ಹಸುಗಳೊಂದಿಗೆ ವಿಕೃತವಾಗಿ ವರ್ತಿಸುತ್ತಿದ್ದ ಕಾಮುಕ ಅರೆಸ್ಟ್

Social Share

ಬೆಂಗಳೂರು, ಫೆ.24- ಹಸುಗಳೊಂದಿಗೆ ವಿಕೃತ ಕೃತ್ಯದಲ್ಲಿ ತೊಡಗಿದ್ದ ಕಾಮುಕನನ್ನು ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಸಿಂಗಾಪುರ ಲೇಔಟ್‍ನಲ್ಲಿ ಹನುಮಂತಪ್ಪ ಎಂಬುವರು ಐದು ಹಸುಗಳು ಹಾಗೂ ಆರು ಕರುಗಳನ್ನು ಸಾಕುತ್ತಿದ್ದು, ತಮ್ಮ ಮನೆಯ ಮುಂದೆ ಹಸು-ಕರುಗಳನ್ನು ಕಟ್ಟಿ ಹಾಕುತ್ತಿದ್ದರು.
ಫೆಬ್ರವರಿ 19ರಂದು ರಾತ್ರಿ ಅಪರಿಚಿತ ವ್ಯಕ್ತಿ ಹಸುಗಳ ಜೊತೆ ಅಸಹಜ ಕ್ರಿಯೆಯಲ್ಲಿ ತೊಡಗಿರುವುದನ್ನು ಗಮನಿಸಿ ನೆರೆ ಹೊರೆಯವರು ಹನುಮಂತಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ. ಖುದ್ಧು ಪರಿಶೀಲನೆ ನಡೆಸಲು ಹನುಮಂತಪ್ಪ ಅವರು ಕಾದು ಕುಳಿತಿದ್ದಾಗ, ಅಪರಿಚಿತ ವ್ಯಕ್ತಿ ಮಧ್ಯರಾತ್ರಿ ಬಂದು ಬಟ್ಟೆ ಬಿಚ್ಚಿ ಮನೆಯ ಹಸುಗಳ ಜೊತೆ ವಿಕೃತವಾಗಿ ವರ್ತಿಸುತ್ತಿದ್ದನ್ನು ಗಮನಿಸಿದ್ದಾರೆ. ಅವರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ಪೊಲೀಸರು ವೆಂಕಟೇಶ್ ಕುಮಾರ್ (22) ಎಂಬಾತನ್ನು ಬಂಧಿಸಿದ್ದಾರೆ.
ಆರೋಪಿ ದಾವಣಗೆರೆ ಮೂಲದವನಾಗಿದ್ದು, ಕಳೆದ ಎರಡು ತಿಂಗಳಿನಿಂದ ನಗರದ ಸಿಂಗಾಪುರ ಲೇಔಟ್‍ನಲ್ಲಿ ವಾಸವಿದ್ದ, ಅವಿನ್ಯೂ ರಸ್ತೆಯಲ್ಲಿನ ಪುಸಕ್ತದ ಅಂಗಡಿಯೊಂದರಲ್ಲಿ ಈತ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಐಪಿಸಿ ಸೆಕ್ಷನ್ 377 (ಅಸಹಜ ಲೈಂಗಿಕ ಕ್ರಿಯೆ) ಮತ್ತು ಜಾನುವಾರು ದೌರ್ಜನ್ಯ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

Articles You Might Like

Share This Article