ದಂಪತಿಗೆ ರಾಡ್ ನಿಂದ ಹೊಡೆದು ದರೋಡೆ ಮಾಡಿದ್ದ ಆಸಾಮಿ ಅಂದರ್

Social Share

ಬೆಂಗಳೂರು,ಡಿ.14-ಮಧ್ಯ ರಾತ್ರಿ ಮನೆಯೊಂದಕ್ಕೆ ನುಗ್ಗಿ ದಂಪತಿಗೆ ಕಬ್ಬಿಣದ ರಾಡಿನಿಂದ ಹೊಡೆದು ಮೊಬೈಲ್‍ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ ದರೋಡೆಕೋರನೊಬ್ಬನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆಂಗೇರಿಯ ಮೈಲಸಂದ್ರದ ನಿವಾಸಿ ದರ್ಪಣ್‍ಕುಮಾರ್ ಅಲಿಯಾಸ್ ದರ್ಪಣ್ ಅಲಿಯಾಸ್ ಸೂರ್ಯ(19) ಬಂಧಿತ ಆರೋಪಿ. ಈತನಿಂದ 10 ಲಕ್ಷ ರೂ. ಬೆಲೆ ಬಾಳುವ ಮೂರು ಆಟೋ ರಿಕ್ಷಾಗಳು, 5 ದ್ವಿಚಕ್ರವಾಹನಗಳು, 4 ಮೊಬೈಲ್‍ಗಳು, ಒಂದು ಬೆಳ್ಳಿಯ ಚೈನ್, ಒಂದು ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಯ ಬಂಧನದಿಂದ ಕೆಂಗೇರಿ ಪೊಲೀಸ್ ಠಾಣೆಯ ಐದು ಪ್ರಕರಣಗಳು, ಬ್ಯಾಡರಹಳ್ಳಿ ಠಾಣೆಯ ಎರಡು ಪ್ರಕರಣ ಹಾಗೂ ಕೋಣನಕುಂಟೆ, ಮಾದನಾಂ ಕನಹಳ್ಳಿ ಠಾಣೆಯ ತಲಾ ಒಂದು ಪ್ರಕರಣ ಬೆಳಕಿಗೆ ಬಂದಿದೆ.

BIG NEWS : ಶುಕ್ರವಾರ ಸಂಪುಟ ವಿಸ್ತರಣೆ..?!

ಉಳಿದ ಎರಡು ದ್ವಿಚಕ್ರ ವಾಹನಗಳು ಹಾಗೂ ಒಂದು ತ್ರಿಚಕ್ರ ವಾಹನದ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಕೆಂಗೇರಿ ಉಪನಗರದ ಗಾಂನಗರ ಹಕ್ಕಿಪಿಕ್ಕಿ ಕಾಲೋನಿ, ಪೂನಂ ಮಹಲ್ ಪಕ್ಕದಲ್ಲಿರುವ ಕೃಷ್ಣಮೂರ್ತಿ ಎಂಬುವರಿಗೆ ಸೇರಿದ ಶೆಡ್‍ನಲ್ಲಿ ಸುಮಾರು ಒಂದು ವರ್ಷದಿಂದ ರೇಣುಕಾ-ಅಭಿಷೇಕ್ ದಂಪತಿ ವಾಸವಿದ್ದು ಶೆಡ್ ಎದುರಿಗೆ ಇರುವ ಕೃಷ್ಣಮೂರ್ತಿ ಹೊಸದಾಗಿ ನಿರ್ಮಿಸುತ್ತಿರುವ ಕಟ್ಟಡದಲ್ಲಿ ಗಾರೆ ಕೆಲಸಗಾರನಾಗಿ ಹಾಗೂ ಸೆಕ್ಯೂರಿಟಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

ಡಿ.6ಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ನಾಲ್ವರು ದರೋ ಕೋರರು ಏಕಾಏಕಿ ಶೆಡ್‍ಗೆ ನುಗ್ಗಿ ದಂಪತಿಗೆ ಕಬ್ಬಿಣದ ರಾಡ್‍ನಿಂದ ಮುಖ ಮತ್ತು ಕೈ ಮೇಲೆ ಒಡೆದು ಅಭಿಷೇಕ್‍ನ ಮೊಬೈಲ್ ಹಾಗೂ ಆತನ ತಮ್ಮ ವಿಜಯ್‍ಕುಮಾರ್‍ನ ಮತ್ತೊಂದು ಮೊಬೈಲ್, ಇವರ ಜೊತೆ ಕೆಲಸ ಮಾಡುವ ಮಾರ್ಟಿನ್ ಎಂಬಾತನಿಗೆ ಸೇರಿದ ರೆಡ್ ಕಂಪನಿಯ ಮೊಬೈಲ್ ಫೋನ್‍ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ದೆಹಲಿಯಲ್ಲಿ ಖರ್ಗೆ ನೇತೃತ್ವದಲ್ಲಿ ನಡೆದ ಕರ್ನಾಟಕ ನಾಯಕರ ಸಭೆಯ ಸೀಕ್ರೆಟ್ ಬಿಚ್ಚಿಟ್ಟ ಕಾಂಗ್ರೆಸ್

ಈ ಬಗ್ಗೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಶ್ಚಿಮ ವಿಭಾಗದ ಉಪಪೊಲೀಸ್ ಆಯುಕ್ತರಾದ ಲಕ್ಷ್ಮಣ.ಬಿ ನಿಂಬರಗಿ ಅವರ ಮಾರ್ಗದರ್ಶನದಲ್ಲಿ ಕೆಂಗೇರಿ ಗೇಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕೋದಂಡರಾಮ್ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ಸಂಜೀವ ಗೌಡ ಅವರನ್ನೊಳಗೊಂಡ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡು ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Articles You Might Like

Share This Article