ಬೆಂಗಳೂರು,ಜು.10- ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಹುದ್ದೆಯಲ್ಲಿನ ಪೈಪೋಟಿಯನ್ನು ನಿವಾರಿಸಲು ಯತ್ನಿಸಿರುವ ಕಾಂಗ್ರೆಸ್ ಹೈ ಕಮಾಂಡ್, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿ ರಾಷ್ಟ್ರ ರಾಜಕಾರಣದಲ್ಲೇ ಉಳಿಸಿಕೊಳ್ಳುವ ಭರವಸೆ ನೀಡಿದೆ.
ರಾಜ್ಯ ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಹುದ್ದೆಯ ಮೇಲೆ ಈಗಾಗಲೇ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಕಣ್ಣಿಟ್ಟಿದ್ದು, ಪರಸ್ಪರ ಪೈಪೋಟಿಗಿಳಿದಿದ್ದಾರೆ. ಈಗಾಗಲೇ ಒಂದು ಅವಗೆ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿರುವ ಸಿದ್ದರಾಮಯ್ಯ ಎರಡನೇ ಇನ್ನಿಂಗ್ಸ್‍ನ ಕನಸಿನಲ್ಲಿದ್ದಾರೆ.
ಹಗಲಿರುಳು ಪಕ್ಷ ಕಟ್ಟಿ ಅಕಾರಕ್ಕೆ ತರಲು ಶ್ರಮಿಸುತ್ತಿರುವ ಡಿ.ಕೆ.ಶಿವಕುಮಾರ್ ಅವರು ಸಹ ಮುಖ್ಯಮಂತ್ರಿಯಾಗುವ ಉಮೇದಿನಲ್ಲಿದ್ದಾರೆ. ಈ ನಡುವೆ ಮಲ್ಲಿಕಾರ್ಜುನ ಖರ್ಗೆ ಪಕ್ಷದ ನಿಷ್ಠ ಎಂಬ ಬ್ರಾಂಡಿಂಗ್ ಮೂಲಕ ಮುಖ್ಯಮಂತ್ರಿ ಸ್ಥಾನದ ಮೇಲೆ ಕೈ ಇಟ್ಟಿದ್ದಾರೆ.
ರಾಜ್ಯ ಕಾಂಗ್ರೆಸ್‍ನಲ್ಲಿನ ಈ ತಳಮಳವನ್ನು ನಿವಾರಿಸುವ ಸಲುವಾಗಿಯೇ ಹೈಕಮಾಂಡ್ ನಾಯಕರಾದ ರಾಹುಲ್‍ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೆವಾಲ, ಕೆ.ಸಿ.ವೇಣುಗೋಪಾಲ್, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ರಾಹುಲ್‍ಗಾಂಧಿ ಅವರು ಖರ್ಗೆ ಅವರಿಗೆ ರಾಷ್ಟ್ರ ರಾಜಕಾರಣದಲ್ಲಿ ಉನ್ನತ ಹುದ್ದೆ ದೊರೆಯಲಿದೆ. ಅವರು ರಾಜ್ಯ ರಾಜಕಾರಣದತ್ತ ತಲೆ ಹಾಕುವುದಿಲ್ಲ. ನೀವು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಪಕ್ಷ ಸಂಘಟನೆ ಮಾಡಿ ಅಧಿಕಾರಕ್ಕೆ ತನ್ನಿ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಅಂದಿನಿಂದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಕೊಂಚ ನಿರಾಳವಾಗಿದ್ದು, ಪಕ್ಷ ಸಂಘಟನೆಯತ್ತ ಗಮನ ಹರಿಸಿದ್ದಾರೆ.
ದಲಿತ ಸಮುದಾಯದ ಖರ್ಗೆ ಅವರನ್ನು ನಿರ್ಲಕ್ಷಿಸುವುದು ಕಾಂಗ್ರೆಸ್‍ಗೆ ಅಷ್ಟು ಸುಲಭದ ವಿಷಯವಲ್ಲ. ಹೀಗಾಗಿ ಅವರಿಗೆ ಎಐಸಿಸಿ ಹುದ್ದೆ ನೀಡುವ ಮೂಲಕ ಮುಂದಿನ ಚುನಾವಣೆಯಲ್ಲಿ ದಲಿತ ಮತಗಳನ್ನು ಸೆಳೆಯುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.
ಈಗಾಗಲೇ ಖರ್ಗೆ ಅವರನ್ನು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲಾಗಿದೆ. ಸಾಂವಿಧಾನಿಕವಾದ ಈ ಹುದ್ದೆ ಬಿಟ್ಟು ಖರ್ಗೆ ಅವರು ಪಕ್ಷದ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆಯೇ ಎಂಬ ಚರ್ಚೆಗಳು ಆರಂಭವಾಗಿವೆ. ಖರ್ಗೆ ಅವರು ಈ ಮೊದಲು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗ ಒಂದಿಷ್ಟು ಮೌಲಿಕ ಚರ್ಚೆಗಳು ನಡೆದಿದ್ದವು. ಸರ್ಕಾರದ ನಿರ್ಧಾರಗಳನ್ನು ಪ್ರತಿಭಟಿಸುವ ಪ್ರಬಲ ಧ್ವನಿ ಇತ್ತು. ಆದರೆ, ಪ್ರಸ್ತುತ ಲೋಕಸಭೆಯಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳ ಧ್ವನಿ ಕ್ಷೀಣಿಸಿದೆ.
