ಎಐಸಿಸಿ ಅಧ್ಯಕ್ಷ ಖರ್ಗೆ ಆಗಮನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಲ್ಲಿ ಸಂಚಲನ

Social Share

ಬೆಂಗಳೂರು,ನ.6- ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಜ್ಯದವರೇ ಆದ ಮಲ್ಲಿ ಕಾರ್ಜುನ ಅವರು ಬೆಂಗಳೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನಲ್ಲಿಂದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಖರ್ಗೆ ಅವರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆಯ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಎಂ.ಬಿ.ಪಾಟೀಲ್, ಡಾ.ಜಿ.ಪರಮೇಶ್ವರ್, ಜಮೀರ್ ಅಹಮದ್ ಖಾನ್ ಸೇರಿದಂತೆ ಎಲ್ಲ ನಾಯಕರು ವಿಮಾನ ನಿಲ್ದಾಣದಲ್ಲಿಯೇ ಸ್ವಾಗತ ಕೋರಿದರು.

ಅಲ್ಲಿಂದ ಖರ್ಗೆ ಅವರನ್ನು ಅದ್ಧೂರಿ ಮೆರವಣಿಗೆಯ ಮೂಲಕ ಬೃಹತ್ ಸಮಾವೇಶ ನಡೆದ ಅರಮನೆ ಮೈದಾನಕ್ಕೆ ಕರೆತರಲಾಯಿತು. ಇತ್ತೀಚೆಗೆ ನಡೆದ ಎಐಐಸಿ ಅಧ್ಯಕ್ಷೀಯ ಚುನಾವಣೆಯಲ್ಲಿ ಖರ್ಗೆ ಅವರು ಭಾರೀ ಬಹುಮತಗಳಿಂದ ಆಯ್ಕೆಯಾಗಿದ್ದರು.

ಚಂದ್ರಶೇಖರ್ ಸಾವಿನ ಕುರಿತು ಸಮಗ್ರ ತನಿಖೆ : ಸಿಎಂ ಬೊಮ್ಮಾಯಿ

ಅ.26ರಂದು ಅಕಾರ ಸ್ವೀಕರಿಸಿದ ಅವರು ಇಂದು ಕರ್ನಾಟಕಕ್ಕೆ ಮೊದಲ ಬಾರಿಗೆ ಭೇಟಿ ನೀಡಿದರು.
ಪಕ್ಷದ ಜವಾಬ್ದಾರಿ ವಹಿಸಿಕೊಂಡ ಖರ್ಗೆ ಅವರು ದೇಶಾದ್ಯಂತ ವಿವಿಧ ರಾಜ್ಯಗಳಿಗೆ ಭೇಟಿ ನೀಡುವ ಕಾರ್ಯಕ್ರಮವಿದ್ದು, ಅದಕ್ಕೆ ಪೂರ್ವಭಾವಿಯಾಗಿ ತಮ್ಮ ತವರು ನೆಲದಿಂದಲೇ ಪ್ರವಾಸ ಆರಂಭಿಸುವ ಇಂಗಿತ ವ್ಯಕ್ತಪಡಿಸಿದರು.

ಹಾಗಾಗಿ ರಾಜ್ಯ ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅದ್ಧೂರಿ ಸ್ವಾಗತ ಕೋರಿದೆ. ಖರ್ಗೆಯವರ ಆಗಮನ ಕರ್ನಾಟಕ ಕಾಂಗ್ರೆಸ್‍ನ ಬಲವರ್ಧನೆಗೆ ಇಮ್ಮಡಿ ಶಕ್ತಿ ನೀಡಿದೆ. ರಾಜ್ಯ ರಾಜಕೀಯದ ಇಂಚಿಂಚು ಮಾಹಿತಿ ಹೊಂದಿರುವ ಖರ್ಗೆ ಅವರ ಸಲಹೆಸೂಚನೆ, ನಿರ್ದೇಶನಗಳು ಪಕ್ಷಕ್ಕೆ ಭಾರೀ ಲಾಭ ತಂದುಕೊಡಲಿದೆ ಎಂಬ ಅಂದಾಜುಗಳಿವೆ.

ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ತಮ್ಮ ಒಳ ರಾಜಕೀಯವನ್ನು ಮರೆತು ಇಂದು ಒಟ್ಟಾಗಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದರು. ಬೃಹತ್ ಶಕ್ತಿ ಪ್ರದರ್ಶನದ ಮೂಲಕ 4ನೇ ಬಾರಿಗೆ ಕಾಂಗ್ರೆಸ್ ತನ್ನ ಸಾಮಥ್ರ್ಯ ಪ್ರದರ್ಶನ ಮಾಡಿದೆ. ಈ ಮೊದಲು ಮೇಕೆದಾಟು ಮತ್ತು ಸ್ವತಂತ್ರ ನಡಿಗೆ ಪಾದಯಾತ್ರೆಗಳು ಬಳಿಕ ಸಿದ್ದರಾಮೋತ್ಸವ ಆನಂತರ ರಾಹುಲ್ ಗಾಂ ಅವರ ಭಾರತ ಐಕ್ಯತಾ ಯಾತ್ರೆ ಕಾಂಗ್ರೆಸ್‍ನ ಶಕ್ತಿ ವರ್ಧನೆಗೆ ಕಾರಣವಾಗಿದ್ದವು.

