ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಅಪರಾಧಿಗೆ 8 ವರ್ಷ ಕಠಿಣ ಶಿಕ್ಷೆ

Social Share

ತಿರುವನಂತಪುರಂ,ಜ.21- ಮದುವೆಯಾಗುವ ಭರವಸೆಯೊಂದಿಗೆ 14 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಇಲ್ಲಿನ ಶೀಘ್ರ ವಿಲೇವಾರಿ ನ್ಯಾಯಾಲಯ ಎಂಟು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

ವಟ್ಟಿಯೂರುಕಾವು ನಿವಾಸಿ 28 ವರ್ಷದ ಲಾಲ್ ಪ್ರಕಾಶ್ ಶಿಕ್ಷೆಗೆ ಗುರಿಯಾದ ಅಪರಾಧಿ. ಪ್ರಾಸಿಕ್ಯೂಷನ್ ಪ್ರಕಾರ, 2013ರಲ್ಲಿ ಆರೋಪಿ ಪ್ರಕಾಶ್ 14 ವರ್ಷದ ಬಾಲಕಿಯನ್ನು ಬಲೆಗೆ ಬೀಳಿಸಿಕೊಂಡು ಸ್ನೇಹಿತನ ಮನೆಗೆ ಕರೆದುಕೊಂಡು ಹೋಗಿದ್ದು, ಅತ್ಯಾಚಾರ ಎಸಗಿದ್ದ. ನಂತರ ಬಾಲಕಿಗೆ ತನ್ನ ಕುಟುಂಬದ ಸದಸ್ಯರನ್ನು ಸಂಪರ್ಕಿಸಲು ಅವಕಾಶ ನೀಡಿರಲಿಲ್ಲ.

ಎರಡು ವಾರಗಳ ನಂತರ ಆಕೆ ಫೋನ್ ಮೂಲಕ ಮನೆಯವರನ್ನು ಸಂಪರ್ಕಿಸಿದಾಗ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಮಾಸ್ಕೋದಿಂದ ಗೋವಾಕ್ಕೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ

ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯದ ನ್ಯಾಯಾೀಶ ಆಜ್ ಸುಧರಶನ್ ಪ್ರಕರಣದಲ್ಲಿ 26 ಸಾಕ್ಷಿಗಳು, 21 ದಾಖಲೆಗಳು ಮತ್ತು 19 ಇತರ ಸಾಕ್ಷ್ಯಗಳನ್ನು ಪರಿಶೀಲಿಸಿದ್ದಾರೆ. ಸುಳ್ಳು ಭರವಸೆ ಮೂಲಕ ಅಪ್ರಾಪ್ತಳನ್ನು ದುರುಪಯೋಗ ಪಡಿಸಿಕೊಂಡ ಆರೋಪದಲ್ಲಿ ಪ್ರಕಾಶ್ ದೋಷಿ ಎಂದು ಘೋಷಿಸಿದ್ದಾರೆ.

ಹೈಟೆನ್ಷನ್ ಲೈನ್ ಬಳಿ ಮನೆ ಕಟ್ಟಿಕೊಂಡಿರುವವರಿಗೆ ಶುರುವಾಯ್ತು ನಡುಕ

ಆತನಿಗೆ 8 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 25,000 ರೂಪಾಯಿ ದಂಡವನ್ನು ವಿಧಿಸಿ ತೀರ್ಪು ನೀಡಿದ್ದಾರೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆರ್ ಎಸ್ ವಿಜಯ್ ಮೋಹನ್ ತಿಳಿಸಿದ್ದಾರೆ.

Man, gets, 8yr, jail, raping, girl,

Articles You Might Like

Share This Article