ಬೆಂಗಳೂರು, ಡಿ.18- ಹಪ್ತಾ ಕೊಡುವಂತೆ ಲಾಂಗ್ ಬೀಸಿ ಮೀನಿನ ವ್ಯಾಪಾರಿಯನ್ನು ಬೆದರಿಸಿ ಪರಾರಿಯಾಗಿದ್ದ ಆರೋಪಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುದೇಶ್ ಬಂಧಿತ ಆರೋಪಿ.
ಬಾಣಸವಾಡಿಯ ಜೈಭಾರತ್ ನಗರದಲ್ಲಿ ಮೀನಿನ ಅಂಗಡಿ ಇಟ್ಟುಕೊಂಡಿರುವ ಮನೋಜ್ ವ್ಯಾಪಾರ ಮಾಡುತ್ತಿದ್ದಾಗ ಅಲ್ಲಿಗೆ ನಿನ್ನೆ ಸಂಜೆ ಬಂದಿದ್ದ ಸುದೇಶ್ , `ಎಲ್ಲಿಂದಲೋ ಬಂದು ಇಲ್ಲಿ ವ್ಯಾಪಾರ ಮಾಡುತ್ತಿದ್ದೀಯ ಮಗನೇ, ನನಗೆ ದುಡ್ಡು ಕೊಡದಿದ್ದರೆ ಸರಿಯಿರಲ್ಲ’ ಎಂದು ಲಾಂಗ್ನಿಂದ ಆತನ ಮೇಲೆ ಎರಗಿ ಬೆದರಿಸಿದ್ದಾನೆ.
ಆತ ನನ್ನ ಬಳಿ ಹಣವಿಲ್ಲ ಎಂದು ಹೇಳಿದರೂ ಕೂಡ ಕೇಳದೆ ಅಂಗಡಿಯಲ್ಲಿದ್ದ ವಸ್ತುಗಳನ್ನೆಲ್ಲಾ ಜಖಂ ಮಾಡಿ, `ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ನಿನ್ನ ಜೀವ ಸಹಿತ ಬಿಡೋದಿಲ್ಲ ‘ ಎಂದು ಬೆದರಿಕೆ ಹಾಕಿ ಹೋಗಿದ್ದ.
ಶ್ರದ್ದಾ ಮಾದರಿಯಲ್ಲಿ ಮತ್ತೆರಡು ಹತ್ಯೆ, ಸಮಾಜವನ್ನು ಬೆಚ್ಚಿಬೀಳಿಸುತ್ತಿರುವ ವಿಕೃತ ಕೊಲೆಗಳು..!
ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಈ ಘಟನೆ ಸರಿಯಾಗಿ ಸಾಮಾಜಿಕ ಜಾಣತಾಲದಲ್ಲಿ ಹರಿದಾಡಿತ್ತು. ಇದು ಪೊಲೀಸರಿಗೂ ತಿಳಿದು ತಕ್ಷಣ ಎಲ್ಲಿ ನಡೆದಿದೆ ಎಂದು ಪರಿಶೀಲಿಸಿದಾಗ ಬಾಣಸವಾಡಿಯ ಜೈಭಾರತ್ ನಗರ, 2ನೇ ಕ್ರಾಸ್ನ ಮೀನಿನ ಅಂಗಡಿಯಲ್ಲಿ ನಡೆದಿರುವುದು ಎಂದು ಗೊತ್ತಾಗಿತ್ತು.
ತಕ್ಷಣ ಅಲ್ಲಿಗೆ ಬಂದ ಬಾಣಸವಾಡಿ ಠಾಣೆ ಪೊಲೀಸರು ಮನೋಜ್ನನ್ನು ವಿಚಾರಿಸಿದಾಗ ಆತ ಭಯಪಟ್ಟು ತಿಳಿಸಲಿಲ್ಲ. ನಂತರ ಪೊಲೀಸರು ರಕ್ಷಣೆ ನೀಡುವ ಭರವಸೆ ನೀಡಿದ ನಂತರ ದೂರು ದಾಖಲಾಗಿದ್ದು, ಆರೋಪಿ ಸುದೇಶ್ನನ್ನು ಬಂಧಿಸಲಾಗಿದೆ.
ಈತನ ಮೇಲೆ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿಲ್ಲ. ಮತ್ತು ಅಪರಾಧ ಹಿನ್ನೆಲೆಯಿಲ್ಲ ಎಂದು ಸದ್ಯಕ್ಕೆ ತಿಳಿದು ಬಂದಿದೆ. ಆದರೂ ಪೊಲೀಸರು ಕೂಲಂಕುಶವಾಗಿ ಪರಿಶೀಲಿಸುತ್ತಿದ್ದಾರೆ.
#ManArrested, #threatening, #hafta,