ಆನ್‍ಲೈನ್ ಆರ್ಡರ್‌ನಲ್ಲಿ ಬಂದ ಬ್ರೆಡ್‍ನಲ್ಲಿತ್ತು ಇಲಿಮರಿ

Social Share

ನವದೆಹಲಿ,ಫೆ.11- ಸ್ವಿಗ್ಗಿ, ಬಿಗ್‍ಬಾಸ್ಕೆಟ್ ಮತ್ತಿತರ ತ್ವರಿತ ಆನ್‍ಲೈನ್ ಡೆಲಿವರಿ ಆಪ್‍ಗಳಿಂದ ತಿಂಡಿ, ತಿನಿಸು, ದಿನಸಿ ಮತ್ತಿತರ ವಸ್ತುಗಳನ್ನು ತರಿಸುವ ಗ್ರಾಹಕರೇ ಇನ್ನು ಮುಂದೆ ಹುಷಾರಾಗಿರಿ ಏಕೆಂದರೆ ನೀವು ಆರ್ಡರ್ ಮಾಡುವ ತಿಂಡಿ ತಿನಿಸಿನೊಂದಿಗೆ ಇಲಿ ಬಂದರೂ ಅಚ್ಚರಿಪಡುವಂತಿಲ್ಲ! ಹೇಗೆ ಅಂತೀರಾ ಈ ಸುದ್ದಿ ಓದಿ ನೋಡಿ…

ನಿತಿನ್ ಅರೋರಾ ಎಂಬ ವ್ಯಕ್ತಿಯೊಬ್ಬರು ಬ್ಲಿಂಕಿಟ್ ಆಪ್ ಮೂಲಕ ಆರ್ಡರ್ ಮಾಡಿದ್ದ ಬ್ರೆಡ್ ಪ್ಯಾಕೆಟ್‍ನಲ್ಲಿ ಜೀವಂತ ಇಲಿಯೊಂದು ಪ್ರತ್ಯಕ್ಷವಾಗಿದೆ. ತಾವು ತರಿಸಿದ್ದ ಬ್ರೆಡ್ ಪ್ಯಾಕೆಟ್‍ನಲ್ಲಿ ಜೀವಂತ ಇಲಿ ಓಡಾಡಿಕೊಂಡಿರುವ ದೃಶ್ಯವನ್ನು ಅರೋರಾ ಅವರು ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ.

ಫೆ.1 ರಂದು ಅರೋರಾ ಅವರು ಬ್ಲಿಂಕಿಟ್ ಆಪ್ ಮೂಲಕ ಬ್ರೆಡ್ ಆರ್ಡರ್ ಮಾಡಿದ್ದರು. 10 ನಿಮಿಷಗಳ ನಂತರ ಬಂದ ಡೆಲಿವರಿ ಬಾಯ್ ಬ್ರೆಡ್ ಪ್ಯಾಕೆಟ್ ನೀಡಿ ಹೋದ. ಹಸಿವಿನಿಂದ ಕಂಗಲಾಗಿದ್ದ ಅರೋರಾ ತಿನ್ನಲು ಬ್ರೆಡ್ ಪ್ಯಾಕೆಟ್ ಕೈಗೆತ್ತಿಕೊಂಡಾಗ ಪ್ಯಾಕೆಟ್ ಒಳಗೆ ಏನೋ ಓಡಾಡಿದ ಅನುಭವವಾಯಿತು.

ಟ್ರಾಫಿಕ್ ದಂಡ ಪಾವತಿಗೆ ಇಂದೇ ಕೊನೆ , 100 ಕೋಟಿ ಸಂಗ್ರಹ ನಿರೀಕ್ಷೆ

ಕೂಡಲೆ ಅದನ್ನು ಪರಿಶೀಲಿಸಿದಾಗ ಇಲಿ ಮರಿಯೊಂದು ಪ್ಯಾಕೆಟ್‍ನಲ್ಲಿ ಓಡಾಡಿಕೊಂಡಿರುವುದು
ಕಂಡುಬಂತು. ತಕ್ಷಣ ಆ ದೃಶ್ಯವನ್ನು ಸೆರೆಹಿಡಿದ ಅರೋರಾ ಅವರು ಅದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೆÇೀಸ್ಟ್ ಮಾಡಿರುವುದೇ ಅಲ್ಲದೆ, ತಿನ್ನುವ ವಸ್ತುಗಳನ್ನು ಆಪ್‍ಗಳ ಮೂಲಕ ತರಿಸಿಕೊಳ್ಳುವುದಕ್ಕಿಂತ ನಾವೇ ಖುದ್ದು ಹೋಗಿ ಕೆಲ ಗಂಟೆಗಳ ಕಾಲ ಕಾದು ತರುವುದು ಸೂಕ್ತ ಎಂಬ ಶೀರ್ಷಿಕೆ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಬ್ಲಿಂಕಿಟ್ ಸಂಸ್ಥೆಯು ಅರೋರಾ ಅವರ ಕ್ಷಮೆ ಯಾಚಿಸಿದೆ. ಮಾತ್ರವಲ್ಲ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವ ಭರವಸೆ ನೀಡಿದೆ.

Man, Finds, Rat, Trapped, Inside, Bread Packet ,Ordered, Blinkit,

Articles You Might Like

Share This Article