ಮನೆ ಬೀಗ ಮುರಿದು ಕಳ್ಳತನ, ಹಳೆ ಕಳ್ಳನ ಬಂಧನ

Social Share

ಬೆಂಗಳೂರು, ಅ.29- ಹಗಲು ವೇಳೆಯಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಬೀಗ ಮುರಿದು ಒಳನುಗ್ಗಿ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಹಳೇ ಕಳ್ಳನನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕುಣಿಗಲ್ ಮೂಲದ ಶಿವರಾಜ ಅಲಿಯಾಸ್ ಶಿವ ಅಲಿಯಾಸ್ ಕಪ್ಪೆ ಶಿವ (30) ಬಂತ ಆರೋಪಿ. ಈತ ಮಾಗಡಿ ರಸ್ತೆಯ ತುಂಗಾ ನಗರದ ಸಿಂಡಿಕೇಟ್ ಕಾಲೋನಿಯ 4ನೇ ಕ್ರಾಸ್‍ನಲ್ಲಿ ವಾಸವಾಗಿದ್ದನು. ಮನೆಗಳ್ಳತನ ಪ್ರಕರಣದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರು ಹಳೇ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಆತ ನೀಡಿದ ಮಾಹಿತಿಯ ಮೇರೆಗೆ 5.75 ಲಕ್ಷ ರೂ ಬೆಲೆಬಾಳುವ 120 ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ವಂದೇ ಭಾರತ್ ರೈಲಿಗೆ ಮತ್ತೆ ದನ ಡಿಕ್ಕಿ, 20 ನಿಮಿಷ ಪ್ರಯಾಣ ವಿಳಂಬ

ಆರೋಪಿಯ ಬಂಧನದಿಂದ ಮಾಗಡಿರೋಡ್, ಅನ್ನಪೂರ್ಣೇ ಶ್ವರಿನಗರ ಪೊಲೀಸ್ ಠಾಣೆಯ ಪ್ರಕರಣಗಳು ಪತ್ತೆಯಾಗಿರುತ್ತವೆ.

ಈ ಯಶಸ್ವಿ ಕಾರ್ಯಾಚರಣೆ ಯನ್ನು ಪಶಿ ್ಚಮ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಲಕ್ಷ್ಮಣ್ ನಿಂಬರಗಿ ಅವರ ಮಾರ್ಗದರ್ಶನದಲ್ಲಿ, ವಿಜಯ ನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರವಿ ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ರಾಜು ಅವರನ್ನೊಳಗೊಂಡ ಸಿಬ್ಬಂದಿ ತಂಡ ಮಾಲು ವಶಪಡಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Articles You Might Like

Share This Article