ಮಾಲ್ ಆಫ್ ಅಮೆರಿಕಾದಲ್ಲಿ ಗುಂಡಿನ ದಾಳಿ, ಯುವಕನ ಹತ್ಯೆ

Social Share

ಬ್ಲೂಮಿಂಗ್ಟನ್,ಡಿ.24- ಕ್ರಿಸ್‍ಮಸ್‍ಗೂ ಮುನ್ನಾ ದಿನ ಅಮೆರಿಕಾದ ಪ್ರತಿಷ್ಠಿತ ಮಾಲ್‍ನಲ್ಲಿ ಬಂದೂಕು ಸದ್ದು ಮಾಡಿದ್ದು, ಯುವಕನೊಬ್ಬ ಹತ್ಯೆಯಾಗಿದ್ದಾನೆ.

ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಮಾಲ್ ಆಫ್ ಅಮೆರಿಕಾದಲ್ಲಿ ಗುಂಡಿನ ಸದ್ದು ಕೇಳಿ ಬಂದಿತ್ತು. ಕ್ರಿಸ್‍ಮಸ್ ಹಬ್ಬಕ್ಕೆ ಶಾಪಿಂಗ್ ಮಾಡಲು ಆಗಮಿಸಿ ಗ್ರಾಹಕರು ಗುಂಡಿನ ಸದ್ದು ಕೇಳಿ ಚೆಲ್ಲಾಪಿಲ್ಲಿಯಾಗಿ ಓಡಲಾರಂಭಿಸಿದರು. ಸ್ಥಳಕ್ಕೆ ಆಗಮಿಸಿದ ಬ್ಲೂಮಿಂಗ್ಟನ್ ಪೊಲೀಸರು ಮಾಲ್ ಅನ್ನು ಸುತ್ತುವರಿದ್ದರು. ತುರ್ತು ವೈದ್ಯಕೀಯ ನೆರವು ಹಾಗೂ ಅಗ್ನಿ ಶಾಮಕ ದಳ ಧಾವಿಸಿತ್ತು.

ಹೆಚ್ಚಿನ ಅಪಾಯವನ್ನು ತಪ್ಪಿಸಲು ಕೆಲ ಕಾಲ ಮಾಲ್ ಅನ್ನು ಲಾಕ್‍ಡೌನ್ ಮಾಡಲಾಯಿತು. ಒಳಗಿರುವ ಗ್ರಾಹಕರು ಸುರಕ್ಷಿತ ಸ್ಥಳಗಳಲ್ಲಿ ಉಳಿದಿರುವಂತೆ ಪೊಲೀಸರು ಸೂಚನೆ ನೀಡಿದರು.

ಬಿಬಿಎಂಪಿ ವಾರ್ಡ್ ಮರುವಿಂಗಡಣೆಗೆ ಕೋಟಿ ಕೋಟಿ ಖರ್ಚು

ಮಾಲ್‍ನ ಹೊರಗೆ ಹತ್ತಾರು ಪೊಲೀಸ್ ವಾಹನಗಳು ಮತ್ತು ಕ್ಷೀಪ್ರ ಕಾರ್ಯಾಚರಣೆಯ ತಂಡಗಳು ಧಾವಂತದಿಂದ ಓಡಾಡುತ್ತಿರುವುದು ಕಂಡು ಬಂತು. ಒಳಗೆ ಏನಾಗಿದೆ ಎಂದು ಆರ್ಥವಾಗದೆ ಜನ ಕಂಗಾಲಾಗಿದ್ದರು. ಒಳಗಿರುವವರ ಪರಿಸ್ಥಿತಿಯ ಮಾಹಿತಿಯೂ ತಿಳಿದಿರಲಿಲ್ಲ.

