ನವದೆಹಲಿ, ಅ.2- ಅನ್ಯಾಯದ ವಿರುದ್ಧ ದೇಶವನ್ನು ಮಹಾತ್ಮ ಗಾಂಧಿಜೀ ಅವರ ಮಾದರಿಯಲ್ಲಿ ಒಗ್ಗೂಡಿಸುವ ಪ್ರತಿಜ್ಞೆ ಕೈಗೊಂಡಿರುವುದಾಗಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಹೇಳಿದ್ದಾರೆ. ಮಹಾತ್ಮ ಗಾಂಧಿ ಅವರ 153ನೇ ಹುಟ್ಟು ಹಬ್ಬದ ಅಂಗವಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಬಾಪು ನಮಗೆ ಸತ್ಯ ಮತ್ತು ಅಹಿಂಸೆಯ ಹಾದಿಯಲ್ಲಿ ನಡೆಯಲು ಕಲಿಸಿದರು. ಪ್ರೀತಿ, ಸಹಾನುಭೂತಿ, ಸಾಮರಸ್ಯ ಮತ್ತು ಮಾನವೀಯತೆಯ ಅರ್ಥವನ್ನು ನಮಗೆ ವಿವರಿಸಿದರು ಎಂದು ಹೇಳಿದ್ದಾರೆ. ಅನ್ಯಾಯದ ವಿರುದ್ಧ ಅವರು ದೇಶವನ್ನು ಒಗ್ಗೂಡಿಸಿದಂತೆ, ನಾವು ನಮ್ಮ ಭಾರತವನ್ನು ಒಂದುಗೂಡಿಸುವ ಪ್ರತಿಜ್ಞಾಯನ್ನು ಗಾಂಧಿ ಜಯಂತಿ ದಿನದಂದು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ಲಾಲ್ ಬಹುದೂರ್ ಶಾಸ್ತ್ರಿ ಅವರ ಜನ್ಮ ದಿನದ ಅಂಗವಾಗಿ ಟ್ವೀಟ್ ಮೂಲಕ ನಮನ ಸಲ್ಲಿಸಿರುವ ಶಾಸ್ತ್ರಿಜೀ ಅವರು, ಜೈ ಜವಾನ್, ಜೈ ಕಿಸಾನ್ ಘೋಷಣೆ ಹೊರಡಿಸಿದರು. ರೈತರು, ಸೈನಿಕರು ದೇಶದ ಬೆನ್ನಲುಬು. ಸರ್ವಾಕಾರಿ ಸರ್ಕಾರ ಇಂದು ಈ ಇಬ್ಬರ ಮೇಲೆ ನಿರಂತರವಾಗಿ ಆಕ್ರಮಣ ಮಾಡುತ್ತಿದೆ. ನಮ್ಮ ಪೂರ್ವಜರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದರು. ನಾವು ಅವರಿಗಾಗಿ ಹೋರಾಡುತ್ತಿದ್ದೇವೆ, ಯಾವುದೇ ಕಾರಣಕ್ಕೂ ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.
ಭಾರತ್ ಜೋಡೋ ಯಾತ್ರೆಯಲ್ಲಿ ತೊಡಗಿಸಿಕೊಂಡಿರುವ ರಾಹುಲ್‍ಗಾಂಧಿ ಮೈಸೂರಿನ ಬದನವಾಳು ಗ್ರಾಮದಲ್ಲಿನ ಖಾದಿ ಗ್ರಾಮೋದ್ಯೋಗ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಾಪುಗೆ ಪುಷ್ಪನಮನ ಸಲ್ಲಿಸಿದರು.
ಜನ ಸಾಮಾನ್ಯರ ಜೊತೆ ಕುಳಿತು ಪ್ರಾರ್ಥನೆಯಲ್ಲಿ ಭಾಗಿಯಾದರು. ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್. ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಮತ್ತಿತರರು ಉಪಸ್ಥಿತರಿದ್ದರು. ನಂತರ ರಾಹುಲ್ ಹಾಗೂ ಇತರ ನಾಯಕರು ಕೈಮಗ್ಗಕ್ಕೆ ಭೇಟಿ ನೀಡಿ ಅಲ್ಲಿನ ಚಟುವಟಿಕೆಗಳನ್ನು ವೀಕ್ಷಿಸಿದರು. ಸಿಬ್ಬಂದಿಗಳ ಜೊತೆ ಸಮಾಲೋಚನೆ ನಡೆಸಿದರು.
ಬಂದನವಾಳುನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 1932ರಲ್ಲಿ ಈ ಖಾದಿ ಗ್ರಾಮೋದ್ಯೋಗ ಸಂಸ್ಥೆ ಉತ್ಪಾದನೆ ಆರಂಭಿಸಿತ್ತು. ಬಾಪು 1927ರಲ್ಲಿ ಮತ್ತು 1932ರಲ್ಲಿಯೂ ಈ ಗ್ರಾಮಕ್ಕೆ ಆಗಮಿಸಿ ಸಹಕಾರಿ ಸಂಘವನ್ನು ಸ್ಥಾಪಿಸಲು ನೆರವಾದರು ಎಂದು ಹೇಳಿದ್ದಾರೆ.
