ಕೇಂದ್ರ ಬಜೆಟ್‌ನಲ್ಲಿ ಪೆನ್ನಾರ್-ಕಾವೇರಿ ಸೇರಿ 5 ಅಂತಾರಾಜ್ಯ ನದಿಗಳ ಜೋಡಣೆ ಘೋಷಣೆ

Social Share

ನವದೆಹಲಿ,ಫೆ.1- ಮಹತ್ವದ ಬೆಳವಣಿಗೆಯೊಂದರಲ್ಲಿ ಐದು ಅಂತಾರಾಜ್ಯ ನದಿಗಳ ಜೋಡಣೆಯನ್ನು ಘೋಷಣೆ ಮಾಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇದಕ್ಕಾಗಿ ಕರಡು ವಿಸ್ತೃತ ಯೋಜನಾ ವರದಿ ಸಿದ್ಧಗೊಂಡಿದೆ ಎಂದು ತಿಳಿಸಿದ್ದಾರೆ.
ಸಂಸತ್‍ನಲ್ಲಿ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಿದ ನಿರ್ಮಲಾ ಸೀತಾರಾಮನ್ ಅವರು, ಗೋದಾವರಿ-ಕೃಷ್ಣ, ಕೃಷ್ಣ-ಪೆನ್ನಾರ್, ಪೆನ್ನಾರ್-ಕಾವೇರಿ, ಯಮುನಾ-ಗಂಗಾ ಸೇರಿದಂತೆ ಒಟ್ಟು ಐದು ನದಿಗಳ ಜೋಡಣೆಗೆ ಕರಡು ಯೋಜನೆ ಸಿದ್ಧಗೊಳಿಸಲಾಗಿದೆ. ಸಂಬಂಸಿದ ರಾಜ್ಯಗಳ ನಡುವೆ ಒಮ್ಮತ ಮೂಡಿದ ಬಳಿಕ ನದಿ ಜೋಡಣೆಯನ್ನು ಅನುಷ್ಠಾನಕ್ಕೆ ತರುವುದಾಗಿ ಅವರು ಘೋಷಿಸಿದ್ದಾರೆ.
2022-23ರನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಣೆ ಮಾಡಲಾಗಿದೆ. ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಗಂಗಾನಂದಿಯ ಉದ್ದಕ್ಕೂ 5 ಕಿ.ಮೀ. ಕಾರಿಡಾರ್‍ಗಳಲ್ಲಿ ರೈತರ ಭೂಮಿಯನ್ನು ಕೇಂದ್ರೀಕರಿಸಿ ರಾಸಾಯನಿಕ ಮುಕ್ತ ಕೃಷಿಗೆ ಬೆಂಬಲ ನೀಡಲಾಗುತ್ತಿದೆ.
2021-22ನೇ ಸಾಲಿನಲ್ಲಿ 163 ಲಕ್ಷ ರೈತರಿಂದ 1208 ಮೆಟ್ರಿಕ್ ಟನ್ ಗೋ ಸಂಗ್ರಹಣೆ ಮಾಡಲಾಗಿತ್ತು. 2.37 ಲಕ್ಷ ಕೋಟಿ ಬೆಂಬಲ ಬೆಲೆಯಡಿ ರೈತರಿಗೆ ಹಣ ನೀಡಲಾಗಿತ್ತು ಎಂದು ಸಚಿವರು ತಿಳಿಸಿದ್ದಾರೆ. ಕೃಷಿ ಉತ್ಪನ್ನ ಮೌಲ್ಯಗಳ ಸರಪಳಿಗಾಗಿ ನವೋದ್ಯಮಗಳನ್ನು ಬೆಂಬಲಿಸಲಾಗುತ್ತಿದ್ದು, ನಬಾರ್ಡ್ ಮೂಲಕ ಸಹಹೂಡಿಕೆ ಮಾದರಿಯಲ್ಲಿ ಸಂಯೋಜಿತ ಬಂಡವಾಳವನ್ನು ಸಂಗ್ರಹಿಸಲಾಗುತ್ತದೆ ಎಂದು ವಿತ್ತ ಸಚಿವರು ತಿಳಿಸಿದ್ದಾರೆ.
ರೈತರಿಗೆ ಆಧುನಿಕ ತಂತ್ರಜ್ಞಾನ ಒದಗಿಸಲು ಕೃಷಿ ಕ್ಷೇತ್ರದಲ್ಲಿರುವ ಉದ್ಯಮಗಳ ಸಹಕಾರದಲ್ಲಿ ಪಿಪಿಪಿ ಮಾದರಿಯಲ್ಲಿ ಯೋಜನೆ ರೂಪಿಸಲಾಗುವುದು. ಕೃಷಿ ದಾಖಲಾತಿಗಳನ್ನು ಡಿಜಿಟಿಲೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಶೂನ್ಯ ಬಂಡವಾಳ ಮತ್ತು ಮೌಲ್ಯ ವರ್ಧನೆ, ನೈಸರ್ಗಿಕ ಕೃಷಿ ಉತ್ತೇಜನಕ್ಕೆ ರಾಜ್ಯಗಳಲ್ಲಿರುವ ವಿಶ್ವವಿದ್ಯಾನಿಲಯಗಳ ಮೂಲಕ ಹೆಚ್ಚು ಒತ್ತು ನೀಡಲಾಗುವುದು.
ಕೃಷಿ ಯಾಂತ್ರಿಕರಣಕ್ಕೆ ಸಹಾಯ ಕೇಂದ್ರಗಳ ಮೂಲಕ ಹೆಚ್ಚಿನ ಅವಕಾಶ ಕಲ್ಪಿಸಲಾಗುತ್ತದೆ. ನೀರವರಿ ಯೋಜನೆಯ ಸದ್ಬಳಕೆಗೆ 44,605 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಹೇಳಿದರು. ಕೃಷಿಕರು ತಮ್ಮ ಬೆಳೆಗಳಿಗೆ ಔಷ ಸಿಂಪಡಿಸಲು ಭೂ ಸರ್ವೆ ಹಾಗೂ ಬೆಳೆ ಸಮೀಕ್ಷೆಗಾಗಿ ಕಿಸಾನ್ ಡ್ರೋನ್‍ಗಳನ್ನು ಬಳಕೆ ಮಾಡಲಾಗುತ್ತದೆ. ಈ ಮೂಲಕ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಗೆ ಆದ್ಯತೆ ನೀಡಲಾಗುವುದು ಎಂದರು.

Articles You Might Like

Share This Article