ಇತ್ತೀಚೆಗೆ ಅಮೆರಿಕಾದಲ್ಲಿ ಮಾಲ್‍ಗಳು, ವಾಣಿಜ್ಯ ಸಂಕೀರ್ಣಗಳು, ಶಾಲೆಗಳು, ಪಾರ್ಕ್‍ಗಳಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸುವುದು ಸಾಮಾನ್ಯವಾಗಿತ್ತು. ಅದರಿಂದಾಗಿ ಕಳೆದ ನಾಲ್ಕೈದು ತಿಂಗಳಿನಿಂದ ದುರ್ಘಟನೆ ನಡೆದ ಸ್ಥಳವನ್ನು ಸುತ್ತುವರೆಯುವ ಪೊಲೀಸರು ತಕ್ಷಣಕ್ಕೆ ಹೆಚ್ಚಿನ ಮಾಹಿತಿ ನೀಡುತ್ತಿರಲಿಲ್ಲ. ಕೆಲವು ಘಟನೆಗಳು ಮಾಹಿತಿ ಇಲ್ಲದೆ ಮುಚ್ಚಿ ಹೋಗಿದ್ದವು.

ಬ್ಲೂಮಿಂಗ್ಟನ್‍ನಲ್ಲಿನ ಹಳೆಯ ಹಾಗೂ ದೇಶದ ಪ್ರತಿಷ್ಠಿತ ಮಾಲ್‍ನಲ್ಲಿ ಗುಂಡಿನ ಸದ್ದು ಮತ್ತದೆ ರೀತಿಯ ದುಷ್ಕøತ್ಯ ಇರಬಹುದು ಎಂಬ ಅನುಮಾನಗಳು ಕಾಡಲಾರಂಭಿಸಿದ್ದವು. ಸುಮಾರು ಗಂಟೆಗಳ ಬಳಿಕ ಮಾಲ್‍ನಲ್ಲಿನ ಗ್ರಾಹಕರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಲಾಯಿತು. ನಿಧಾನಕ್ಕೆ ಲಾಕ್‍ಡೌನ್ ಅನ್ನು ತೆರವು ಮಾಡಲಾಗಿದೆ.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಲೂಮಿಂಗ್ಟನ್ ಪೊಲೀಸ್ ಮುಖ್ಯಸ್ಥ ಬೂಕರ್ ಹೊಡ್ಗೆಸ್, ಮಾಲ್‍ನಲ್ಲಿ ಎರಡು ಗುಂಪುಗಳ ನಡುವೆ ಸಂಘರ್ಷವಾಗಿದೆ. ಕಾವೇರಿನ ಮಾತಿನ ಚಕಮಕಿಯ ನಡುವೆ ವ್ಯಕ್ತಿಯೊಬ್ಬರು ಬಂದೂಕು ತೆಗೆದು ಗುಂಡು ಹಾರಿಸಿದ್ದಾರೆ. ಹಲವು ಗುಂಡುಗಳಿಂದ ಬೈಸ್ಟಾಂರ್ಡ ಜಾಕೇಟ್ ಎಂಬ 19 ವರ್ಷದ ಯುವಕ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಚಿಲುಮೆ ಅಕ್ರಮ ಪ್ರಕರಣ : ಇಬ್ಬರು IAS ಅಧಿಕಾರಿಗಳ ಅಮಾನತು ವಾಪಸ್

ಮಾಲ್‍ನ ಒಳಗೆ ಬಂದೂಕುಗಳನ್ನು ತರಲು ಬಿಡುವುದಿಲ್ಲ ಎಂದು ಆಡಳಿತ ಮಂಡಳಿ ಘೋಷಿತ್ತು. ಆದರೂ ಒಳಗೆ ಗುಂಡಿನ ದಾಳಿ ನಡೆದಿದೆ. ಮಾಲ್‍ನ ಪ್ರವೇಶದ ವೇಳೆ ಯಾರು ಭದ್ರತಾ ತಪಾಸಣೆ ಮಾಡುವುದಿಲ್ಲ ಎಂದು ಗ್ರಾಹಕರು ಅಸಮಾದಾನ ವ್ಯಕ್ತ ಪಡಿಸಿದ್ದಾರೆ.

Mall of America, brief, lockdown, shooting,

Articles You Might Like

Share This Article