ನಮ್ಮ ಪೈಲಟ್‌ಗಳಿಗೆ ಭಾರತ ಕೊಟ್ಟ ಯುದ್ಧ ವಿಮಾನಗಳನ್ನು ನಡೆಸುವ ಸಾಮರ್ಥ್ಯವಿಲ್ಲ : ಮಾಲ್ಡೀವ್ಸ್ ರಕ್ಷಣಾ ಸಚಿವ

ಮಾಲೆ,ಮೇ 13- ಭಾರತ ದೇಣಿಗೆಯಾಗಿ ನೀಡಿದ ಮೂರು ಯುದ್ಧ ವಿಮಾನಗಳ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ತಮ್ಮ ಪೈಲಟ್‌ಗಳಿಗೆ ಇಲ್ಲ ಎಂದು ಮಾಲ್ಡೀವ್ಸ್ ರಕ್ಷಣಾ ಸಚಿವರು ಅಲವತ್ತುಕೊಂಡಿದ್ದಾರೆ. ಚೀನಾ ಪರ ಧೋರಣೆಯ ಅಧ್ಯಕ್ಷ ಮೊಹಮ್ಮದ್‌ ಮುಯಿಜ್ಜು ಅವರ ಹಠಮಾರಿತನದಿಂದಾಗಿ ದ್ವೀಪ ರಾಷ್ಟ್ರದಿಂದ ಭಾರತದ 76 ರಕ್ಷಣಾ ಸಿಬ್ಬಂದಿ ನಿರ್ಗಮಿಸಿದ ಕೆಲವು ದಿನಗಳ ಬಳಿಕ ಅಲ್ಲಿನ ರಕ್ಷಣಾ ಸಚಿವ ಘಾಸೆನ್‌ ಮೌಮೂನ್‌ ಅವರು, ಮಾಲ್ಡೀವ್ಸ್ ಸೇನೆಯು ಅಷ್ಟು ಸಮರ್ಥ ಪೈಲಟ್‌ಗಳನ್ನು ಹೊಂದಿಲ್ಲ ಎಂದಿದ್ದಾರೆ. ರಾಜಧಾನಿ ಮಾಲೆಯ ಅಧ್ಯಕ್ಷರ ಕಚೇರಿಯಲ್ಲಿ ಭಾನುವಾರ … Continue reading ನಮ್ಮ ಪೈಲಟ್‌ಗಳಿಗೆ ಭಾರತ ಕೊಟ್ಟ ಯುದ್ಧ ವಿಮಾನಗಳನ್ನು ನಡೆಸುವ ಸಾಮರ್ಥ್ಯವಿಲ್ಲ : ಮಾಲ್ಡೀವ್ಸ್ ರಕ್ಷಣಾ ಸಚಿವ