ಈಗ ಖರ್ಗೆ ಅವರ ಸ್ವಾಗತಕ್ಕೆ ಆಯೋಜಿಸಲಾಗಿದ್ದ ಸರ್ವೋದಯ ಸಮಾವೇಶ ಮತ್ತಷ್ಟು ಪುಷ್ಟಿ ನೀಡಿದೆ.
ಇಂದು ಖರ್ಗೆ ಅವರಿಗೆ ದಾರಿಯುದ್ದಕ್ಕೂ ಎನ್‍ಎಸ್‍ಯುಐ, ಯುವ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರ್ಯಾಲಿಗಳ ಮೂಲಕ ಸ್ವಾಗತ ಕೋರಿದರು.

ಮಧ್ಯಾಹ್ನ 2 ಗಂಟೆ ಸುಮಾರಿಗೆ ನಗರದ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಸಮಾವೇಶದ ಅಂಗವಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯುದ್ದಕ್ಕೂ ಫ್ಲೆಕ್ಸ್ ಬ್ಯಾನರ್‍ಗಳು ರಾರಾಜಿಸುತ್ತಿದ್ದವು.

ಅಮೆರಿಕ ಮತ್ತು ಚೀನಾಗೆ ಓಮಿಕ್ರಾನ್‍ನ ಉಪತಳಿಗಳ ಕಾಟ

ರಾಜ್ಯದ ಎಲ್ಲ ನಾಯಕರುಗಳು ತಮ್ಮ ಅಸ್ತಿತ್ವವನ್ನು ಪ್ರದರ್ಶಿಸಲು ರಸ್ತೆಯ ಇಕ್ಕೆಲಗಳನ್ನು ಫ್ಲೆಕ್ಸ್, ಬ್ಯಾನರ್‍ಗಳಿಂದ ಅಲಂಕರಿಸಿದ್ದರು. ಸಾಂಸ್ಕøತಿಕ ಕಲಾತಂಡಗಳು ಏರ್‍ಪೆÇೀರ್ಟ್‍ನಿಂದ ರಸ್ತೆಯುದ್ದಕ್ಕೂ ಪ್ರದರ್ಶನ ನೀಡುವ ಮೂಲಕ ಕಣ್ಮನ ಸೆಳೆದವು.

ಸಾದೇನಹಳ್ಳಿ ಗೇಟ್ ಬಳಿ ಖರ್ಗೆ ಅವರಿಗೆ ಎರಡು ಜೆಸಿಬಿಗಳಲ್ಲಿ ಬೃಹತ್ ಸೇಬಿನ ಹಾರ ಹಾಕಿ ಅಭಿನಂದಿಸಲಾಯಿತು. ಅಲ್ಲಲ್ಲಿ ನೂರಾರು ಕಾರ್ಯಕರ್ತರು ಜಮಾವಣೆಗೊಂಡು ಜೈಕಾರ ಕೂಗಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಖರ್ಗೆ ಅವರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದರು.

ಗರ್ಭಿಣಿ ಮತ್ತು ಅವಳಿ ಮಕ್ಕಳ ಸಾವು : ರಾಜಕೀಯ ಒತ್ತಡಕ್ಕೆ ವೈದ್ಯೆ ಅಮಾನತು..?

ಇಂದು ಬೆಳಗ್ಗೆಯಿಂದಲೇ ಸದಾಶಿವನಗರದಲ್ಲಿರುವ ಖರ್ಗೆ ಮನೆ ಮುಂದೆ ಸಾವಿರಾರು ಜನ ಜಮಾವಣೆಗೊಂಡು ಸಂಭ್ರಮಾಚರಣೆ ಮಾಡಿದರು. ಸಿಹಿ ಹಂಚಿ ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಲಾಯಿತು.

ಅರಮನೆ ಮೈದಾನದಲ್ಲಿನ ಸಮಾವೇಶಕ್ಕಾಗಿ ದೂರ ದೂರುಗಳಿಂದಲೂ ಸಾವಿರಾರು ಜನ ಬಸ್ಸು, ರೈಲುಗಳಲ್ಲಿ ಆಗಮಿಸಿದರು. ವಾಹನಗಳ ಸಂಖ್ಯೆ ಹೆಚ್ಚಾಗಿದ್ದರಿಂದಾಗಿ ಮೇಕ್ರಿ ವೃತ್ತ ಸುತ್ತಮುತ್ತ ವಾಹನ ದಟ್ಟಣೆ ಹೆಚ್ಚಾಗಿತ್ತು.

Articles You Might Like

Share This Article