ಬಿಜೆಪಿಗೆ ಟಿಎಂಸಿಯೇ ಪರ್ಯಾಯ : ರಾಹುಲ್‍ಗೆ ತಿರುಗೇಟು ನೀಡಿದ ಸಂಸದೆ
By
Eesanje News
February 24, 2023
Social Share
ಶಿಲ್ಲಾಂಗ್ ,ಫೆ.24- ತೃಣಮೂಲ ಕಾಂಗ್ರೆಸ್ ಪಕ್ಷ ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂಬ ರಾಹುಲ್‍ಗಾಂಧಿ ಆರೋಪಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಬಿಜೆಪಿಗೆ ರಾಷ್ಟ್ರೀಯ ಪರ್ಯಾಯ ಪಕ್ಷವೇ ಟಿಎಂಸಿ ಎಂದು ಘೋಷಣೆ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಆಡಳಿತಾರೂಢ ಪಕ್ಷವು ಬಿಜೆಪಿ ಗೆಲುವಿಗೆ ‘ಸಹಾಯ’ ಮಾಡಲು ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ಸ್ರ್ಪಸುತ್ತಿದೆ ಎಂಬ ರಾಹುಲ್ ಗಾಂ ಹೇಳಿಕೆಗೆ ಪ್ರತಿಕ್ರಿಯೆಯಾಗಿ ತೃಣಮೂಲ ಸಂಸದರು ಈ ಹೇಳಿಕೆ ನೀಡಿದ್ದಾರೆ.
ಉತ್ತರ ಶಿಲ್ಲಾಂಗ್ ನ ತೃಣಮೂಲ ಅಭ್ಯರ್ಥಿ ಎಲ್ಗಿವಾ ಗ್ವಿನೆತ್ ರಿಂಜಾ ಪರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮೊಯಿತ್ರಾ, ಕಾಂಗ್ರೆಸ್‍ಗೆ ಬಿಜೆಪಿಯನ್ನು ಸೋಲಿಸಲು ಸಾಧ್ಯವಾದರೆ, ನಾವು ಇಲ್ಲಿ ಸ್ರ್ಪಸುವ ಅಗತ್ಯವಿರಲಿಲ್ಲ. , ಕಾಂಗ್ರೆಸ್ ರಾಜ್ಯವನ್ನು ಗೆಲ್ಲಲು ವಿಫಲವಾದ ಕಾರಣ, ನಾವು ಜನರಿಗೆ ಪರ್ಯಾಯವನ್ನು ಒದಗಿಸಲು ಮುಂದಾಗುವ ಮೂಲಕ ಬಿಜೆಪಿಗೆ ಪರ್ಯಾಯ ಪಕ್ಷವಾಗಿ ಹೊರಹೊಮ್ಮುತ್ತಿದ್ದೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಒಂದೊಂದೆ ರಾಜ್ಯವನ್ನು ಕಳೆದುಕೊಳ್ಳುತ್ತಿರುವಾಗ ಬಿಜೆಪಿ ಮತ್ತೊಂದು ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲುವುದನ್ನು ನಾವು ಮನೆಯಲ್ಲಿ ಕುಳಿತು ನೋಡಬೇಕೇ ಎಂದು ಅವರು ಪ್ರಶ್ನಿಸಿದ್ದಾರೆ. ಉತ್ತರ ಶಿಲ್ಲಾಂಗ್ ಅಭ್ಯರ್ಥಿಯ ಹಿಂದೆ ನಿಲ್ಲುವಂತೆ ಮಹಿಳಾ ಮತದಾರರನ್ನು ಪ್ರೇರೇಪಿಸಿದ ಅವರು, ನಮಗೆ ಬದಲಾವಣೆ ಮಾಡುವ ಶಕ್ತಿ ಇದೆ, ಎಲ್ಲ ಪುರುಷ ಮತಗಳು ವಿಭಜನೆಯಾಗಲಿ, ಎಲ್ಲ ಮಹಿಳೆಯರು ಎಲ್ಗಿವಾಗೆ ಮತ ಹಾಕಿದರೆ ನಾವು ಗೆಲ್ಲುತ್ತೇವೆ ಎಂದರು.
ಇದಲ್ಲದೆ, ತೃಣಮೂಲವು ತನ್ನ ಪ್ರಣಾಳಿಕೆಯಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುವುದಾಗಿ ಮತ್ತು ಅಧಿಕಾರಕ್ಕೆ ಬಂದರೆ ಮಹಿಳಾ ವಸತಿ ನಿಲಯ, ಮಹಿಳಾ ಪೊಲೀಸ್ ಠಾಣೆ ಮತ್ತು ಮಹಿಳಾ ಸ್ವಸಹಾಯ ಗುಂಪುಗಳನ್ನು ನಿರ್ಮಿಸುವುದಾಗಿ ಭರವಸೆ ನೀಡಿದೆ.
