ಭಾರತ್ ಜೋಡೋ ಯಾತ್ರೆಗೆ ಸೂಕ್ತ ಭದ್ರತೆ ಒದಗಿಸಲು ಖರ್ಗೆ ಆಗ್ರಹ

Social Share

ನವದೆಹಲಿ,ಜ.28- ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಪಾದಯಾತ್ರೆ ಸಮಾರೋಪಕ್ಕೆ ಎರಡು ದಿನ ಬಾಕಿ ಉಳಿದಿದ್ದು, ಭದ್ರತೆ ಕುರಿತು ಖುದ್ದು ಮಧ್ಯಪ್ರವೇಶ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ.

ನಿನ್ನೆಯ ಯಾತ್ರೆಯಲ್ಲಿ ಭದ್ರತೆಯಲ್ಲಿ ಲೋಪವಾಗಿರುವುದು ನಿಮ್ಮ ಗಮನಕ್ಕೆ ಬಂದಿರುತ್ತದೆ. ಭದ್ರತಾ ಅಧಿಕಾರಿಗಳ ಸಲಹೆ ಮೇರೆಗೆ ರಾಹುಲ್‍ಗಾಂಧಿ ದಿನದ ಯಾತ್ರೆಯನ್ನು ಸ್ಥಗಿತಗೊಳಿಸಿದರು. ಯಾತ್ರೆಯುದ್ಧಕ್ಕೂ ಅಗತ್ಯ ಭದ್ರತೆ ಒದಗಿಸಲು ಬದ್ಧವಾಗಿರುವುದಾಗಿ ಜಮ್ಮು-ಕಾಶ್ಮೀರದ ಪೊಲೀಸರು ನೀಡಿರುವ ಹೇಳಿಕೆಯನ್ನು ಕಾಂಗ್ರೆಸ್ ಸ್ವಾಗತಿಸಲಿದೆ. ಆದಾಗ್ಯೂ ಯಾತ್ರೆಗೆ ಪ್ರತಿ ದಿನ ದೊಡ್ಡ ಪ್ರಮಾಣದಲ್ಲಿ ಜನ ಸೇರ್ಪಡೆಗೊಳ್ಳುತ್ತಿದ್ದಾರೆ.

ಬಿಹಾರದಲ್ಲಿ ಸರಸ್ವತಿ ಮೆರವಣಿಗೆಯಲ್ಲಿ ಗುಂಡಿನ ದಾಳಿ, ಒಬ್ಬ ಸಾವು

ದಿನದ ಯಾತ್ರೆಯಲ್ಲಿ ಎಷ್ಟು ಜನ ಭಾಗವಹಿಸುತ್ತಾರೆ ಎಂದು ಖಚಿತವಾಗಿ ಹೇಳುವುದು ಸಂಘಟಕರಿಗೆ ಕಷ್ಟವಾಗಲಿದೆ. ಏಕಕಾಲಕ್ಕೆ ಜನ ಯಾತ್ರೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಕಾಂಗ್ರೆಸ್ ಜನರಿಗೆ ಧನ್ಯವಾದ ತಿಳಿಸಲಿದೆ ಎಂದು ಖರ್ಗೆ ತಿಳಿಸಿದ್ದಾರೆ.

ಜನವರಿ 30ರಂದು ಶ್ರೀನಗರದಲ್ಲಿ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ. ಅಂದು ಬೃಹತ್ ಜನಸ್ತೋಮ ಸೇರ್ಪಡೆಯಾಗುವ ಸಾಧ್ಯತೆ ಇದೆ. ಹಿರಿಯ ಕಾಂಗ್ರೆಸ್ ನಾಯಕರು, ಇತರ ಪಕ್ಷಗಳ ಪ್ರಮುಖರು, ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಲವ್ ಫೇಲ್ಯೂರ್, ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಯತ್ನಿಸಿದ ವೈದ್ಯ

ಈ ಕಾರಣಕ್ಕೆ ವೈಯಕ್ತಿಕವಾಗಿ ತಾವೇ ಖುದ್ದು ಭದ್ರತೆಯ ಮೇಲೆ ನಿಗಾವಹಿಸಬೇಕು ಎಂದು ಖರ್ಗೆ ಗೃಹ ಸಚಿವರಿಗೆ ಸಲಹೆ ಮಾಡಿದ್ದಾರೆ. ಯಾತ್ರೆ ಹಾಗೂ ಸಮಾರೋಪ ಸಮಾರಂಭಕ್ಕೆ ಸೂಕ್ತ ಭದ್ರತೆ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಖರ್ಗೆ ಒತ್ತಾಯಿಸಿದ್ದಾರೆ.

Mallikarjun Kharge, writes, Amit Shah, security, Bharat Jodo Yatra,

Articles You Might Like

Share This Article