ಕೆನಡಾದಲ್ಲಿ ರಿಪು ದಮನ್ ಸಿಂಗ್ ಹತ್ಯೆ

Social Share

ನವದೆಹಲಿ,ಜು.15- ಏರ್ ಇಂಡಿಯಾ ಬಾಂಬ್ ಪ್ರಕರಣದಲ್ಲಿ ಖುಲಾಸೆಗೊಂಡ ಕೆನಡಾ ಮೂಲದ ಸಿಖ್ ನಾಯಕ ಹಾಗೂ ಉದ್ಯಮಿ ರಿಪು ದಮನ್ ಸಿಂಗ್ ಮಲ್ಲಿಕ್ ಅವರು ಕೆನಡಾದಲ್ಲಿ ಗುಂಡಿನ ದಾಳಿಯಿಂದ ಹತ್ಯೆಯಾಗಿದ್ದಾರೆ.

ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿರುವ ಸುರ್ರೆ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ಹತ್ಯೆ ನಡೆದಿರುವುದಾಗಿ ವರದಿಯಾಗಿದೆ.
ಬೆಳಗ್ಗೆ ಸುಮಾರು 9.30ಕ್ಕೆ ಆರ್‍ಸಿಎಂಪಿ ಪೊಲೀಸರು ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದು, ಅಲ್ಲಿ ಹಲವು ಗುಂಡೇಟಿನಿಂದ ಗಾಯಗೊಂಡ ವ್ಯಕ್ತಿಯೊಬ್ಬರು ನರಳುತ್ತಿರುವುದನ್ನು ಕಂಡಿದ್ದಾರೆ. ಅವರಿಗೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಲಾಗಿದೆ.

ತುರ್ತು ಆರೋಗ್ಯ ಸೇವೆಗಾಗಿ ಅವರನ್ನು ಅಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಆದರೆ ಗಂಭೀರ ಗಾಯಗಳಿಂದ ಬಳಲುತ್ತಿದ್ದ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿಲಾಗಿದೆ.

ಮಲ್ಲಿಕ್ ಅವರು 2022ರ ಜನವರಿಯಲ್ಲಿ ಪ್ರಧಾನಿಯನ್ನು ಹೊಗಳಿ ಪತ್ರ ಬರೆಯುವ ಮೂಲಕ ಪ್ರಚಲಿತಕ್ಕೆ ಬಂದಿದ್ದರು. ಪ್ರಧಾನಿಯವರು ಕರ್ತಾರ್‍ಪುರ್ ಕಾರಿಡಾರ್ ಮುಕ್ತಗೊಳಿಸಿದ್ದು ಮತ್ತು 1984ರ ಸಿಖ್ ವಿರೋ ದಂಗೆಯಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಿದ್ದಕ್ಕಾಗಿ ಮೋದಿಗೆ ಧನ್ಯವಾದ ಹೇಳಿದ್ದರು. ಆ ವೇಳೆ ಮಲ್ಲಿಕ್ ಅವರ ಪತ್ರ ವೈರಲ್ಲಾಗಿತ್ತು.

ಕೆನಡಾದಲ್ಲಿ ನಡೆದ ಏರ್ ಇಂಡಿಯಾ ಫ್ಲೈಟ್ 182 ಕಾನಿಷ್ಕಾ ಸ್ಫೋಟ ಪ್ರಕರಣದಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಆರೋಪಿಗಳಲ್ಲಿ ಮಲ್ಲಿಕ್ ಕೂಡ ಒಬ್ಬರಾಗಿದ್ದಾರೆ. 1985ರ ಜೂನ್ 23ರಂದು ಕೆನಡಾದಿಂದ ಐರ್ಲೆಂಡ್‍ನ ಕರಾವಳಿಯಲ್ಲಿ ಏರ್ ಇಂಡಿಯಾ ಫ್ಲೈಟ್ 182 ಕಾನಿಷ್ಕಾ ಬಾಂಬ್ ಸ್ಫೋಟಸಲ್ಪಟ್ಟು 329 ಪ್ರಯಾಣಿಕರು ಮತ್ತು ಅದರ ಸಿಬ್ಬಂದಿ ಹತ್ಯೆಗೀಡಾಗಿದ್ದರು.

29 ಸಂಪೂರ್ಣ ಕುಟುಂಬಗಳು ಮತ್ತು 12 ವರ್ಷದೊಳಗಿನ 86 ಮಕ್ಕಳು ಸೇರಿದಂತೆ 280ಕ್ಕೂ ಹೆಚ್ಚು ಕೆನಡಾದ ನಾಗರಿಕರು ಸಾವನ್ನಪ್ಪಿದ್ದರು. ಎಐ ಫ್ಲೈಟ್ 182ರ ಭಯೋತ್ಪಾದಕ ಬಾಂಬ್ ದಾಳಿಯನ್ನು ಇಲ್ಲಿಯವರೆಗೆ ಕೆನಡಾದ ಮೇಲೆ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಎಂದು ಪರಿಗಣಿಸಲಾಗಿದೆ.

Articles You Might Like

Share This Article