ಡೈಪರ್‌ನಲ್ಲಿ ಅಡಗಿಸಿಟ್ಟು ಚಿನ್ನ ಕಳ್ಳ ಸಾಗಾಣಿಕೆ

Social Share

ಮಂಗಳೂರು,ಮಾ.18- ವಿದೇಶದಿಂದ ಚಿನ್ನವನ್ನು ಕಳ್ಳ ಸಾಗಾಣಿಕೆ ಮೂಲಕ ತರಲು ನಾನಾ ರೀತಿಯ ಪ್ರಯತ್ನಗಳು ನಡೆಯುತ್ತಲೇ ಇವೆ. ಸುಮಾರು ಎರಡು ವರ್ಷದ ಮಗುವಿನ ಡೈಪರ್‌ನಲ್ಲಿ ಹಳದಿ ಲೋಹವನ್ನು ಅಡಗಿಸಿಟ್ಟು ಸಾಗಾಣಿಕೆ ಮಾಡುವಾಗ ವ್ಯಕ್ತಿಯೊಬ್ಬರು ಸಿಕ್ಕಿ ಬಿದಿದ್ದಾರೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನಕ್ಕೆ ಬಂದಿಳಿದ ಪುರುಷ ಪ್ರಯಾಣಿಕನೊಬ್ಬ ತನ್ನ 21 ತಿಂಗಳ ಮಗಳ ಡೈಪರ್‌ನಲ್ಲಿ ಚಿನ್ನವನ್ನು ಬಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ. ದ್ರಾವಕ ರೂಪದಲ್ಲಿದ್ದ ಚಿನ್ನವನ್ನು ಡೈಪರ್‍ನ ಮಡಿಕೆಗಳಲ್ಲಿ ಅಡಗಿಸಿಡಲಾಗಿತ್ತು. ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಪತ್ತೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಒಂದೇ ಮಳೆಗೆ ಮುಳುಗಿದ ದಶಪಥ ಹೆದ್ದಾರಿ, ಸರಣಿ ಅಪಘಾತ, ರೊಚ್ಚಿಗೆದ್ದ ಜನ

ಮತ್ತೊಂದು ಪ್ರಕರಣದಲ್ಲಿ ಪುರುಷ ಪ್ರಯಾಣಿಕನೊಬ್ಬ ದ್ರಾವಕ ರೂಪದ ಚಿನ್ನವನ್ನು ಬೆಲ್ಟ್‍ನಲ್ಲಿ ಅಡಗಿಸಿಟ್ಟು ಸೋಂಟಕ್ಕೆ ಕಟ್ಟಿಕೊಂಡು ಕಳ್ಳ ಸಾಗಾಣಿಕೆ ಮೂಲಕ ತಂದಿದ್ದರು. ಮತ್ತೊಬ್ಬ ವ್ಯಕ್ತಿ ಗುದನಾಳದಲ್ಲಿ ದ್ರಾವಕ ರೂಪದ ಚಿನ್ನವನ್ನು ಬಚ್ಚಿಟ್ಟು ತರುವ ಪ್ರಯತ್ನ ಮಾಡಿದ್ದಾರೆ.

ಈ ರೀತಿಯ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಮಾರ್ಚ್ 1ರಿಂದ 15ರ ವರೆಗೆ 90.67 ಲಕ್ಷ ರೂಪಾಯಿ ಮೌಲ್ಯದ 1,606 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಿದ್ದರಾಮಯ್ಯ ದಮ್ಮು, ತಾಕತ್ತಿಗೆ ವರ್ತೂರು ಪ್ರಕಾಶ್ ಸವಾಲ್

ಮೂವರು ಪ್ರಯಾಣಿಕರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಲಾಗಿದೆ.

Man, caught, smuggling, gold, inside, child, diaper,

Articles You Might Like

Share This Article