ಪಾರ್ಶ್ವವಾಯುಪೀಡಿತ ಮಾವನನ್ನು ಬೆಂಕಿ ಹಚ್ಚಿ ಕೊಂದ ಅಳಿಯ

Social Share

ಮುಂಬೈ,ಫೆ.16- ಅಳಿಯನೇ ತನ್ನ ಪಾಶ್ರ್ವವಾಯು ಮಾವನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಗೊಂಡಿಯಾದಲ್ಲಿ ನಡೆದಿದೆ. ಘಟನೆಯಲ್ಲಿ ಆರೋಪಿ ಪತ್ನಿ ಹಾಗೂ ಐದು ವರ್ಷದ ಮಗನಿಗೂ ಸುಟ್ಟುಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿ, ಮಗನಿಗೆ ಬೆಂಕಿ ಹಚ್ಚಿ ಪಾಶ್ರ್ವವಾಯು ಪೀಡಿತ ಮಾವನನ್ನು ಸುಟ್ಟು ಹಾಕಿ ಕೊಂದಿರುವ ಪಾಪಿ ಅಳಿಯನನ್ನು ಕಿಶೋರ್ ಶೆಂಡೆ ಎಂದು ಗುರುತಿಸಲಾಗಿದೆ. ಶೆಂಡೆಯ ಪೈಶಾಚಿಕ ಕೃತ್ಯದಿಂದಾಗಿ ಆತನ ಪತ್ನಿ ಹಾಗೂ ಮಗುವಿಗೆ ಶೇ.80ರಷ್ಟು ಸುಟ್ಟಗಾಯಗಳಾಗಿದ್ದು ಅವರು ಬದುಕುಳಿಯುವ ಸಾಧ್ಯತೆಗಳು ಕ್ಷೀಣಿಸಿವೆ ಎನ್ನಲಾಗಿದೆ.

ಪತ್ನಿ ಆರತಿ ಶೆಂಡೆ ಅವರೊಂದಿಗೆ ಮುನಿಸಿಕೊಂಡಿದ್ದ ಶೆಂಡೆ ಒಂದು ತಿಂಗಳಿನಿಂದ ಸೂರ್ಯತೋಲಾ ಪ್ರದೇಶದಲ್ಲಿರುವ ತಮ್ಮ ತಂದೆ ಅವರ ಮನೆಯಲ್ಲಿ ವಾಸವಾಗಿದ್ದ ಎನ್ನಲಾಗಿದೆ.

ತಂದೆ ಮನೆಯಿಂದ ಮಧ್ಯರಾತ್ರಿ 12.30ರ ಸಮಯದಲ್ಲಿ ಪತ್ನಿ ಮತ್ತು ಮಕ್ಕಳನ್ನು ಭೇಟಿಯಾಗಲು ಬಂದಿದ್ದ ಆರೋಪಿ ಪತ್ನಿ ಜತೆ ಜಗಳ ತೆಗೆದು ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಆ ಸಂದರ್ಭದಲ್ಲಿ ಆತನ ಮಗನಿಗೂ ಬೆಂಕಿ ಹಚ್ಚಿಕೊಂಡಿದೆ. ಆದರೆ, ಅವರು ಕಿರುಚಿಕೊಂಡು ಹೊರ ಹೋದದ್ದರಿಂದ ಅಕ್ಕಪಕ್ಕದವರು ಅವರನ್ನು ಪ್ರಾಣಾಪಾಯದಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಪಾಪಿ ಶೆಂಡೆ ಪಾಶ್ರ್ವವಾಯು ಪೀಡಿತರಾಗಿ ಮ ನೆಯಲ್ಲಿ ಮಲಗಿದ್ದ ಮಾವನ ಮೇಲೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರಿಂದ ಆವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿಸಿರುವ ರಾಮನಗರ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

#Man, #burns, #fatherinlaw, #killed,

Articles You Might Like

Share This Article