ಬೆಂಗಳೂರು, ಫೆ. 15- ಹುಟ್ಟು ಹಬ್ಬದ ಶುಭಾಶಯ ಹೇಳಲು ಬಂದು ಮನೆ ಪಾಠದ ಶಿಕ್ಷಕಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನದೀಮ್ ಪಾಷಾ ಬಂಧಿತ ಆರೋಪಿ. ಈತ ಈ ಮೊದಲು ಆಟೋ ಚಾಲಕ ವೃತ್ತಿ ಮಾಡುತ್ತಿದ್ದನು. ತದ ನಂತರ ಹೊರ ದೇಶಕ್ಕೆ ಹೋಗಿದ್ದು, ಪುನಃ ವಾಪಸ್ ಮರಳಿ ಬಂದು ಮೆಕಾನಿಕ್ ಕೆಲಸ ಮಾಡಿಕೊಂಡಿದ್ದಾನೆ.
ನಂಜಪ್ಪ ಸರ್ಕಲ್ ಸಮೀಪ ಕೌಸರ್ ಮುಬೀನ ವಾಸವಾಗಿದ್ದುಕೊಂಡು ಮನೆಯಲ್ಲಿ ಪಾಠ ಮಾಡುತ್ತಿದ್ದರು. ಕಳೆದ ಸೋಮವಾರ ಕೌಸರ್ ಅವರ ಹುಟ್ಟುಹಬ್ಬವಿತ್ತು. ಅಂದು ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ನದೀಮ್ ಶುಭಾಶಯ ಹೇಳಲು ಇವರ ಮನೆಗೆ ಬಂದಿದ್ದಾನೆ.
ಯಾವುದೋ ಸಣ್ಣ ವಿಚಾರಕ್ಕೆ ಇವರಿಬ್ಬರ ಮಧ್ಯೆ ಜಗಳವಾಗಿದೆ. ಆ ಸಂದರ್ಭದಲ್ಲಿ ಕೋಪಗೊಂಡ ನದೀಮ್ ಚಾಕುವಿನಿಂದ ಕೌಸರ್ಗೆ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದನು.
#Man, #arrested, #Killing, #Teacher,