೋರಡುವಾಗ ಗೋಡ್ಸೆ ಮತ್ತು ಇತರರು ಕಾದು ಕುಳಿತು ಹತ್ಯೆ ಮಾಡುತ್ತಾರೆ.
ಗಾಂಧಿಜೀ ಅವರು ಮೊಮ್ಮಕ್ಕಳು ಎಂದು ಭಾವಿಸುವ ಮನುಗಾಂಧಿ ಮತ್ತು ಅಬು ಎಂಬ ಇಬ್ಬರು ಹೆಣ್ಣು ಮಕ್ಕಳ ಹೆಗಲ ಮೇಲೆ ಭಾರ ಇಟ್ಟುಕೊಂಡು ಓಡಾಡುತ್ತಿರುತ್ತಾರೆ. ಏನನ್ನು ನಿಲ್ಲಿಸಿದರೂ ಗಾಂಧಿಜೀ ಪ್ರಾರ್ಥನೆ ನಿಲ್ಲಿಸುತ್ತಿರಲಿಲ್ಲ. ಅದು ಗೋಡ್ಸೆ ಅವರಿಗೆ ಗೋತ್ತಿತ್ತು. ಕೃತ್ಯಕ್ಕಾಗಿ ದಾಮೋದರ ರಾಮಚಂದ್ರ ಬಗಡೆಯಿಂದ ಪಿಸ್ತೂಲ್ ಖರೀದಿ ಮಾಡುತ್ತಾರೆ.
ಗೋಡ್ಸೆ ಗಾಂಧಿ ಕಾಲಿಗೆ ಬೀಳುವಂತೆ ನಾಟಕವಾಡುತ್ತಾನೆ, ತಕ್ಷಣ ಮನುಗಾಂಧಿ ಮತ್ತು ಅಬು ತಡೆಯುತ್ತಾರೆ. ಅವರಿಬ್ಬರನ್ನು ತಳ್ಳಿ ಗಾಂಧಿಜೀ ಎದೆಗೆ ಮೂರು ಸುತ್ತು ಗುಂಡು ಹಾರಿಸುತ್ತಾರೆ. ಅಲ್ಲಿನ ಭದ್ರತಾ ಸಿಬ್ಬಂದಿಗಳು ತಕ್ಷಣ ಗೋಡ್ಸೆಯನ್ನು ಹಿಡಿದುಕೊಳ್ಳುತ್ತಾರೆ. ಇಲ್ಲವಾದರೆ ಅಲ್ಲಿದ್ದ ಜನರೆ ಗೋಡ್ಸೆಯನ್ನು ಹೊಡೆದು ಸಾಯಿಸುತ್ತಿದ್ದರು ಎಂದರು.
ಜಗತ್ತು ಗೌರವಿಸುವ ವ್ಯಕ್ತಿ ಮಹಾತ್ಮ ಗಾಂಧಿಜೀ. ಅವರು ಬದುಕಿದ್ದರೆ ಭಾರತದ ಚಿತ್ರಣ ಇನ್ನಷ್ಟು ಬದಲಾಗುತ್ತಿತ್ತು. ನೂರು ವರ್ಷ ಬಾಳುವಂತೆ ಅಭಿಮಾನಿಯೊಬ್ಬರು ಪತ್ರ ಬರೆದಾಗ, ಅದಕ್ಕೆ ಉತ್ತರಿಸಿದ ಗಾಂಧಿಜೀ ನಾನು 125 ವರ್ಷ ಬದುಕಬೇಕು ಎಂದುಕೊಂಡಿದ್ದೇನೆ ಎಂದಿದ್ದರು. ಅವರಿಗೆ ವಿಲ್ ಪವರ್ ಹೆಚ್ಚಿತ್ತು. ಆರೋಗ್ಯವಾಗಿದ್ದರು, ಇನಷ್ಟು ವರ್ಷ ಕಾಲ ಅವರು ಜೀವಿಸುತ್ತಿದ್ದರು ಎಂದರು.
ಕಾಂಗ್ರೆಸಿಗರು ಗಾಂಧಿಜೀ ಅವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು. ಸಮಪೂರ್ಣವಾಗಿ ಅಳವಡಿಸಿಕೊಳ್ಳಲಾಗಲ್ಲ. ಈಗಾಗಲೇ ಕೆಟ್ಟು ಹೋಗಿದ್ದೇವೆ. ಇರುವುದರಲ್ಲಿ ಗಾಂಧಿ ಮಾರ್ಗದಲ್ಲಿ ನಡೆಯೋಣ ಎಂದರು.
