ಬೆಂಗಳೂರು,ಮಾ.10- ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದಿಂದ ಸ್ರ್ಪಧಿಸಲು ಮಹೇಶ ಕುಮಟಳ್ಳಿ ಅವರಿಗೆ ಬಿಜೆಪಿ ಟಿಕೆಟ್ ಸಿಗದಿದ್ದರೆ ನಾನು ಗೋಕಾಕ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿರುವ ಜಾರಕಿಹೊಳಿ, ಅಥಣಿ ಕ್ಷೇತ್ರದಿಂದ ಮಹೇಶ ಕುಮಟಳ್ಳಿ ಟಿಕೆಟ್ ನೀಡಲೇಬೇಕು ಎಂದು ಪರೋಕ್ಷವಾಗಿ ಕೇಸರಿ ವರಿಷ್ಠರಿಗೆ ಸಂದೇಶ ರವಾನಿಸಿದ್ದಾರೆ.
ಭಾರತೀಯ ಜನತಾ ಪಕ್ಷದ ತತ್ವ ಸಿದ್ಧಾಂತ ಒಪ್ಪಿ, ಇದ್ದ ಅಧಿಕಾರ ತೊರೆದು ಬಂದವನು ನಾನು. ಬೆಳಗಾವಿಯಲ್ಲಿ 13 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದೆ. ಈ ಬಾರಿ ಇನ್ನೂ 2 ಸ್ಥಾನ ಹೆಚ್ಚಿಗೆ ಗೆಲ್ಲಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
BIG NEWS : ಬಿಜೆಪಿ ಸೇರಲ್ಲ, ಬೆಂಬಲಿಸುತ್ತೇನೆ ಅಷ್ಟೇ – ಸುಮಲತಾ ಅಂಬರೀಷ್
ಬೆಳಗಾವಿಯಲ್ಲಿ ಶಿವಾಜಿ ಮೂರ್ತಿಯನ್ನು ಎರಡು ಬಾರಿ ಉದ್ಘಾಟನೆ ಮಾಡಿದ ಬೆಳವಣಿಗೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ನಾನು ಶಿಷ್ಟಾಚಾರ ಹಾಗೂ ನಿಯಮದಂತೆ ಮುಖ್ಯಮಂತ್ರಿ ಅವರನ್ನು ಕರೆದುಕೊಂಡು ಕಾರ್ಯಕ್ರಮ ಮಾಡಿದ್ದೇನೆ. ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಶಿವಾಜಿ ಮೂರ್ತಿ ಲೋಕಾರ್ಪಣೆ ಮಾಡಲಾಗಿದೆ.
ಈ ಕುರಿತು ವಿಜಯಪುರದಲ್ಲೇ ಇರುವ ಎಂ.ಬಿ. ಪಾಟೀಲ ಅವರನ್ನೇ ಕೇಳಿ ಎಂದು ಉತ್ತರಿಸಿದರು. ಸಚಿವ ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಾರಕಿಹೊಳಿ, ಸಚಿವ ನಾರಾಯಣಗೌಡ ಬಿಜೆಪಿ ತೊರೆದು, ಕಾಂಗ್ರೆಸ್ ಸೇರುವುದಾಗಿ ಎಲ್ಲೂ ಹೇಳಿಲ್ಲ. ಈ ಕುರಿತ ವರದಿಗಳ ಬಗ್ಗೆ ಅವರೊಂದಿಗೆ ಕುಳಿತು ಮಾತನಾಡುತ್ತೇನೆ ಎಂದು ಹೇಳಿದರು.
ಸುಪ್ರೀಂನಲ್ಲಿ ಮಾಡಾಳ್ ಜಾಮೀನು ಪ್ರಶ್ನಿಸಲು ಮುಂದಾದ ಲೋಕಾಯುಕ್ತ
ಇಷ್ಟಕ್ಕೂ ಮುಳುಗುವ ಹಡಗಿನಂತಿರುವ ಕಾಂಗ್ರೆಸ್ ಪಕ್ಷವನ್ನು ಯಾರೂ ಸೇರಲಾರರು. ಹಡಗು ಮುಳುಗುವಾಗ ಅಲ್ಲಿ ಹೋಗುವುದು ಒಳ್ಳೆಯದಲ್ಲ. ಬಿಜೆಪಿ ಪಕ್ಷ ದೇಶದಲ್ಲಿ ಹೆಮ್ಮರವಾಗಿ ಬೆಳೆದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಪಕ್ಷವನ್ನು ಹೊಗಳುವಾಗ ಹಾಗೂ ಮುಳುಗುವ ಹಡಗು. ಕಾಂಗ್ರೆಸ್ ಪಕ್ಷ ಸೇರುವ ಹುಂಬತನ ಮಾಡಬಾರದೆಂದು ಮನವಿ ಅವರು ಮಾಡಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಸ್ಥಾನ ಗಳಿಸಲು ಮುಂದಾಗುತ್ತೇವೆ. ಹಾಲಿ 13 ಬಿಜೆಪಿ ಸ್ಥಾನಗಳು ಮಾತ್ರವಲ್ಲದೇ ಇನ್ನೂ ಹೆಚ್ಚು ಕ್ಷೇತ್ರಗಳಲ್ಲಿ ನಾವು ವಿಜಯ ಸಾಧಿಸುತ್ತೇವೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
mahesh kumathalli, ramesh jarkiholi, BJP, ticket ,