ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಬೆಂಕಿ ಅವಘಡ

Social Share

ಪುರಿ,(ಒಡಿಶಾ), ಮಾ.9 – ನಗರದ ಪ್ರಮುಖ ವ್ಯಾಪಾರ ಕಾಂಪ್ಲೆಕ್ಸ್‍ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ ಅಲ್ಲಿದ್ದ ಎಲ್ಲಾ 40 ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಕಳೆದ ರಾತ್ರಿ ಲಕ್ಷೀ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿರುವ ಬಟ್ಟೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಅದು ಕಟ್ಟಡ ಪೂರ್ತಿ ವ್ಯಾಪಿಸಿ ಎಲ್ಲವನ್ನು ನಾಶಪಡಿಸಿದೆ.

ಬೆಂಕಿ ನಂದಿಸಲು ಹನ್ನೆರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಕಾಂಪ್ಲೆಕ್ಸ್ ನಲ್ಲಿದ್ದ ಸುಮಾರು 100ಕ್ಕೂ ಹೆಚ್ಚು ಜನರನ್ನು ರಕ್ಷಿಸಿದೆ. ಕಟ್ಟಡದಿಂದ ಹೊರಬರಲಾಗದೆ ಮೇಲ್ಛಾವಣಿಯ ಮೇಲೆ ಸಿಲುಕಿ ಪ್ರಜ್ಞಾಹೀನ ಸ್ಥಿತಿಯಲಿದ್ದ ಮೂವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ ಎಂದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿ.ಸೋಮಣ್ಣ ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆ ನಡೆದಿಲ್ಲ : ಡಿಕೆಶಿ

ಶತಮಾನಗಳಷ್ಟು ಹಳೆಯದಾದ ಮತ್ತು ಸಾಮಿ ಜಗನ್ನಾಥ ದೇವಾಲಯದ ಸಮೀಪದಲ್ಲಿರುವ ಈ ಕಟಡದಲ್ಲಿ ಹೋಟೆಲ್ ಕೂಡ ಇದ್ದು ಅಲ್ಲಿದ್ದ ಮಹಾರಾಷ್ಟ್ರದ ನಾಸಿಕ್‍ನ ಸುಮಾರು 106 ಪ್ರವಾಸಿಗರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಅಗ್ನಿಶಾಮಕ ಸೇವೆಯ ಮಹಾನಿರ್ದೇಶಕ ಎಸ್‍ಕೆ ಉಪಾಧ್ಯಾಯ ಮಾತನಾಡಿ, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಮೂವರು ಸಿಬ್ಬಂದಿ ಬಿಸಿ ಮತ್ತು ಹೊಗೆಯ ನಡುವೆ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಬಿಜೆಪಿಯ ಕೆಟ್ಟ ನೀತಿಗಳಿಂದ ಹೈನುಗಾರಿಕೆಗೆ ಧಕ್ಕೆ : ಸಿದ್ದರಾಮಯ್ಯ

ಬೆಂಕಿಯನ್ನು ಹತೋಟಿಗೆ ತರಲು ಹರಸಾಹಸ ಪಡಲಾಯಿತು ಹಲವು ಪ್ರಯತ್ನಗಳ ಹೊರತಾಗಿಯೂ ಜ್ವಾಲೆಯು ಹತ್ತಿರದ ಕಟ್ಟಡಗಳಿಗೆ ಹರಡಿತು ಎಂದು ಅವರು ಹೇಳಿದ್ದಾರೆ. ಸ್ಥಳೀಯ ಪೊಲೀಸರ ಪ್ರಕಾರ, ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡಿರಬಹುದು. ಆದರೂ ಬೆಂಕಿಯ ಕಾರಣವನ್ನು ಕಂಡುಹಿಡಿಯಲು ನಮಗೆ ಇನ್ನೂ ಸಾಧ್ಯವಾಗುತ್ತಿಲ್ಲ ಎಂದು ಪುರಿ ಜಿಲ್ಲೆ ಹೆಚುವರಿ ಜಿಲ್ಲಾಧಿಕಾರಿ ಭವತರನ್ ಸಾಹು ಹೇಳಿದ್ದಾರೆ.

Major, fire, Puri, shopping, complex, 100 people, rescued,

Articles You Might Like

Share This Article