ಬಿಜೆಪಿಗೆ ಟಿಎಂಸಿಯೇ ಪರ್ಯಾಯ : ರಾಹುಲ್‍ಗೆ ತಿರುಗೇಟು ನೀಡಿದ ಸಂಸದೆ
ಶಿಲ್ಲಾಂಗ್ ,ಫೆ.24- ತೃಣಮೂಲ ಕಾಂಗ್ರೆಸ್ ಪಕ್ಷ ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂಬ ರಾಹುಲ್‍ಗಾಂಧಿ ಆರೋಪಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಬಿಜೆಪಿಗೆ ರಾಷ್ಟ್ರೀಯ ಪರ್ಯಾಯ ಪಕ್ಷವೇ ಟಿಎಂಸಿ ಎಂದು ಘೋಷಣೆ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಆಡಳಿತಾರೂಢ ಪಕ್ಷವು ಬಿಜೆಪಿ ಗೆಲುವಿಗೆ ‘ಸಹಾಯ’ ಮಾಡಲು ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ಸ್ರ್ಪಸುತ್ತಿದೆ ಎಂಬ ರಾಹುಲ್ ಗಾಂ ಹೇಳಿಕೆಗೆ ಪ್ರತಿಕ್ರಿಯೆಯಾಗಿ ತೃಣಮೂಲ ಸಂಸದರು ಈ ಹೇಳಿಕೆ ನೀಡಿದ್ದಾರೆ.
ಉತ್ತರ ಶಿಲ್ಲಾಂಗ್ ನ ತೃಣಮೂಲ ಅಭ್ಯರ್ಥಿ ಎಲ್ಗಿವಾ ಗ್ವಿನೆತ್ ರಿಂಜಾ ಪರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮೊಯಿತ್ರಾ, ಕಾಂಗ್ರೆಸ್‍ಗೆ ಬಿಜೆಪಿಯನ್ನು ಸೋಲಿಸಲು ಸಾಧ್ಯವಾದರೆ, ನಾವು ಇಲ್ಲಿ ಸ್ರ್ಪಸುವ ಅಗತ್ಯವಿರಲಿಲ್ಲ. , ಕಾಂಗ್ರೆಸ್ ರಾಜ್ಯವನ್ನು ಗೆಲ್ಲಲು ವಿಫಲವಾದ ಕಾರಣ, ನಾವು ಜನರಿಗೆ ಪರ್ಯಾಯವನ್ನು ಒದಗಿಸಲು ಮುಂದಾಗುವ ಮೂಲಕ ಬಿಜೆಪಿಗೆ ಪರ್ಯಾಯ ಪಕ್ಷವಾಗಿ ಹೊರಹೊಮ್ಮುತ್ತಿದ್ದೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಒಂದೊಂದೆ ರಾಜ್ಯವನ್ನು ಕಳೆದುಕೊಳ್ಳುತ್ತಿರುವಾಗ ಬಿಜೆಪಿ ಮತ್ತೊಂದು ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲುವುದನ್ನು ನಾವು ಮನೆಯಲ್ಲಿ ಕುಳಿತು ನೋಡಬೇಕೇ ಎಂದು ಅವರು ಪ್ರಶ್ನಿಸಿದ್ದಾರೆ.
ಉತ್ತರ ಶಿಲ್ಲಾಂಗ್ ಅಭ್ಯರ್ಥಿಯ ಹಿಂದೆ ನಿಲ್ಲುವಂತೆ ಮಹಿಳಾ ಮತದಾರರನ್ನು ಪ್ರೇರೇಪಿಸಿದ ಅವರು, ನಮಗೆ ಬದಲಾವಣೆ ಮಾಡುವ ಶಕ್ತಿ ಇದೆ, ಎಲ್ಲ ಪುರುಷ ಮತಗಳು ವಿಭಜನೆಯಾಗಲಿ, ಎಲ್ಲ ಮಹಿಳೆಯರು ಎಲ್ಗಿವಾಗೆ ಮತ ಹಾಕಿದರೆ ನಾವು ಗೆಲ್ಲುತ್ತೇವೆ ಎಂದರು.
ಇದಲ್ಲದೆ, ತೃಣಮೂಲವು ತನ್ನ ಪ್ರಣಾಳಿಕೆಯಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುವುದಾಗಿ ಮತ್ತು ಅಧಿಕಾರಕ್ಕೆ ಬಂದರೆ ಮಹಿಳಾ ವಸತಿ ನಿಲಯ, ಮಹಿಳಾ ಪೊಲೀಸ್ ಠಾಣೆ ಮತ್ತು ಮಹಿಳಾ ಸ್ವಸಹಾಯ ಗುಂಪುಗಳನ್ನು ನಿರ್ಮಿಸುವುದಾಗಿ ಭರವಸೆ ನೀಡಿದೆ.
#MahuaMoitra, #hitsback, #RahulGandhi, #GoaComment, #TMC, #alternative, #BJP,
Articles You Might Like
Share This Article
More Stories
ಬಜೆಟ್ ಮಂಡನೆಗೆ ಅವಕಾಶ ಕೊರಿ ಪಿಎಂಗೆ ಪತ್ರ ಬರೆದ ದೆಹಲಿ ಸಿಎಂ
ಸಂಗೊಳ್ಳಿ ರಾಯಣ್ಣ ಡಯಾಲಿಸಿಸ್ ಕೇಂದ್ರದ ಪ್ರಥಮ ವಾರ್ಷಿಕೋತ್ಸವ