ಮಾಲ್ಡೀವ್ಸ್‌ಗೆ ಕೆಎಂಎಫ್ ಹಾಲು

Social Share

ಹಾಸನ,ಡಿ.13- ಕೆಎಂಎಫ್‍ನಿಂದ ಇದೇ ಪ್ರಥಮ ಬಾರಿಗೆ ದ್ವೀಪ ರಾಷ್ಟ್ರ ಮಾಲ್ಡೀವ್ಸ್‍ಗೆ ಹಾಲು ಮಾರಾಟ ಪ್ರಾರಂಭಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಎಚ್.ಡಿ. ರೇವಣ್ಣ ತಿಳಿಸಿದ್ದಾರೆ.

ನಗರದ ಡೈರಿ ಆವರಣದಲ್ಲಿ ಮಾಲ್ಡೀವ್ಸ್‍ಗೆ ರಫ್ತಾಗುವ ಹಾಲಿನ ವಾಹನಗಳಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಕೆಎಂಎಫ್ ವ್ಯಾಪ್ತಿಗೆ ಬರುವ ಹಾಸನ ಹಾಲು ಒಕ್ಕೂಟದಿಂದ ದ್ವೀಪ ರಾಷ್ಟ್ರ ಮಾಲ್ಡೀವ್ಸ್‍ಗೆ 17 ಸಾವಿರ ಯುಎಚ್‍ಟಿ ಟೆಟ್ರಾ ಪ್ಯಾಕ್‍ನಲ್ಲಿ ಹಾಲು ರಫ್ತು ಪ್ರಾರಂಭ ಮಾಡಲಾಗಿದೆ.

ಜ.1ರಿಂದ ಅರಬ್ ರಾಷ್ಟ್ರಗಳಿಗೆ ಪ್ರತಿನಿತ್ಯ 50 ಸಾವಿರ ಲೀಟರ್ ಯು.ಎಚï.ಟಿ ಹಾಲಿನ ಬಾಟಲ್ ಹಾಗೂ ಸುವಾಸಿತ ಪೆಟ್ ಬಾಟಲ್‍ಗಳನ್ನು ರಫ್ತು ಮಾಡಲಾಗುವುದು ಎಂದು ಹೇಳಿದ್ದಾರೆ.

ರಾಜ್ಯಾದ್ಯಂತ ಮಾರಾಟ ಮಾಡುತ್ತಿರುವ ನಂದಿನಿ ಬ್ರಾಂಡ್‍ಬ ಸ್ಥಳೀಯ ಹಾಲು ಮತ್ತು ಮೊಸರಿನ ಮಾರಾಟ ದರಗಳನ್ನು ಪ್ರತಿ ಲೀಟರ್‍ಗೆ 2 ರಂತೆ ಹೆಚ್ಚಿಸಿ ಪರಿಷ್ಕರಿಸಿದ್ದು, ಕರ್ನಾಟಕ ಹಾಲು ಮಹಾ ಮಂಡಳಿ ಆದೇಶದಂತೆ ನ.24 ರಿಂದ ಜಾರಿಗೊಳಿಸಲಾಗಿತ್ತು ಎಂದರು.

ಮಹದಾಯಿ ಯೋಜನೆಗೆ ಅನುಮೋದನೆ ಸಿಗುವುದಾಗಿ ಕಾರಜೋಳ ವಿಶ್ವಾಸ

ಹಾಸನ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಹಾಲು ಮತ್ತು ಮೊಸರಿನ ಸ್ಥಳೀಯ ಮಾರಾಟ ಪ್ರಮಾಣ ಪ್ರತಿದಿನ 2 ಲಕ್ಷ ಲೀಟರ್‍ಗಳಿದ್ದು, ಮದರ್ ಡೇರಿಗೆ 1.3 ಲಕ್ಷ ಕೆ.ಜಿ. ಹಾಲನ್ನು ಮಾರಾಟ ಮಾಡುತ್ತಿದೆ. ಮಾರಾಟ ದರ ಹೆಚ್ಚಳದಿಂದ ದಿನವೊಂದಕ್ಕೆ ಒಟ್ಟಾರೆ 6.20 ಲಕ್ಷ ಆದಾಯ ಬರುತ್ತಿದೆ. ಒಕ್ಕೂಟದ ಹಾಲಿನ ಶೇಖರಣೆ ಪ್ರಮಾಣ 10.25 ಲಕ್ಷ ಲೀಟರ್‍ಗೆ ಹೋಲಿಸಿದಾಗ ಪ್ರತಿ ಕೆಜಿಗೆ 60 ಪೈಸೆಗಳಂತೆ ಮಾತ್ರ ಪಾವತಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಹರ್ಬಲ್ ಹಾಲು ಮಾರಾಟ: ಒಕ್ಕೂಟದಲ್ಲಿ ಸ್ಥಾಪಿಸಿರುವ ಪೆಟ್ ಬಾಟಲ್ ಘಟಕದಲ್ಲಿ ಸುಮಾರು 9 ಮಾದರಿಯ ಸುವಾಸಿತ ಹಾಲನ್ನು ಉತ್ಪಾದನೆ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ, ಇದರ ಜೊತೆಗೆ ಒಂದು ಲೀಟರ್ ಪೆಟ್ ಬಾಟಲ್‍ನಲ್ಲಿ ಯು.ಹೆಚï.ಟಿ. ಸಂಸ್ಕರಿತ ಬಿಳಿ ಹಾಲು ಉತ್ಪಾದನೆ ಮಾಡಲಾಗಿದ್ದು, ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ ಎಂದರು.

