ನಿಯಮ ಉಲ್ಲಂಘಿಸಿ ರೆಸಾರ್ಟ್‌ನಲ್ಲಿ ಪಾರ್ಟಿ, ಆಯೋಜಕನ ಬಂಧನ

Social Share

ಬೆಂಗಳೂರು,ಜ.1- ನಿಷೇಧಾಜ್ಞೆ ನಡುವೆಯೂ ಕೋವಿಡ್ ನಿಯಮ ಉಲ್ಲಂಘಿಸಿ ಹೊಸ ವರ್ಷಾಚರಣೆ ಪಾರ್ಟಿ ಆಯೋಜಿಸಿದ್ದ ರೆಸಾರ್ಟ್ವೊಂದರ ಮೇಲೆ ರಾಮನಗರ ಜಿಲ್ಲಾ ಎಸ್ಪಿ ಗಿರೀಶ್ ಮತ್ತು ಅವರ ತಂಡ ದಾಳಿ ಮಾಡಿ ಒಬ್ಬಾತನನ್ನು ಬಂಧಿಸಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕು ಕನ್ನಮಂಗಲ ಸಮೀಪದ ಕಣ್ವ ಜಲಾಶಯದ ಬಳಿಯ ರೆಸಾರ್ಟ್‌ನಲ್ಲಿ ರಾತ್ರಿ ಹೊಸ ವರ್ಷಾಚರಣೆ ಪಾರ್ಟಿ ಆಯೋಜಿಸಲಾಗಿತ್ತು.
ಬೆಂಗಳೂರಿನಿಂದ ಬುಕ್ ಮಾಡಿಕೊಂಡು ರಾತ್ರಿ ಈ ರೆಸಾರ್ಟ್ನಲ್ಲಿ ಯುವಕ-ಯುವತಿಯರು ಸೇರಿದಂತೆ ನೂರಾರು ಜನರು ಜಮಾಯಿಸಿ ಜೋರಾಗಿ ಡಿಜೆ ಹಾಕಿಕೊಂಡು ಪಾರ್ಟಿ ಮಾಡುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಎಸ್ಪಿ ಗಿರೀಶ್ ಅವರ ನೇತೃತ್ವದ ತಂಡ ರೆಸಾರ್ಟ್ ಮೇಲೆ ದಾಳಿ ಮಾಡಿ ಪಾರ್ಟಿ ಆಯೋಜಕನೊಬ್ಬನನ್ನು ಬಂಸಿದ್ದಾರೆ. ಈ ಬಗ್ಗೆ ಎಂ.ಕೆ.ದೊಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Articles You Might Like

Share This Article