Saturday, September 23, 2023
Homeಅಂತಾರಾಷ್ಟ್ರೀಯ'ಮೇಕ್ ಇನ್ ಇಂಡಿಯಾ' ಕಾರ್ಯಕ್ರಮವನ್ನು ಹಾಡಿ ಹೊಗಳಿದ ಪುಟಿನ್

‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮವನ್ನು ಹಾಡಿ ಹೊಗಳಿದ ಪುಟಿನ್

- Advertisement -

ನವದೆಹಲಿ,ಸೆ.13- ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಹೆಚ್ಚಿನ ಉತ್ತೇಜನ ನೀಡುವ ಮೂಲಕ ಭಾರತದ ಪ್ರಧಾನಿ ನರೇಂದ್ರಮೋದಿಯವರು ಉತ್ತಮವಾದ ಕೆಲಸ ಮಾಡುತ್ತಿದ್ದಾರೆಂದು ರಷ್ಯಾದ ಅಧ್ಯಕ್ಷ ವ್ಯಾಡಿಮಿನ್ ಪುಟಿನ್ ಹಾಡಿಹೊಗಳಿದ್ದಾರೆ. ರಷ್ಯಾ ನಿರ್ಮಿತ ಕಾರುಗಳ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮಲ್ಲಿ ಆಗ (90 ರ ದಶಕದಲ್ಲಿ) ದೇಶೀಯವಾಗಿ ತಯಾರಿಸಿದ ಕಾರುಗಳು ಇರಲಿಲ್ಲ. ಆದರೆ ನಾವು ಈಗ ಉತ್ಪಾದನೆ ಮಾಡುತ್ತಿದ್ದೇವೆ. 1990ರ ದಶಕದಲ್ಲಿ ನಾವು ಅಪಾರ ಪ್ರಮಾಣದಲ್ಲಿ ಖರೀದಿಸಿದ ಮರ್ಸಿಡಿಸ್ ಅಥವಾ ಆಡಿ ಕಾರುಗಳಿಗಿಂತ ಅವು ಹೆಚ್ಚು ಸಾಧಾರಣವಾಗಿ ಕಾಣುತ್ತವೆ ಎಂಬುದು ನಿಜ.

ಆದರೆ ಇದು ಸಮಸ್ಯೆ ಅಲ್ಲ. ನಮ್ಮ ಅನೇಕ ಪಾಲುದಾರರನ್ನು ನಾವು ಅನುಕರಿಸಬೇಕು ಎಂದು ನಾನು ಭಾವಿಸುತ್ತೇನೆ. ಉದಾಹರಣೆಗೆ, ಭಾರತ. ಅವರು ಭಾರತೀಯ ನಿರ್ಮಿತ ವಾಹನಗಳ ತಯಾರಿಕೆ ಮತ್ತು ಬಳಕೆಯ ಮೇಲೆ ಕೇಂದ್ರೀಕರಿಸಿದ್ದಾರೆ. ಹಾಗಾಗಿ ನಾವು ರಷ್ಯಾ ನಿರ್ಮಿತ ಆಟೋಮೊಬೈಲ್‍ಗಳನ್ನು ಬಳಸುವುದು ಸೂಕ್ತ ಎಂದು ಸಲಹೆ ನೀಡಿದರು.

- Advertisement -

ವಿಯೆಟ್ನಾಂನಲ್ಲಿ ಭಾರಿ ಅಗ್ನಿ ಅನಾಹುತ, 50 ಮಂದಿ ಬಲಿ

ನಾವು ರಷ್ಯನ್ ನಿರ್ಮಿತ ವಾಹನಗಳನ್ನು ಹೊಂದಿದ್ದೇವೆ. ಅವುಗಳನ್ನು ಬಳಸಬೇಕು. ಇದು ನಮ್ಮ ಡಬ್ಲ್ಯೂಟಿಒ ಬಾಧ್ಯತೆಗಳ ಯಾವುದೇ ಉಲ್ಲಂಘನೆಗೆ ಕಾರಣವಾಗುವುದಿಲ್ಲ. ಇದು ರಾಜ್ಯದ ಖರೀದಿಗಳಿಗೆ ಸಂಬಂಧಿಸಿದೆ. ದೇಶೀಯವಾಗಿ ತಯಾರಿಸಿದ ವಾಹನಗಳನ್ನು ಬಳಸುವುದು ಉತ್ತಮ. ಈ ವಿಚಾರದಲ್ಲಿ ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತ ಈಗಾಗಲೇ ಉದಾಹರಣೆ ಸ್ಥಾಪಿಸಿದೆ.

