ಮೇಕಪ್ ಕೃಷ್ಣ ವಿಧಿವಶ

ಬೆಂಗಳೂರು :  ಹಿರಿಯ ರಂಗಕರ್ಮಿ ಮೇಕಪ್ ಕೃಷ್ಣ(56)ವಿಧಿವಶರಾಗಿದ್ದಾರೆ. ಮೇಕಪ್ ಕೃಷ್ಣ ಮೂತ್ರಪಿಂಡ ವೈಫಲ್ಯದಿಂದ ಕಳೆದ ಕೆಲವು ದಿನಗಳಿಂದ ಬಳಲುತ್ತಿದ್ದು, ಇಂದು ನಿಧನರಾಗಿದ್ದಾರೆ. ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಮೂತ್ರಪಿಂಡ ಚಿಕಿತ್ಸೆಗಾಗಿ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದು, ಇಂದು ಗೊಲ್ಲಹಳ್ಳಿಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಮೃತರ ಅಂತಿಮ ದರ್ಶನವನ್ನು ಮಧ್ಯಾಹ್ನ ಮೂರು ಗಂಟೆಗೆ ವರೆಗೂ ಬನಶಂಕರಿ ಎರಡನೇ ಹಂತದಲ್ಲಿರುವ (ಎಂಟಿಆರ್ ವ್ಯಾಪಾರ ಮಳಿಗೆ) ಅವರ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬ ವರ್ಗ ತಿಳಿಸಿದೆ. ವರನಟ ಡಾ.ರಾಜ್‍ಕುಮಾರ್ ಅವರ ಜೀವನ ಚರಿತ್ರೆಯನ್ನು ನಿರ್ಮಿಸಿ ಮೊದಲ ಬಾರಿಗೆ ದೂರದರ್ಶನದಲ್ಲಿ ಬಿತ್ತರಿಸಲು ಕಾರಣರಾದ ಕೃಷ್ಣ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಹಾಗೂ ನಟರಾಗಿಯೂ ಪ್ರಸಿದ್ಧರಾಗಿದ್ದರು.