ಮಹಾತ್ಮ ಗಾಂಧಿಜೀ ಅವರ ಜನ್ಮದಿನದ ಅಂಗವಾಗಿ ದೆಹಲಿಯ ರಾಜ್‍ಘಾಟ್‍ನಲ್ಲಿರುವ ಬಾಪು ಅವರ ಸ್ಮಾರಕಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿ ನಿಡಿ ಪುಷ್ಪ ನಮನ ಸಲ್ಲಿಸಿದರು. ಹಿಂದಿಯಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಬಾಪು ಸತ್ಯದ ಉದಾಹರಣೆ, ಬಾಪು ಧೈರ್ಯದ ಜ್ಯೋತಿ, ಬಾಪು ಅವರು ದೇಶದ ಜನರ ನೋವುಗಳನ್ನು ಹಂಚಿಕೊಳ್ಳುವ ಮತ್ತು ಇಡೀ ಭಾರತವನ್ನು ಒಂದುಗೂಡಿಸುವ ಭಾರತ ಯಾತ್ರಿ. ಇಂದು ನಾವು ಭಾರತ್ ಜೋಡೋ ಘೋಷಣೆಯೊಂದಿಗೆ ಬಾಪು ತೋರಿಸಿದ ಹಾದಿಯಲ್ಲಿ ದೃಢಸಂಕಲ್ಪ ಮತ್ತು ಒಗ್ಗಟ್ಟಿನ ಜ್ಯೋತಿಯನ್ನು ಕೈಯಲ್ಲಿ ಹಿಡಿದು ನಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‍ನಿಂದ ಟ್ವೀಟ್ ಮಾಡಿದ್ದು, ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜನ್ಮದಿನದಂದು ನಾವು ಅವರಿಗೆ ಗೌರವ ಸಲ್ಲಿಸುತ್ತೇವೆ. ಅವರು ದೂರದೃಷ್ಟಿ, ದೃಢವಾದ ತತ್ವಗಳು ಮತ್ತು ಆದರ್ಶಗಳಿಂದ ಭಾರತದ ಭದ್ರ ಬುನಾದಿ ಹಾಕಿದರು. ಗಾಂಧಿ ಜಯಂತಿಯನ್ನು ಆಚರಿಸುತ್ತಿರುವಾಗ, ಶಾಂತಿ ಮತ್ತು ಅಹಿಂಸೆಗೆ ಬದ್ಧರಾಗುವ ಪ್ರತಿಜ್ಞಾ ಮಾಡೋಣ ಎಂದು ಪಕ್ಷ ಹೇಳಿದೆ.
ಇದೇ ವೇಳೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೂ ಪಕ್ಷ ಗೌರವ ಸಲ್ಲಿಸಿದೆ. ನಿಜವಾದ ರಾಷ್ಟ್ರ ನಿರ್ಮಾತೃ, ಅವರ ಜೈ ಜವಾನ್, ಜೈ ಕಿಸಾನ್ ಘೋಷಣೆ ನಮ್ಮ ಸೈನಿಕರು ಮತ್ತು ರೈತರು ದೇಶಕ್ಕಾಗಿ ಸಮರ್ಪಿಸುತ್ತಿರುವ ರಕ್ತ ಮತ್ತು ಬೆವರಿನ ಬಗ್ಗೆ ಭಾರತೀಯರಲ್ಲಿ ಹೆಮ್ಮೆಯನ್ನು ಹುಟ್ಟುಹಾಕಿದೆ ಎಂದಿದೆ.
ಕಾಂಗ್ರೆಸ್‍ನ ರಾಷ್ಟ್ರಾಧ್ಯಕ್ಷ ಚುನಾವಣಾ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಮಹಾತ್ಮ ಗಾಂ ಮತ್ತು ಶಾಸ್ತ್ರಿ ಅವರ ಸ್ಮಾರಕಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಗಾಂೀಜಿ ಮತ್ತು ಶಾಸ್ತ್ರೀಜಿ ಇಬ್ಬರ ಸಂಪೂರ್ಣ ಸಂಕಲ್ಪ ನಮಗೆ ಸೂರ್ತಿ ನೀಡುತ್ತದೆ ಎಂದು ಖರ್ಗೆ ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಚುನಾವಣಾ ಕಣದಲ್ಲಿರುವ ಮತ್ತೊಬ್ಬ ಅಭ್ಯರ್ಥಿ ಶಶಿ ತರೂರ್, ವಾರ್ಧಾದಲ್ಲಿರುವ ಗಾಂ ಸೇವಾ ಗ್ರಾಮಕ್ಕೆ ಭೇಟಿ ನೀಡಿದ್ದರು.