ರಾಜ್ಯಸಭೆಯಲ್ಲಿ ಖರ್ಗೆ ಅವರಿಂದಾಗಿ ಒಂದಿಷ್ಟು ಪ್ರಬಲ ಧ್ವನಿ ಇದೆ. ಅಲ್ಲಿಂದಲೂ ಖರ್ಗೆ ಅವರು ಹೊರ ಬಂದರೆ ಸಂಸತ್‍ನಲ್ಲಿ ಪ್ರಬಲ ವಿರೋಧ ಪಕ್ಷದ ಅಸ್ತಿತ್ವವೇ ಇಲ್ಲವಾಗುತ್ತದೆ. ಹೀಗಾಗಿ ಕಾಂಗ್ರೆಸ್ ಅಧ್ಯಕ್ಷ ಎಂಬ ಉನ್ನತ ಸ್ಥಾನಕ್ಕೆ ಸೋನಿಯಾಗಾಂ ಅವರು ಖರ್ಗೆ ಅವರನ್ನು ನೇಮಿಸುತ್ತಾರೆಯೇ ಎಂಬ ಅನುಮಾನಗಳು ಕಾಡುತ್ತಿವೆ.
ಆದರೆ, ಪ್ರಸ್ತುತ ರಾಹುಲ್‍ಗಾಂ ಅವರೇ ಅನಕೃತವಾಗಿ ಪಕ್ಷದ ಅಧ್ಯಕ್ಷರ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದು, ಅವರ ವಿಚಾರಗಳನ್ನು ತಳ್ಳಿ ಹಾಕುವ ಸ್ಥಿತಿ ಪಕ್ಷದ ನಾಯಕರಲ್ಲಿ ಇಲ್ಲ.ಹೀಗಾಗಿ ಖರ್ಗೆ ಅವರ ಸ್ಥಾನ ಪಲ್ಲಟ ರಾಹುಲ್‍ಗಾಂ ನಿರ್ಧಾರದಂತೆಯೇ ನಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತೆಯೂ ಇಲ್ಲ.
ಈ ಮೊದಲು 2013ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಬೇಕೆಂದು ದೆಹಲಿಯಿಂದ ಚೀಟಿ ಬರುವುದರಲ್ಲಿ ರಾಹುಲ್‍ಗಾಂ ಪ್ರಮುಖ ಪಾತ್ರ ವಹಿಸಿದ್ದರು.ಖರ್ಗೆ ಅವರಿಗಿಂತಲೂ ರಾಹುಲ್‍ಗಾಂಗೆ ಸಿದ್ದರಾಮಯ್ಯ ಹೆಚ್ಚು ಆತ್ಮೀಯರಾಗಿದ್ದು, ಮುಂದೆ ಕಾಂಗ್ರೆಸ್ ಅಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನ ಯಾರ ಪಾಲಾಗಲಿದೆ ಎಂಬ ಅಂದಾಜುಗಳು ಕಷ್ಟ ಸಾಧ್ಯವೇನೂ ಅಲ್ಲ.
ಸದ್ಯದ ಪರಿಸ್ಥಿತಿಯಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್ ಮರಳಿ ಅಕಾರಕ್ಕೆ ಬರುವ ಸೂಚನೆಗಳು ಕಾಣಿಸುತ್ತಿಲ್ಲ. ಹೀಗಾಗಿ ಪ್ರಧಾನಿ ಹುದ್ದೆಗೆ ಖರ್ಗೆ ಅವರ ಹೆಸರು ಪ್ರಸ್ತಾಪಿಸುವುದು ಹಾಸ್ಯಾಸ್ಪದವಾಗಬಹುದು. ಈ ಲೆಕ್ಕಾಚಾರದಲ್ಲಿ ಸದ್ಯಕ್ಕೆ ರಾಷ್ಟ್ರ ರಾಜಕಾಣದಲ್ಲಿರುವ ಉನ್ನತ ಹುದ್ದೆ ಎಂದರೆ ಅದು ಎಐಸಿಸಿ ಅಧ್ಯಕ್ಷ ಸ್ಥಾನ ಮಾತ್ರ. ರಾಹುಲ್‍ಗಾಂಧಿ ಅವರ ಅಭಿಪ್ರಾಯವನ್ನು ವಿಶ್ಲೇಷಿಸಿರುವ ಪ್ರಕಾರ ಖರ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗುವ ಸಾಧ್ಯತೆಗಳು ಕಂಡು ಬರುತ್ತಿವೆ.