ಗುಂಡಿಮಯವಾದ ಮೆಜೆಸ್ಟಿಕ್ : ಚಾಲಕರು, ಪ್ರಯಾಣಿಕರ ಪರದಾಟ

Social Share

ರಾಜಧಾನಿ ಬೆಂಗಳೂರಿನ ಹೃದಯ ಭಾಗವಾದ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಗುಂಡಿಗಳ ತಾಣವಾಗಿದ್ದು, ಇಲ್ಲಿ ಬಿಎಂಟಿಸಿ ಬಸ್ಗಳು ಚಲಿಸುವುದು ದುಸ್ತರವಾಗಿದೆ.

ಬಸ್ನಿಲ್ದಾಣದಿಂದ ಒಳಗೆ ಅಥವಾ ಹೊರಗೆ ಹೋಗಬೇಕಾದರೆ ಬಸ್ ಒಳಗೆ ಕುಳಿತಿದ್ದವರು ಜೀವ ಅಂಗೈನಲ್ಲಿ ಹಿಡಿದುಕೊಂಡಿರಬೇಕಾಗುತ್ತದೆ. ಮೊಳಕಾಲುದ್ದದ ಗುಂಡಿಗಳಿಗೆ ಬಸ್ನ ಚಕ್ರಗಳು ಇಳಿದು ಹತ್ತುವಾಗ ವಾಹನಗಳು ಅಂತಿದ್ದಿತ್ತ ಇತ್ತಿಂದ್ದಂತ್ತ ವಾಲಾಡುತ್ತವೆ. ಎಲ್ಲಿ ಮಗುಚಿ ಬೀಳುತ್ತದೋ ಎಂಬ ಭಯವನ್ನು ಪ್ರಯಾಣಿಕರು ಪ್ರತಿ ನಿತ್ಯ ಅನುಭವಿಸುವಂತ್ತಾಗಿದೆ.

ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಹೊರ ಹೋಗುವ ರಸ್ತೆಗಳಲ್ಲಿ ಗುಂಡಿಗಳ ಸಂಖ್ಯೆ ಹೆಚ್ಚಾಗಿದೆ. ಮೆಜೆಸ್ಟಿಕ್ ಒಳ ಬರುವ ಬಿಎಂಟಿಸಿ ನಿಲ್ದಾಣದ ರಸ್ತೆಗಳದ್ದೂ ಇದೇ ಪರಿಸ್ಥಿತಿ. ಇಲ್ಲಿಂದ ನಗರದ ಸುತ್ತಮುತ್ತಲಿನ ದೂರದೂರುಗಳಿಗೆ ಸಂಚರಿಸುವ ಬಸ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹೋಗುತ್ತವೆ. ಮಳೆಗಾಲ ಬಂತೆಂದರೆ ಕೆಸರಿನ ಸಿಂಚನವಾದರೆ, ಬೇಸಿಗೆ ಕಾಲದಲ್ಲಿ ಧೂಳು ಮಯವಾಗುತ್ತದೆ.

ಗಡಿ ವಿಷಯದಲ್ಲಿ ಪುಂಡಾಟಿಕೆ ಸಹಿಸಲ್ಲ : ಸಿಎಂ ಬೊಮ್ಮಾಯಿ ಎಚ್ಚರಿಕೆ

ಇತ್ತೀಚೆಗೆ ನಗರದಲ್ಲಿನ ಕಿಲ್ಲರ್ ಗುಂಡಿಗಳಿಗೆ ಅದೇಷ್ಟೋ ಜೀವಗಳು ಬಲಿಯಾದವು. ಇನ್ನೂ ಕೆಲವು ಗುಂಡಿಗಳು ಬಲಿಗಾಗಿ ಕಾಯುವಂತಿವೆ. ಬಿಬಿಎಂಪಿ ಈ ಬಗ್ಗೆ ಎಚ್ಚರಿಕೆಯ ಹೆಜ್ಜೆ ಇಟ್ಟರೂ ಅದರ ಕಣ್ಣು ತಪ್ಪಿ ಸಾವಿರಾರು ಗುಂಡಿಗಳು ರಸ್ತೆಯಲ್ಲಿವೆ.

ಗುಂಡಿ ಮುಚ್ಚಲು ಹೈಕೋರ್ಟ್ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದು, ಗುಂಡಿ ಇರುವ ಬಗ್ಗೆ ದೂರು ಸಲ್ಲಿಸಿ ಎಂಬ ಸಂದೇಶಗಳೂ ರವಾನೆಯಾಗಿವೆ. ಆದರೂ ದಿನ ನಿತ್ಯ ಲಕ್ಷಾಂತರ ಮಂದಿ ಬಂದು ಹೋಗುವ ಮೆಜೆಸ್ಟಿಕ್ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ನೋವಿನ ಸಂಗತಿಯೇ ಸರಿ.

