ಜಮ್ಮು, ಸೆ.19 – ಚಲಿಸುತ್ತಿದ್ದ ಟ್ರಕ್‍ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕ್ಲೀನರ್ ಸಜೀವವಾಗಿ ದಹನಗೊಂಡು ಬಾಲಕ ಗಂಬೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ಕಥುವಾ ಜಿಲ್ಲೆಯ ಜಮ್ಮು-ಪಠಾಣ್ಕೋಟ್ ರಾಷ್ಟ್ರೀಯ ಹೆದ್ದಾರಿಯಲಿ ್ಲ ಇಂದು ಬೆಳಿಗ್ಗೆ ನಡೆದಿದೆ.
ಜಮ್ಮು ಕಡೆಗೆ ಹೋಗುತ್ತಿದ್ದಾಗ ವಾಹನದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ ಅಪಾಯ ಅರಿತ ಚಾಲಕ ಹೊರಗೆ ಹಾರಿ ತನ್ನನ್ನು ರಕ್ಷಿಸಿಕೊಂಡರಾದರೂ, ಸಹಾಯಕ ವಾಹನದಿಂದ ಹೊರಬರಲು ವಿಫಲನಾಗಿದ್ದಾನೆ. ಗಾಳಿಯ ರಭಸಕ್ಕೆ ಬೆಂಕಿ ಬೇಗನೆ ಸಂಪೂರ್ಣ ವಾಹನ ದಗದಗನೆ ಉರಿಯಲಾರಂಭಿಸಿ ಸಹಾಯಕ ಸಜೀವವಾಗಿ ಸುಟ್ಟುಹೊಗಿದ್ದಾನೆ ಎಂದು ಪೊಲೀಸರು ಹೇಳಿದರು.
ಅಗ್ನಿಶಾಮಕ ಸಿಬ್ಬಂಧಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ, ಮೃತನ ವಿವರ ತಿಳಿದು ಬಂದಿಲ್ಲ ಘಟನೆಗೆ ನಿಕರ ಕಾರಂಕುರಿತು ಅವರು ತನಿಖೆಯನ್ನು ನಡೆಸಲಾಗಿತ್ತಿಸದೆ ಎಂದು ತಿಳಿಸಿದರು.