ಧರ್ಮ ಮರೆಮಾಚಿ ವಿವಾಹವಾಗಲು ಹೋಗಿ ಸಿಕ್ಕಿಬಿದ್ದ

Social Share

ನವದೆಹಲಿ,ಡಿ.13- ಧರ್ಮ ಮರೆಮಾಚಿ ಯುವತಿಯೊಬ್ಬರನ್ನು ವಿವಾಹವಾಗಲು ಯತ್ನಿಸಿದ್ದ ಆರೋಪಿಯೊಬ್ಬನನ್ನು ಉತ್ತರಪ್ರದೇಶ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದೆ.ಬಂಧಿತ ಆರೋಪಿಯನ್ನು ಹಸೀನ್ ಸೈಫಿ ಎಂದು ಗುರುತಿಸಲಾಗಿದೆ.

ಈತ ಗ್ರೇಟರ್‍ನೋಯ್ಡಾದಲ್ಲಿ ತನ್ನ ಧರ್ಮ ಮರೆ ಮಾಚಿ ಯುವತಿಯೊಬ್ಬರಿಗೆ ತನ್ನನ್ನು ಆಶೀಶ್‍ಠಾಕೂರ್ ಎಂದು ಗುರುತಿಸಿಕೊಂಡಿದ್ದ. ಮಾತ್ರವಲ್ಲ ಆಕೆಯ ಜೊತೆ ಲೈಂಗಿಕ ಸಂಪರ್ಕ ಬೆಳೆಸಿ ನಂತರ ಆಕೆಯನ್ನು ವಿವಾಹವಾಗಲು ಮುಂದಾಗಿದ್ದ ಎನ್ನಲಾಗಿದೆ. ಆತನ ಮದುವೆ ನಿನ್ನೆ ನಡೆಯಬೇಕಿದ್ದು, ಮೊನ್ನೆ ಆತನ ಬಂಡವಾಳ ಬಯಲಾಗಿದೆ.

ಸಂತ್ರಸ್ಥ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಆತನ ವಿರುದ್ಧ ಬಲವಂತದ ಧಾರ್ಮಿಕ ಮತಾಂತರ, ಅತ್ಯಾಚಾರ ಮತ್ತು ವಂಚನೆ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚರ್ಮಗಂಟು ರೋಗ : ಮೃತ ಜಾನುವಾರುಗಳ ಮಾಲೀಕರಿಗೆ ಪರಿಹಾರ ನೀಡಲು 30 ಕೋಟಿ ಬಿಡುಗಡೆ

ಸಂತ್ರಸ್ಥ ಯುವತಿ ದಾದ್ರಿಯಲ್ಲಿದ್ದಾಗ ಕೆಲಸ ಕಳೆದುಕೊಂಡಿದ್ದರು. ಆ ಸಂದರ್ಭದಲ್ಲಿ ಆಕೆಯ ಸ್ನೇಹ ಗಳಿಸಿಕೊಂಡು ಎಸ್ಕಾರ್ಟ್ ಕಾಲೋನಿಯಲ್ಲಿದ್ದ ತನ್ನ ಫ್ಲಾಟ್‍ಗೆ ಕರೆದುಕೊಂಡು ಹೋಗಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ ಎಂದು ಗ್ರೇಟರ್ ನೋಯ್ಡಾದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ದಿನೇಶ್ ಕುಮಾರ್ ಹೇಳಿದ್ದಾರೆ.

‘ನೀವು ದೇವರು ಕೊಟ್ಟ ವರ’ ರೊನಾಲ್ಡೊ ಬಣ್ಣಿಸಿದ ಕೊಹ್ಲಿ

ಆರೋಪಿ ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ ಅಶ್ಲೀಲ ವೀಡಿಯೋ ಸೆರೆ ಹಿಡಿದು ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ. ಬಲವಂತದ ವಿವಾಹಕ್ಕೆ ಸಮ್ಮತಿಸಿದ್ದ ಯುವತಿ ಆತ ಹಿಂದೂ ಅಲ್ಲ ಅನ್ಯಕೋಮಿಗೆ ಸೇರಿದವನು ಎಂದು ತಿಳಿಯುತ್ತಿದ್ದಂತೆ ದೂರು ನೀಡಿದ ಹಿನ್ನಲೆಯಲ್ಲಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Man, arrested, woman, finds, faked religion,

Articles You Might Like

Share This Article