ಗುಂಡಿ ಮುಚ್ಚುವ ಕಾರ್ಯಕ್ಕೆ ಬಿಬಿಎಂಪಿ ಚಾಲನೆ ಕೊಟ್ಟ ಸಮಯದಲ್ಲಿ ಮೆಜೆಸ್ಟಿಕ್ನಲ್ಲಿರುವ ಗುಂಡಿ ಮುಚ್ಚಲು ಗೋಡೆ ಮಣ್ಣನ್ನು ಇಲ್ಲಿಗೆ ತಂದು ಹಾಕಿ ಗುಂಡಿ ಮುಚ್ಚುವ ತೇಪೆ ಕೆಲಸ ಮಾಡಲಾಗಿತ್ತು. ಆ ವೇಳೆ ನಿಲ್ದಾಣವೆಲ್ಲ ಧೂಳು ಮಯವಾಗಿತ್ತು.ಆದರೂ ಪ್ರಯಾಣಿಕರು ಇದನ್ನು ಸಹಿಸಿಕೊಂಡರು.

ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಮಣ್ಣು ಹಾಕಿದ್ದ ಗುಂಡಿಗಳು ಕೆಸರು ಗದ್ದೆಯಂತಾದವು. ಆ ನಂತರ ಜೆಲ್ಲಿ ಮಿಶ್ರಿತ ಕಾಂಕ್ರಿಟ್ ಹಾಕಿ ಮುಚ್ಚುವ ಪ್ರಯತ್ನವನ್ನು ಅಕಾರಿಗಳು ಮಾಡಿದರಾದರೂ ಅದು ಪ್ರಯೋಜನೆಕ್ಕೆ ಬಾರಲಿಲ್ಲ.

ಗುಣಮಟ್ಟದ ಕಾಂಕ್ರಿಟ್ ಹಾಕದ ಕಾರಣ ಮತ್ತೆ ಆಳುದ್ದದ ಗುಂಡಿಗಳು ಇಲ್ಲಿ ಬಿದ್ದಿದ್ದು, ಬಸ್ಗಳಂತೂ ಅಂಕುಡೊಂಕಿನಿಂದ ಚಲಿಸಿ ಅಪಾಯದ ದೃಶ್ಯ ಸೃಷ್ಟಿಸುತ್ತಿವೆ. ಬಿಎಂಟಿಸಿ ಚಾಲಕರ ಸಾಹಸಕ್ಕೆ ಇಲ್ಲಿ ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ಹಳ್ಳ ಬಿದ್ದ ಗುಂಡಿಗಳು, ಎಲ್ಲೆಂದರಲ್ಲಿ ತೂರುವ ಪ್ರಯಾಣಿಕರ ನಡುವೆಯೂ ಸಂಯಮದಿಂದ ಬಸ್ ಚಲಾಯಿಸಿ ಪ್ರಯಾಣಿಕರ ಸುರಕ್ಷತೆ ಕಾಪಾಡುತ್ತಿದ್ದಾರೆ.

ಮಾಸಾಂತ್ಯಕ್ಕೆ ಸಿಎಂ ದೆಹಲಿಗೆ, ಮತ್ತೆ ಗರಿಗೆದರಿದ ಚಟುವಟಿಕೆ

ಇಷ್ಟಾದರೂ ಸಂಬಂಧಪಟ್ಟ ಅಕಾರಿಗಳು ಇತ್ತ ಗಮನ ವಹಿಸದೇ ಇರುವುದು ನೋವಿನ ಸಂಗತಿಯೇ ಸರಿ. ಇನ್ನಾದರೂ ಸಂಬಂಧಪಟ್ಟವರು ಇತ್ತ ಮುಖ ಮಾಡಿ ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಹಾಗೂ ಪ್ರಯಾಣಿಕರ ಸುರಕ್ಷತೆ ಕಾಪಾಡಬೇಕು ಎಂಬುದು ಪ್ರಯಾಣಿಕರ ಮನವಿಯಾಗಿದೆ.

ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡುವಾಗ ರೈಲ್ವೆ ನಿಲ್ದಾಣವನ್ನು ಸಂಪರ್ಕಿಸುವ ರಸ್ತೆಗಳಲ್ಲಿನ ಗುಂಡಿಗಳನ್ನು ಮಾತ್ರ ಮುಚ್ಚಲಾಗಿತ್ತು. ಆದರೆ, ಜನ ಸಾಮಾನ್ಯರು ಓಡಾಡುವ ಬಸ್ ನಿಲ್ದಾಣಗಳ ಗುಂಡಿಗಳನ್ನು ಹಾಗೆ ಬಿಡಲಾಗಿದೆ. ಮೋದಿ ಅವರು ಒಮ್ಮೆ ಬಸ್ ನಿಲ್ದಾಣಕ್ಕೂ ಬಂದು ಹೋಗಿದ್ದರೆ ಗುಂಡಿಗಳು ಸರಿಹೋಗುತ್ತಿದ್ದವೇನೋ ಎಂದು ಪ್ರಯಾಣಿಕರು ಮಾತನಾಡಿಕೊಳ್ಳುತ್ತಿದ್ದಾರೆ.

majestic, bus, stand, pothole, BMTC, KSRTC,

Articles You Might Like

Share This Article