ಏಕಾದಶಿ, ಸಂಕ್ರಾತಿ ಆಚರಣೆಗೆ ಬ್ರೇಕ್..?

Social Share

ಬೆಂಗಳೂರು,ಜ.11- ಸೋಂಕು ಉಲ್ಬಣಗೊಳ್ಳುತ್ತಲೆ ಇರುವುದರಿಂದ ಹಬ್ಬ ಹರಿದಿನಗಳ ಆಚರಣೆಗೆ ಬ್ರೇಕ್ ಬೀಳುವ ಸಾಧ್ಯತೆಗಳಿವೆ. ಸೋಂಕು ಏರಿಕೆಯಾಗುತ್ತಲೆ ಇರುವುದರಿಂದ ಧಾರ್ಮಿಕ ಆಚರಣೆಗೂ ಹೊಸ ಗೈಡ್‍ಲೈನ್ ರೂಪಿಸಲು ಸರ್ಕಾರ ಗಂಭೀರ ಚಿಂತನೆ ಮಾಡುತ್ತಿದೆ ಎಂಬ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಬರುವ ದಿನಗಳಲ್ಲಿ ವೈಕುಂಠ ಏಕಾದಶಿ ಮತ್ತು ಸಂಕ್ರಾತಿ ಹಬ್ಬ ಬರಲಿದ್ದು, ಈ ಸಂದರ್ಭದಲ್ಲಿ ಜನ ದೇವರ ದರ್ಶನಕ್ಕೆ ಕಿ.ಮೀ.ಗಟ್ಟಲೆ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯುವುದು ವಾಡಿಕೆ.
ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿ ಜನ ಮೈಮರೆತು ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದರೆ ಸೋಂಕು ಶರವೇಗದಲ್ಲಿ ಹರಡುವ ಸಾಧ್ಯತೆ ಇರುವುದರಿಂದ ಸರ್ಕಾರ ಹಬ್ಬಗಳ ಆಚರಣೆಗೆ ಬ್ರೇಕ್ ಹಾಕಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಇದರ ಜತೆಗೆ ಮುಂದಿನ ದಿನಗಳಲ್ಲಿ ಸಾಲು ಸಾಲು ಜಾತ್ರಾ ಮಹೋತ್ಸವಗಳು ಬರಲಿದೆ. ಇಂತಹ ಸಂದರ್ಭದಲ್ಲಿ ಜನರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಭವಿಷ್ಯದಲ್ಲಿ ಮತ್ತಷ್ಟು ಅನಾಹುತಗಳು ಸಂಭವಿಸುವ ಸಾಧ್ಯತೆ ಇರುವುದನ್ನು ಮನಗಂಡು ಇಂತಹ ತೀರ್ಮಾನಕ್ಕೆ ಬರಲಾಗಿದೆ.
ಹಬ್ಬ ಹರಿದಿನಗಳ ಆಚರಣೆಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡುವುದರಿಂದ ಜನರ ನಿಯಂತ್ರಣ ಸಾಧ್ಯ ಹೀಗಾಗಿ ಹೊಸ ಗೈಡ್‍ಲೈನ್ಸ್ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

Articles You Might Like

Share This Article