ರಾಸುಗಳಿಗೆ ವಿಮೆ: ರಾಸುಗಳ ಮರಣದಿಂದ ರೈತರಿಗೆ ಆಗುವ ನಷ್ಟವನ್ನು ತಪ್ಪಿಸಲು ಹೊಸದಾಗಿ ಖರೀದಿಸುವ ಹಾಗೂ ಹಾಲಿ ಇರುವ ರಾಸುಗಳನ್ನು ಕಡ್ಡಾಯ ವಾಗಿ ವಿಮೆಗೆ ಒಳಪಡಿಸಿದ್ದು, ವಿಮೆ ಕಂತು 995 ಗಳಾಗಿದ್ದು, ಇದರಲ್ಲಿ ಶೇ.60 ರಷ್ಟನ್ನು ಒಕ್ಕೂಟದಿಂದ ಭರಿಸಲಾಗುತ್ತಿದೆ ಎಂದರು.

ದೆಹಲಿ ಸಭೆ ಬಳಿಕ ರಣೋತ್ಸಾಹದಲ್ಲಿ ಕಾಂಗ್ರೆಸ್ ಕಲಿಗಳು

ಪ್ರತಿಭಾ ಪುರಸ್ಕಾರ: ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರುಗಳ ಮಕ್ಕಳು ಗ್ರಾಮೀಣ ಭಾಗದ ಶಾಲೆಗಳಲ್ಲಿ ಎಸ್.ಎಸ್.ಎಲï.ಸಿ. ಹಾಗೂ ಪಿ.ಯು.ಸಿ.ಯಲ್ಲಿ ವ್ಯಾಸಂಗ ಮಾಡಿ, ಏಪ್ರಿಲï-2022 ರಲ್ಲಿ ತೇರ್ಗಡೆ ಹೊಂದಿ ಶೇ.90 ಕ್ಕಿಂತಲೂ ಹೆಚ್ಚಿನ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ರೈತ ಕಲ್ಯಾಣ, ಟ್ರಸ್ಟ್ ವತಿಯಿಂದ 6 ಸಾವಿರ ಪ್ರತಿಭಾ ಪುರಸ್ಕಾರ ನೀಡಲು ಉದ್ದೇಶಿಸಿದ್ದು, ಸದ್ಯದಲ್ಲಿಯೇ ವಿತರಣೆ ಕಾರ್ಯಕ್ರಮ ಆಯೋ ಜಿಸಲಾಗುವುದು ಎಂದರು.

ಯಶಸ್ವಿನಿ ಆರೋಗ್ಯ ರಕ್ಷಾ ಯೋಜನೆ: ಯಶಸ್ವಿನಿ ಆರೋಗ್ಯ ರಕ್ಷಾ ಯೋಜನೆಗೆ ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರುಗಳ 1.0 ಲಕ್ಷ ಕುಟುಂಬಗಳಿಗೆ 5 ಕೋಟಿ ಮೀಸಲಿರಿಸಲಾಗಿದೆ. ಈ ಯೋಜನೆಯಡಿ ಲಾಭ ಪಡೆಯಲು ಪ್ರತಿ ಹಾಲು ಉತ್ಪಾದಕರಿಗೆ 500 ನಿಗದಿ ಮಾಡಲಾಗಿದೆ. ಒಕ್ಕೂಟವು 250 ಪಾವತಿಸಲಿದ್ದು ಹಾಲು ಉತ್ಪಾದಕರು 250 ಪಾವತಿಸಿ ನೋಂದಾಯಿಸಿಕೊಳ್ಳಲು ಡಿ. 30 ಕಡೇ ದಿನವಾಗಿದೆ. ಹಾಲು ಉತ್ಪಾದಕರು ಯೋಜನೆಯ ಲಾಭ ಪಡೆಯುವಂತೆ ಮನವಿ ಮಾಡಿದರು.

ಆಸ್ಟ್ರೇಲಿಯಾದಲ್ಲಿ ಗುಂಡಿನ ಚಕಮಕಿ, 6 ಜನರ ಸಾವು

ಲಕ್ಷ ಲಕ್ಷ ಹಣಕ್ಕೆ ಹುದ್ದೆ ಹರಾಜು: ಕೆಎಂಎಫ್ ನಿಂದ ಇತ್ತೀಚೆಗೆ ಖಾಲಿ ಇರುವ 382 ಹುದ್ದೆ ಭರ್ತಿ ಮಾಡಿಕೊಳ್ಳಲು ಕೆಲ ಅಭ್ಯರ್ಥಿಯಿಂದ 20 ಲಕ್ಷದಿಂದ 80 ಲಕ್ಷ ರೂ. ವರೆಗೂ ಹಣ ಪಡೆದು ಹುದ್ದೆಗಳನ್ನು ಹರಾಜು ಹಾಕಲಾಗುತ್ತಿದೆ ಎಂದು ರೇವಣ್ಣ ದೂರಿದರು.

Maldives, KMF Milk, Hassan,

Articles You Might Like

Share This Article