ಸೋನಿಯಾ ಗಾಂಧಿ ನೀವೇ ಪಕ್ಷವನ್ನು ಮುನ್ನಡೆಸಬೇಕೆಂದು ಸೂಚನೆ ನೀಡಿದರು : ಖರ್ಗೆ

Social Share

ನವದೆಹಲಿ,ಅ.11- ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಮೂರು ಮಂದಿಯ ಹೆಸರನ್ನು ಸೂಚಿಸಲು ನಾನು ಪ್ರಯತ್ನಿಸಿದೆ. ಆದರೆ ಅದಕ್ಕೆ ಕಿವಿಗೊಡದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಖುದ್ದು ನೀವೇ ಪಕ್ಷವನ್ನು ಮುನ್ನಡೆಸಬೇಕೆಂದು ಸೂಚನೆ ನೀಡಿದರು. ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವುದಾಗಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಸಾಂಸ್ಥಿಕ ಚುನಾವಣೆಯ ಭಾಗವಾಗಿ ಅಸ್ಸಾಂನಲ್ಲಿ ಪ್ರಚಾರ ಕೈಗೊಂಡ ಖರ್ಗೆ ಅವರು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಗಾಂಧಿ ಕುಟುಂಬದ ಯಾರೊಬ್ಬರು ಪಕ್ಷದ ಚುನಾವಣೆಯಲ್ಲಿ ಸ್ರ್ಪಧಿಸುವುದಿಲ್ಲ ಎಂಬ ನಿರ್ಧಾರ ತೆಗೆದುಕೊಂಡ ಬಳಿಕ ಸೋನಿಯಾ ಗಾಂಧಿ ಅವರು ತಮ್ಮನ್ನು ಮನೆಗೆ ಕರೆಸಿ ಚರ್ಚೆ ಮಾಡಿದರು.

ಪಕ್ಷವನ್ನು ಮುನ್ನೆಡೆಸಲು ಸಮರ್ಥರಿರುವ ಮೂವರು ನಾಯಕರ ಹೆಸರನ್ನು ನಾನು ಹೇಳಿದ್ದೆ. ಆದರೆ ಅದನ್ನು ಕೇಳಿಸಿಕೊಳ್ಳದ ಸೋನಿಯಾ ಗಾಂಧಿ ಅವರು ಮುಂದಿನ ದಿನಗಳಲ್ಲಿ ನೀವೇ ಪಕ್ಷವನ್ನು ಮುನ್ನೆಡಬೇಕು ಎಂದು ಸೂಚಿಸಿದರು. ಹೀಗಾಗಿ ನಾನು ಸರ್ಧೆ ಮಾಡಬೇಕಾಯಿತು ಎಂದರು.

ನಾನು ಸಂವಿಧಾನ ಮತ್ತು ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇಟ್ಟಿರುವ ವ್ಯಕ್ತಿ. ಎಲ್ಲರನ್ನು ಒಗ್ಗೂಡಿಸಿಕೊಂಡು ಪಕ್ಷವನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

Articles You Might Like

Share This Article