ಈ ನಿಟ್ಟಿನಲ್ಲಿ ನಾವು ನಮ್ಮ ಅನೇಕ ಪಾಲುದಾರರಿಂದ, ಅದರಲ್ಲಿಯೂ ವಿಶೇಷವಾಗಿ ಭಾರತದಿಂದ ತುಂಬಾ ಕಲಿಯಬೇಕಿದೆ. ಅವರು ಹೆಚ್ಚಾಗಿ ಭಾರತದಲ್ಲೇ ಉತ್ಪಾದಿಸುವ ಕಾರುಗಳ ಬಳಕೆಯ ಮೇಲೆ ಕೇಂದ್ರೀಕರಿಸುತ್ತಿದ್ದಾರೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರ ಮುಖ್ಯವಾಗಿದೆ. ಭಾರತದ ಉತ್ಪನ್ನಗಳನ್ನು ಬಳಸಲು ಜನರನ್ನು ಉತ್ತೇಜಿಸುವ ಮೂಲಕ ಸರಿಯಾದ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿಯೂ ಅಂತಹ ವಾಹನಗಳು ಲಭ್ಯವಿವೆ ಎಂದು ಪುಟಿನ್ ವಿವರಿಸಿದರು.

ನಿಮಗೆ ಗೊತ್ತಾ ಆಗ ನಮ್ಮಲ್ಲಿ ಸ್ವದೇಶಿ ನಿರ್ಮಿತ ಕಾರುಗಳಿರಲಿಲ್ಲ. ಆದರೆ, ಈಗ ನಾವು ಹೊಂದಿದ್ದೇವೆ. ನಾವು 1990ರ ದಶಕದಲ್ಲಿ ಅಪಾರ ಪ್ರಮಾಣದಲ್ಲಿ ಖರೀದಿಸಿದ ಮರ್ಸಿಡಿಸ್ ಅಥವಾ ಆಡಿ ಕಾರುಗಳಿಗಿಂತ ಸ್ವದೇಶಿ ಕಾರುಗಳು ಹೆಚ್ಚು ಸಾಧಾರಣವಾಗಿ ಕಾಣುತ್ತವೆ ಎಂಬುದು ನಿಜ, ಆದರೆ ಇದು ಸಮಸ್ಯೆಯಲ್ಲ. ಈ ವಿಚಾರದಲ್ಲಿ ನಾವು ನಮ್ಮ ಅನೇಕ ಪಾಲುದಾರರನ್ನು ಅನುಕರಿಸಬೇಕು ಎಂದು ನಾನು ಭಾವಿಸುತ್ತೇನೆ, ಉದಾಹರಣೆಗೆ ಭಾರತ. ಅಲ್ಲಿ ದೇಶಿ ನಿರ್ಮಿತ ವಾಹನಗಳ ತಯಾರಿಕೆ ಮತ್ತು ಬಳಕೆಯ ಮೇಲೆ ಕೇಂದ್ರೀಕರಿಸಿದ್ದಾರೆ ಎಂದರು.

ನಾವು ನಮ್ಮದೇಯಾದ ಆಟೋಮೊಬೈಲ್ಸ್ ಹೊಂದಿದ್ದೇವೆ. ಅವುಗಳನ್ನು ಖಂಡಿತವಾಗಿ ಬಳಸಬೇಕು. ಸ್ವದೇಶಿ ಆಟೋ ಮೊಬೈಲ್ಸ್ ಬಳಸುವುದು ಸಂಪೂರ್ಣ ಉತ್ತಮವಾಗಿದೆ. ಇದು ನಮ್ಮ ವಿಶ್ವ ವ್ಯಾಪಾರ ನೀತಿಯ ಬಾಧ್ಯತೆಗಳ ಯಾವುದೇ ಉಲ್ಲಂಘನೆಗಳಿಗೆ ಕಾರಣವಾಗುವುದಿಲ್ಲ ಮತ್ತು ಇದು ರಾಜ್ಯದ ಖರೀದಿಗಳಿಗೆ ಸಂಬಂಧಿಸಿದೆ.

ವಿವಿಧ ವರ್ಗದ ಅಧಿಕಾರಿಗಳು ಯಾವ ಕಾರುಗಳನ್ನು ಓಡಿಸಬಹುದು ಎಂಬುದರ ಕುರಿತು ನಾವು ನಿರ್ದಿಷ್ಟ ಸರಪಳಿಯನ್ನು ರಚಿಸಬೇಕು. ಇದರಿಂದ ಅವರು ದೇಶೀಯವಾಗಿ ತಯಾರಿಸಿದ ಕಾರುಗಳನ್ನು ಬಳಸುತ್ತಾರೆ ಎಂದು ಹೇಳುವ ಮೂಲಕ ಮೇಡ್ ಇನ್ ರಷ್ಯಾ ಪ್ರಾಮುಖ್ಯತೆಯನ್ನು ಪುಟಿನ್ ಒತ್ತಿ ಹೇಳಿದರು.

#VladimirPutin, #PMModi, #MakeinIndia, #initiative,

- Advertisement -
RELATED ARTICLES
- Advertisment -

Most Popular